ಟೆರೇಸ್‌ನಿಂದ ಮಗುವನ್ನು ಎಸೆದ ಮಹಿಳೆ; ಮೈ ನಡುಗಿಸುವಂತಿದೆ ಈ ವಿಡಿಯೋ| Viral Video

Untitled design
Published on

Viral Video; ಸಾಮಾಜಿಕ ಮಾಧ್ಯಮದಲ್ಲಿ ವಿಚಿತ್ರವಾದ, ಆಘಾತಕಾರಿ ವಿಡಿಯೋವೊಂದು ವೈರಲ್​ ಆಗಿದೆ. ಟೆರೇಸ್‍ನಿಂದ ನಿಂತ ಮಹಿಳೆಯೊಬ್ಬಳ ಮಗುವನ್ನು ಮೇಲಿನಿಂದ ಎಸೆದಿದ್ದು, ಆ ಮಗುವನ್ನು ಕೆಳಗೆ ನಿಂತಿದ್ದ ವ್ಯಕ್ತಿ ಕ್ಯಾಚ್ ಹಿಡಿದಿದ್ದಾನೆ. ಇನ್ನೂ ಈ ಈ ಘಟನೆ ನಡೆದ ಸ್ಥಳವನ್ನು ನಿರ್ದಿಷ್ಟಪಡಿಸದಿದ್ದರೂ, ಅದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ವಿಡಿಯೋದಲ್ಲಿ ಆ ಮಹಿಳೆಯರಲ್ಲಿ ಒಬ್ಬಳು ಟೆರೇಸ್‌ನ ಅಂಚಿನಲ್ಲಿ ಕೈಯಲ್ಲಿ ಮಗುವನ್ನು ಹಿಡಿದುಕೊಂಡು ನಿಂತಿರುವುದು ಕಂಡುಬಂದಿದೆ. ನಂತರ ಕಣ್ಣು ಮಿಟುಕಿಸುವಷ್ಟರಲ್ಲಿ, ಅವಳು ಮಗುವನ್ನು ಟೆರೇಸ್‌ನಿಂದ ಕೆಳಗೆ ರಸ್ತೆಯ ಮೇಲೆ ತೋಳುಗಳನ್ನು ಚಾಚಿ ನಿಂತಿದ್ದ ವ್ಯಕ್ತಿಯ ಮೇಲೆ ಎಸೆದಿದ್ದಾಳೆ. ಅದೃಷ್ಟವಶಾತ್, ಆ ವ್ಯಕ್ತಿ ಸರಿಯಾದ ಸಮಯದಲ್ಲಿ ಮಗುವನ್ನು ಹಿಡಿದುಕೊಡಿದ್ದಾನೆ. ಆ ಕ್ಷಣ ಹತ್ತಿರದಲ್ಲಿ ನಿಂತಿದ್ದವರಿಗೆ ಒಂದು ಕ್ಷಣ ಶಾಕ್​ ಆದಂತಾಗಿದೆ.

(ಏಜೆನ್ಸೀಸ್)

ಬ್ಲಿಂಕಿಟ್ ಈಗ ಮಕ್ಕಳನ್ನು ಹೆರಲು ಪ್ರಾರಂಭಿಸಿದ್ದಾರೆಯೇ ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ವಿಡಿಯೋ ವೈರಲ್ ಆದ ತಕ್ಷಣ, ಹಲವಾರು ಜನರು ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೆಲವು ಜನರು ತಾವು ಇದನ್ನು ನಂಬಲು ಸಾಧ್ಯವಾಗಲಿಲ್ಲ ಎಂದರೆ, ಇನ್ನೂ ಕೆಲವರು ಪೋಷಕರು ಮಗುವಿನ ಸುರಕ್ಷತೆಯನ್ನು ಹೇಗೆ ಅಜಾಗರೂಕತೆಯಿಂದ ಅಪಾಯಕ್ಕೆ ಸಿಲುಕಿಸಬಹುದು ಎಂದು ಆಶ್ಚರ್ಯಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net