More

    400 ಗಂಡಸರ ಪ್ರಪೋಸ್ ರಿಜೆಕ್ಟ್​​ ಮಾಡಿ ನಿಜವಾದ ಪ್ರೀತಿ ಸಿಕ್ಕಿಲ್ಲವೆಂದ 55 ವರ್ಷದ ಮಹಿಳೆ

    ನವದೆಹಲಿ:  ಎಲ್ಲರಿಗೂ ನಿಜವಾದ ಪ್ರೀತಿ ಸಿಗುವುದಿಲ್ಲ. ಆದರೆ ಇವತ್ತಲ್ಲ ನಾಳೆ ನಿಜವಾದ ಪ್ರೀತಿಯನ್ನು ಕಂಡುಕೊಳ್ಳುತ್ತೇವೆ ಎನ್ನುವ ಭರವಸೆಯಲ್ಲಿ ತಮ್ಮ ಜೀವನವನ್ನು ನಡೆಸುವ ಅನೇಕ ಜನರು ಈ ಜಗತ್ತಿನಲ್ಲಿದ್ದಾರೆ. 55 ವರ್ಷದ ಮಹಿಳೆ ತನ್ನ ಕುಟುಂಬವನ್ನು ಪ್ರಾರಂಭಿಸುವ ನಿರ್ಧರಿಸಿದ್ದು, 400ಕ್ಕೂ ಹೆಚ್ಚು ಪುರುಷರ ಪ್ರಪೋಸಲ್​ ಬಂದಿದ್ದರು ಒಂಟಿಯಾಗಿ ಜೀವನ ನಡೆಸುತ್ತಿದ್ದಾರೆ.

    ಎಷ್ಟೇ ಹುಡುಕಿದರೂ ಕೆಲವು ಯುವತಿ, ಯುವಕರಿಗೆ ತಮ್ಮ ಆಯ್ಕೆಯ ಸಂಗಾತಿ ಸಿಗುವುದಿಲ್ಲ. ಸದ್ಯ ಮಹಿಳೆಯೊಬ್ಬರು 400 ಪ್ರಪೋಸ್​​ಗಳನ್ನು ರಿಜೆಕ್ಟ್​​ ಮಾಡಿ 55ರ ಹರೆಯದಲ್ಲೂ ನಿಜವಾದ ಪ್ರೀತಿಯನ್ನು ಹುಡುಕುತ್ತಿದ್ದೇನೆಂದು ಹೇಳಿರುವುದು ಸಖತ್​ ಸುದ್ದಿಯಲ್ಲಿದೆ.

    ಮಹಿಳೆಯ ಹೆಸರು ಫ್ರಾನ್ ಸಾಯರ್. ವಿಚ್ಛೇದಿತೆ ಮತ್ತು ಒಂಟಿ ತಾಯಿ. 55 ವರ್ಷದ ಈ ಮಹಿಳೆಗೆ ಇಲ್ಲಿಯವರೆಗೆ 400 ಕ್ಕೂ ಹೆಚ್ಚು ಪುರುಷರು ಪ್ರಪೋಸ್​​ ಮಾಡಿರುವ ಕುರಿತಾಗಿ ಹೇಳಿಕೊಂಡಿದ್ದಾರೆ. ಆದರೆ ಅವರೆಲ್ಲರಿಗೂ ಬೇಡ ಎಂದು ಹೇಳಿ ನಿಜವಾದ ಪ್ರೀತಿಯನ್ನು ಹುಡುಕುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

    ಮಹಿಳೆಯ ಹೆಸರು ಫ್ರಾನ್ ಸಾಯರ್ ಮಾತನಾಡಿ, ನನಗೆ ಪ್ರಪೋಸ್ 400 ಮದುವೆ ಪ್ರಸ್ತಾಪಗಳು ಬಂದಿದ್ದವು. ಆದರೆ ಎಲ್ಲರೂ 18ರ ಹರೆಯದ ಹುಡುಗರಿಂದ 35-40 ವರ್ಷದೊಳಗಿನ ಗಂಡಸರು, ಮುದುಕರು ಇದ್ದಾರೆ. ಆದರೆ 18-21 ವರ್ಷದ ಹುಡುಗರು ಸಂಬಂಧವನ್ನು ಹೊಂದಲು ಬಯಸುತ್ತಾರೆ, ಆದರೆ ಪ್ರೀತಿಸುವುದಿಲ್ಲ.  ಮಿಸ್ಟರ್ ರೈಟ್ ಅನ್ನು ಹುಡುಕಲು ಹಲವಾರು ಆನ್‌ಲೈನ್ ಡೇಟಿಂಗ್ ಅಪ್ಲಿಕೇಶನ್‌ಗಳನ್ನು ಸಹ ಪ್ರಯತ್ನಿಸಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಆರಂಭದಲ್ಲಿ ಎಲ್ಲಾ ಪುರುಷರು ಸರಿಯಾಗಿ ಮಾತನಾಡುತ್ತಾರೆ. ಆದರೆ ಕೆಲವೇ ದಿನಗಳಲ್ಲಿ ಅವರ ಅಭಿವ್ಯಕ್ತಿಗಳು ಬದಲಾಗುತ್ತವೆ ಎಂದು ಅವರು ಹೇಳಿದರು.

    ಕೆಲವರು ಮಾತನಾಡುವ ರೀತಿಯಲ್ಲಿ, ಅವರು ತಮ್ಮೊಂದಿಗೆ ಹೆಚ್ಚು ಕಾಲ ಸಂಬಂಧವನ್ನು ಮುಂದುವರಿಸುವ ಮನಸ್ಥಿತಿಯಲ್ಲಿಲ್ಲ ಎಂದು ಅರ್ಥಮಾಡಿಕೊಂಡಿದ್ದೇನೆ. ಅಂತಹ ಪರಿಸ್ಥಿತಿಯಲ್ಲಿ, ಸಂಬಂಧದಿಂದ ಹಿಂದೆ ಸರಿಯಬೇಕಾಗುತ್ತದೆ ಎಂದು ಫ್ರಾನ್ ಬಹಿರಂಗಪಡಿಸಿದರು.

     ಇತರರ ಭಾವನೆಗಳನ್ನು ಗೌರವಿಸದಿರುವವರು ಒಂದು ದಿನ ನಿಜವಾದ ಪ್ರೀತಿಯನ್ನು ನಾಶಪಡಿಸುತ್ತಾರೆ ಎಂದು ಸಾಮಾಜಿಕ ಮಾಧ್ಯಮಗಳು ನೆಟ್ಟಿಗರು ಹೇಳುತ್ತಿದ್ದಾರೆ.

    ಒಗ್ಗರಣೆ ಮಿರ್ಚಿ ಕೊಡಲು ತಡವಾಗಿದ್ದಕ್ಕೆ  ಹೋಟೆಲ್​​ ಮಾಲೀಕನ ಮೇಲೆ ಬಿಸಿ ಎಣ್ಣೆ ಎರಚಿದ ಗ್ರಾಹಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts