

ಮಂಡ್ಯ: ಮುಂಬೈನ ಪುಣೆಯಲ್ಲಿ ಮೃತಪಟ್ಟ ಮಂಡ್ಯದ ಮಹಿಳೆಯ ಅಂತ್ಯ ಸಂಸ್ಕಾರಕ್ಕೆ ಅವರ ಕುಟುಂಬದವರು ತೀವ್ರ ಪರದಾಡುವಂತಾಯಿತು.
ಸೌಮ್ಯಾ ಎಂಬುವರು ಮೂಲತಃ ಮಂಡ್ಯದವರು. ಇವರು ಪುಣೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಅಂತ್ಯಕ್ರಿಯೆಗೆಂದು ಊರಿಗೆ ಮೃತದೇಹ ತೆಗೆದುಕೊಂಡು ಬಂದರೆ ಮಂಡ್ಯ ಪ್ರವೇಶ ಮಾಡಲು ಇಲ್ಲಿನ ಜಿಲ್ಲಾಡಳಿತ ಬಿಡಲಿಲ್ಲ. ಆಕೆಯ ಶವಕ್ಕೆ ಕರೊನಾ ತಪಾಸಣೆ ಮಾಡಿಸದ ಕಾರಣ, ಜಿಲ್ಲೆಗೆ ಪ್ರವೇಶ ಮಾಡಲು ಕೊನೆಗೂ ಅವಕಾಶ ಕೊಡಲೇ ಇಲ್ಲ.
ಇದರಿಂದಾಗಿ ಸೌಮ್ಯಾ ಮೃತದೇಹಕ್ಕೆ ನಿಪ್ಪಾಣಿ ಗಡಿಯಲ್ಲಿ ಅಂತಿಮ ಸಂಸ್ಕಾರ ಮಾಡಲಾಯಿತು. ಬೆಳಗಾವಿ ಜಿಲ್ಲಾಡಳಿತ ಮತ್ತು ಪೊಲೀಸರು ನೇತೃತ್ವ ವಹಿಸಿ ನಿಪ್ಪಾಣಿ ಗಡಿಯ ಕುಗನೊಳ್ಳಿ ಬಳಿಯ ದೂಧಗಂಗಾ ನದಿ ಪಕ್ಕದಲ್ಲಿ ಅಂತಿಮ ವಿಧಿವಿಧಾನ ನೆರವೇರಿಸಿದರು.
ಸೌಮ್ಯಾ ಅವರ ಶವವನ್ನು ಅಂತ್ಯ ಸಂಸ್ಕಾರ ಮಾಡಲಾಗದೆ ಅವರ ಪತಿ ಶರತ್, ಮಗಳು ಶ್ವೇತಾ (5) ಒಂದು ದಿನ ಪರದಾಡಿದ್ದರು. ಆದರೂ ಮಂಡ್ಯ ಜಿಲ್ಲಾಡಳಿತದಿಂದ ಸ್ಪಂದನೆ ಸಿಗಲಿಲ್ಲ ಎನ್ನಲಾಗಿದೆ. (ದಿಗ್ವಿಜಯ ನ್ಯೂಸ್)