More

    Video: ಶಾಪಿಂಗ್ ಮಾಡಲು ಸೂಪರ್​ ಮಾರ್ಕೆಟ್​ಗೆ ಬಂದ ದೈತ್ಯ ಪ್ರಾಣಿ!

    ಬ್ಯಾಂಕಾಂಕ್: ನೀವು ಶಾಪಿಂಗ್ ಮಾಲ್​ಗೆ ಹೋದಾಗ ಅಥವಾ ಸೂಪರ್ ಮಾರ್ಕೆಟ್​ಗೆ ಹೋದಾಗ ಯಾವುದಾದರೂ ದೈತ್ಯ ಪ್ರಾಣಿ ಅಲ್ಲಿಗೆ ಎಂಟ್ರಿ ಕೊಟ್ಟರೆ ಹೇಗಿರುತ್ತೆ ಅಲ್ವಾ? ಅದನ್ನು ಊಹೆ ಮಾಡಿಕೊಂಡ್ರೆನೆ ಭಯ ಆಗುತ್ತೆ.

    ಇಂತಹದೇ ನಿಜ ಘಟನೆ ಥೈಲ್ಯಾಂಡ್​ನಲ್ಲಿ ನಡೆದಿದೆ. ಸೂಪರ್​ ಮಾರ್ಕೆಟ್​ ಒಂದಕ್ಕೆ ದೈತ್ಯ ಗಾತ್ರದ ಹಲ್ಲಿ ಯೊಂದು (Asian Water Monitor Lizard) ಬಂದು ಅಚ್ಚರಿ ಮೂಡಿಸಿದೆ. ಬ್ಯಾಂಕಾಂಕ್​ ಹೊರವಲಯದ ಸೂಪರ್​ ಮಾರುಕಟ್ಟೆಯಲ್ಲಿ ನಡೆದ ಘಟನೆ ಇದಾಗಿದೆ. ಆದರೆ ಯಾವಾಗ ನಡೆದಿದ್ದು ಎಂಬುದು ಬಹಿರಂಗವಾಗಿಲ್ಲ. ಸೋಷಿಯಲ್ ಮೀಡಿಯಾಗಳಲ್ಲಿ ಸಕತ್ ವೈರಲ್ ಆಗಿದೆ.

    ಸೂಪರ್​ ಮಾರ್ಕೆಟ್​ನಲ್ಲಿ ಹಲ್ಲಿ ತನ್ನ ಆರ್ಭಟ ತೋರಿಸಿದೆ. ಅಲ್ಲಿದ್ದ ಸಾಮಾನುಗಳನ್ನು ಜೋಡಿಸಿಟ್ಟಿದ್ದ ರಾಕ್​ನ ಮೇಲೆ ಅಲೆದಾಡಿ ಕಡೆಗೆ ಅಲ್ಲಿಯೇ ಕುಳಿತುಕೊಂಡಿದೆ. ಸ್ಥಳದಲ್ಲಿದ್ದವರು ಈ ಬೃಹತ್ ಹಲ್ಲಿಯನ್ನು ನೋಡಿ ಕೂಗಾಡಿದ್ದಲ್ಲದೇ ವಿಡಿಯೋ ಮಾಡಿಕೊಂಡಿದ್ದಾರೆ. ಕಡೆಗೆ ಪ್ರಾಣಿ ಸಂಗ್ರಾಹಲಯದವರು ಅದನ್ನು ಬಂಧಿಸಿ, ಜೂನಲ್ಲಿ ಇಟ್ಟಿದ್ದಾರೆ.

    ಚಾಣಕ್ಯನ ಈ ನೀತಿಯನ್ನು ಅನುಸರಿಸಿದರೆ ನಿಮಗೆಂದೂ ಸೋಲಿನ ಅನುಭವ ಆಗುವುದೇ ಇಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts