

ಟೆಕ್ಸಾಸ್: ಇಲ್ಲೊಬ್ಬ ಮಹಿಳೆ ಬರೋಬ್ಬರಿ 30 ವರ್ಷಗಳ ನಂತರ ತನ್ನ ಕೈ ಬೆರಳುಗಳ ಉಗುರನ್ನು ಕತ್ತರಿಸಿ ಸುದ್ದಿಯಾಗಿದ್ದಾರೆ.
ಹೌದು, ಅಮೆರಿಕದ ಟೆಕ್ಸಾಸ್ನ 45 ವರ್ಷದ ಆಯನಾ ವಿಲಿಯಮ್ಸ್ ಎನ್ನುವರು ತಮ್ಮ ಎರಡು ಕೈ ಬೆರಳುಗಳ ಉಗುರುಗಳನ್ನು ಸತತ 30 ವರ್ಷಗಳಿಂದ ಕತ್ತರಿಸದೇ 22 ಅಡಿ ಬೆಳೆಸಿದ್ದರು. ಅವರ ಈ ಸಾಧನೆ 2017 ರಲ್ಲಿ ಗಿನ್ನಿಸ್ ದಾಖಲೆ ಕೂಡ ನಿರ್ಮಿಸಿತ್ತು. ಆಯನಾ ಅವರು ಇದೀಗ ತಮ್ಮ ಉಗುರುಗಳನ್ನು ಕತ್ತರಿಸಿದ್ದಾರೆ.
ಆಯನಾ ತಮ್ಮ ಉಗುರುಗಳನ್ನು ಕತ್ತರಿಸಿರುವ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ. 2017 ರಲ್ಲಿ 18 ಅಡಿ ಉಗುರು ಬೆಳೆದಿದ್ದಾಗ ಗಿನ್ನಿಸ್ ದಾಖಲೆ ಆಗಿತ್ತು. ಈಗ ಮತ್ತೊಮ್ಮೆ ಅಳತೆ ಮಾಡಿದಾಗ 22 ಅಡಿ ಬೆಳೆದಿವೆ. ಮತ್ತೊಮ್ಮೆ ತಮ್ಮದೇ ದಾಖಲೆ ಮುರಿದ ಆಯಾನಾ ಅಂತೂ ಉಗುರುಗಳಿಗೆ ಕತ್ತರಿ ಹಾಕಿದ್ದಾರೆ.
ಆಶ್ಚರ್ಯ ಎಂದರೆ ಇ ಉಗುರುಗಳಿಗೆ ಬಣ್ಣ ಹಾಕಲು ಎರಡು ಲೀಟ್ರ್ ಎರಡು ಡಬ್ಬಿ ಬೇಕಾಗುತ್ತಿತ್ತಂತೆ.