ಗುಂಡಿನ ಕಿಕ್ಕೇರಿಸಿಕೊಳ್ಳಲು ಆನ್​ಲೈನ್​ ತಲಕಾಡಿ ಫಜೀತಿ ತಂದು ಕೊಂಡ ಮಹಿಳೆ!

wine
Published on

ಬೆಂಗಳೂರು: ಇಲ್ಲೊಬ್ಬ ಮಹಿಳೆ ವೈನ್​ ಖರೀದಿಸಲು ಆನ್​ಲೈನ್​ ತಡಕಾಡಿ ಫಜೀತಿ ತಂದು ಕೊಂಡಿದ್ದಾಳೆ.

ಆನ್​ಲೈನ್ ಮೂಲಕ ಮದ್ಯ ತರಿಸಿಕೊಳ್ಳಲು ಯತ್ನಿಸಿದ ಅಂಚಲ್ ಖಂಡೇವಾಲ್ ಎಂಬಾಕೆ ಬರೋಬ್ಬರಿ 1.6 ಲಕ್ಷ ರೂಪಾಯಿ ಕಳೆದುಕೊಂಡಿದ್ದು, ವೈಟ್​ಫೀಲ್ಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿರಿ ಅಪ್ಪನ ಪರ ವಹಿಸಿದ ಕಾರಣಕ್ಕೆ ಕರುಳಕುಡಿಯನ್ನೇ ಕೊಂದು ಎಸೆದ ಅಮ್ಮ!

ವೈನ್ ಖರೀದಿಸಲೆಂದು ಆನ್‌ಲೈನ್‌ ಮೂಲಕ ರಣ್​ವೀರ್ ಸಿಂಗ್ ಎಂಬಾತನನ್ನ ಅಂಚಲ್​ ಸಂಪರ್ಕಿಸಿದ್ದಳು. ವೈನ್ ಕಳಿಸಿಕೊಡಲು ಮುಂಗಡ ಹಣ ಕೇಳಿದ್ದ ರಣ್​ವೀರ್, ಕ್ಯೂ ಆರ್ ಕೋಡ್ ಕಳಿಸಿ‌ ಹಣ ಪಾವತಿಸುವಂತೆ ಸೂಚಿಸಿದ್ದ.

ವೈನ್​ ಸಿಗುವ ಖುಷಿಯಲ್ಲೇ ಮಹಿಳೆಯೂ ಹಣ ಕಳಿಸಿದ್ದಳು. ಹಣ ತಲುಪಿಲ್ಲವೆಂದು ಒಟ್ಟು 5 ಬಾರಿ ಮಹಿಳೆಯಿಂದ ವಿವಿಧ ಹೆಸರಿನಲ್ಲಿ ರಣ್​ವೀರ್ ಪೇಮೆಂಟ್ ಮಾಡಿಸಿಕೊಂಡಿದ್ದ. ಅನುಮಾ‌ನಗೊಂಡು ಪರಿಶೀಲಿಸಿದಾಗ ಆಕೆಯ ಖಾತೆಯಿಂದ 1.6 ಲಕ್ಷ ರೂ. ಡೆಬಿಟ್ ಆಗಿದ್ದು, ಮೋಸ ಹೋಗಿರುವುದು ಬೆಳಕಿಗೆ ಬಂದಿದೆ. ಹಣ ಕಳೆದುಕೊಂಡಾಕೆ ವೈಟ್​ಫೀಲ್ಡ್ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net