ಬಾಡಿಗೆ ತಾಯ್ತನಕ್ಕೆ ಒಪ್ಪಿದ್ದ ಮಹಿಳೆ ಸಾವು; ಪತಿಯ ಆರೋಪದ ಬೆನ್ನಲ್ಲೇ ಮಾನವ ಹಕ್ಕುಗಳ ಆಯೋಗದಿಂದ ತನಿಖೆ ಶುರು | Surrogacy

Surrogacy
Published on

ಹೈದರಾಬಾದ್​: ಬಾಡಿಗೆ ತಾಯ್ತನ (Surrogacy) ಮಾಡುತ್ತಿದ್ದ ಮಹಿಳೆಯೊಬ್ಬಳು ಇಲ್ಲಿನ ರಾಯದುರ್ಗ ಪ್ರಾಂತ್ಯದಲ್ಲಿರುವ ಅಪಾರ್ಟ್​ಮೆಂಟ್​ನಿಂದ ಜಾರಿಬಿದ್ದು ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್​ಎಚ್​ಆರ್​ಸಿ) ಸ್ವಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ.

ಒಡಿಸ್ಸಾ ಮೂಲದ 25 ವರ್ಷದ ಯುವತಿಯನ್ನು ತನ್ನ ಪತಿಯೊಂದಿಗೆ ಮಧ್ಯವರ್ತಿಗಳು ಒಪ್ಪಂದದ ಮೇರೆಗೆ ಹೈದರಾಬಾದ್​ಗೆ ಕರೆದುಕೊಂಡು ಬಂದಿದ್ದರು ಎಂದು ಎನ್​ಎಚ್​ಆರ್​ಸಿ ಉಲ್ಲೇಖಿಸಿದೆ.

ಮಾನವ ಹಕ್ಕುಗಳ ಆಯೋಗವು ರಾಜ್ಯ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್​ ಮಹಾನಿರ್ದೇಶಕರಿಗೆ ನೋಟಿಸ್​ ಜಾರಿ ಮಾಡಿದ್ದು, ಎರಡು ವಾರಗಳಲ್ಲಿ ಪ್ರಕರಣದ ವಿವರವಾದ ವರದಿಯನ್ನು ಸಲ್ಲಿಸುವಂತೆ ಸೂಚಿಸಿದೆ. ಅಲ್ಲದೆ, ಬಾಡಿಗೆ ತಾಯ್ತನದ ನೆಪದಲ್ಲಿ ಮಹಿಳೆಯರಿಗೆ ಕಿರುಕುಳ ನೀಡುತ್ತಿರುವ ಪ್ರಕರಣಗಳ ಸ್ಥಿತಿ ಮತ್ತು ವರದಿಯಾದ ಇಂತಹ ಘಟನೆಗಳ ಕುರಿತು ಸಂಪೂರ್ಣ ಮಾಹಿತಿ ಒಳಗೊಂಡಿರಬೇಕು ಎಂದು ಒತ್ತಾಯಿಸಿದೆ.

ಪ್ರಕರಣದ ಹಿನ್ನೆಲೆ..

ಸ್ಥಳೀಯ ವರದಿಗಳ ಪ್ರಕಾರ, ತನ್ನ ಪತಿಯೊಂದಿಗೆ ಹೈದರಾಬಾದ್​ಗೆ ಬಂದು 10 ಲಕ್ಷ ರೂ.ಗೆ ಬಾಡಿಗೆ ತಾಯ್ತನ ಮಾಡುವುದಾಗಿ ಒಪ್ಪಂದ ಮಾಡಿಕೊಂಡಿದ್ದರು. ಒಪ್ಪದಂತೆ ರಾಯದುರ್ಗದ ಬಹು ಮಹಡಿ ಕಟ್ಟಡದ ಪ್ರತ್ಯೇಕ ಮನೆಯೊಂದರಲ್ಲಿ ಏಕಾಂಗಿ ಆಗಿ ಇದ್ದಾರೆ. ನ.26 ರಂದು ಅಪಾರ್ಟ್​ಮೆಂಟ್​ನಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿತ್ತು.

ಆದರೆ, ಬಹುಮಹಡಿ ಕಟ್ಟಡವನ್ನು ಪೊಲೀಸರು ಪರಿಶೀಲಿಸಿದ ನಂತರ ಒಂದೊಂದು ಸೀರೆಗಳನ್ನು ಕಟ್ಟಿ ಹಗ್ಗದಂತೆ ಮಾಡಿಕೊಂಡು ಮಹಿಳೆ ಇವರಿಂದ ತಪ್ಪಿಸಿಕೊಳ್ಳಲು ಪ್ರಯತ್ನ ಪಟ್ಟಿದ್ದಾರೆ. ದುರದೃಷ್ಟವಶಾತ್​ ಮಹಿಳೆ ಜಾರಿ ಬಿದ್ದು ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆ ಈ ಪ್ರಕರಣದಲ್ಲಿ ಮಾನವ ಹಕ್ಕುಗಳ ಆಯೋಗವು ರಂಗಪ್ರವೇಶ ಮಾಡಿ ತನಿಖೆ ಆರಂಭಿಸಿದೆ.

''ಬಾಡಿಗೆ ತಾಯ್ತನಕ್ಕಾಗಿ ನೇಮಿಸಕೊಂಡವರು ಮನ ಬಂದತೆ ಮಾತನಾಡುವುದಲ್ಲದೆ, ಅವಳ ಹತ್ತಿರ ಅನುಚಿತವಾಗಿ ವರ್ತನೆ ಮಾಡಿದ್ದಾರೆ ಎಂದು ಸಂತ್ರಸ್ತೆ ಯುವತಿಯ ಪತಿ ಆರೋಪಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜೇಶ್​ ಬಾಬು ಎಂಬುವವರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಅಡಿಯಲ್ಲಿ ದೂರು ದಾಖಲಿಸಿಕೊಂಡು ಎಲ್ಲಾ ಆಯಾಮಗಳಲ್ಲಿ ತನಿಖೆ ಆರಂಭಿಸಿದ್ದಾರೆ'', (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net