ಭಾರತ ರಷ್ಯಾದ ತೈಲ ಖರೀದಿ ನಿಲ್ಲಿಸದಿದ್ದರೆ,​ ಟ್ರಂಪ್ ಸುಂಕ ಸಡಿಲಿಕೆ ಸಾಧ್ಯವಿಲ್ಲ: ಕೆವಿನ್ ಹ್ಯಾಸೆಟ್| Kevin Hassett

Kevin Hassett
Published on

Kevin Hassett: ಭಾರತವು ರಷ್ಯಾದ ಕಚ್ಚಾ ತೈಲ ವ್ಯಾಪಾರವನ್ನು ನಿಲ್ಲಿಸದಿದ್ದರೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಭಾರತದ ಆಮದುಗಳ ಮೇಲಿನ ಸುಂಕಗಳ ಮೇಲಿನ ಬಗ್ಗೆ ತಮ್ಮ ನಿಲುವನ್ನು ಸಡಿಲಿಸುವುದಿಲ್ಲ ಎಂದು ಡೊನಾಲ್ಡ್ ಟ್ರಂಪ್ ಅವರ ಉನ್ನತ ಆರ್ಥಿಕ ಸಲಹೆಗಾರ ಕೆವಿನ್ ಹ್ಯಾಸೆಟ್ ಎಚ್ಚರಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಕೆವಿನ್, ಭಾರತವು ತನ್ನ ಮಾರುಕಟ್ಟೆಗಳನ್ನು ಅಮೇರಿಕನ್ ಉತ್ಪನ್ನಗಳಿಗೆ ತೆರೆಯುವಲ್ಲಿ ನಿಷ್ಠುರತೆ ಹೊಂದಿದೆ ಎಂದು ಆರೋಪಿಸಿದ ಕಾರಣ, ಭಾರತದೊಂದಿಗೆ ವ್ಯಾಪಾರ ಮಾತುಕತೆಗಳನ್ನು ಜಟಿಲವಾಗಿದೆ ಎಂದು ಹೇಳಿದ್ದಾರೆ.

ಭಾರತೀಯರು ಬಗ್ಗದಿದ್ದರೆ, ಟ್ರಂಪ್ ಸುಂಕಗಳನ್ನು ಕಡಿಮೆ ಮಾಡುತ್ತಾರೆಂದು ನಾನು ಭಾವಿಸುವುದಿಲ್ಲ ಎಂದು ಹ್ಯಾಸೆಟ್ ತಿಳಿಸಿದರು. ಅದೆರೆ ನಾವು ಭಾರತದ ಮೇಲೆ ಹಾಕಿರುವ ಸುಂಕದ ಒಂದು ಭಾಗವು ಶಾಂತಿ ಒಪ್ಪಂದವನ್ನು ಪಡೆಯಲು ಮತ್ತು ಲಕ್ಷಾಂತರ ಜೀವಗಳನ್ನು ಉಳಿಸಲು ನಾವು ರಷ್ಯಾದ ಮೇಲೆ ಹೇರಲು ಪ್ರಯತ್ನಿಸುತ್ತಿರುವ ಒತ್ತಡಕ್ಕೆ ಸಂಬಂಧಿಸಿದೆ ಎಂದು ಕೆವಿನ್​ಹೇಳಿದ್ದಾರೆ. ಯುಎಸ್​ ಉತ್ಪನ್ನಗಳಿಗೆ ಭಾರತೀಯರಿಗೆ ಮಾರುಕಟ್ಟೆಗಳನ್ನು ತೆರೆಯುವ ಬಗ್ಗೆ ನಿಷ್ಠುರತೆ ಇದೆ ಎಂದಿದ್ದಾರೆ.

ಭಾರತ-ಯುಎಸ್ ವ್ಯಾಪಾರ ಮಾತುಕತೆಗಳ ಬಗ್ಗೆ ಮಾತನಾಡಿರುವ ಹ್ಯಾಸೆಟ್, ಅಂತಿಮ ನಿಲುವನ್ನು ತಲುಪುವ ಮೊದಲು ಮಾತುಕತೆಗಳಿಗೆ ದೀರ್ಘಾವಧಿಯ ದೃಷ್ಟಿಕೋನ ಮತ್ತು ಏರಿಳಿತಗಳನ್ನು ಒಪ್ಪಿಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದರು.

ಭಾರತದ ನಿಲುವು

ಅಮೆರಿಕದ ಒತ್ತಡದ ವಿರುದ್ಧ ದೃಢವಾಗಿ ನಿಲ್ಲಲು ಭಾರತ ಸಿದ್ಧವಾಗಿದೆ ಎಂದು ಹೇಳಿದೆ. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ರೈತರ ಹಿತಾಸಕ್ತಿಗಳೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ.

ಸರ್ಕಾರದ ಅಂದಾಜಿನ ಪ್ರಕಾರ, ಈ ಸುಂಕಗಳು ಅಮೆರಿಕಕ್ಕೆ ಭಾರತದಿಂದ ರಫ್ತಾಗುವ $48.2 ಬಿಲಿಯನ್ ಮೌಲ್ಯದ ಮೇಲೆ ಪರಿಣಾಮ ಬೀರುತ್ತವೆ. ಹೊಸ ಸುಂಕಗಳ ತಕ್ಷಣದ ಪರಿಣಾಮ ಸೀಮಿತವಾಗಿದ್ದರೂ, ಆರ್ಥಿಕತೆಯ ಮೇಲೆ ಉಂಟಾಗುವ ಪರಿಣಾಮಗಳು ಎದುರಿಸಬೇಕಾದ ಸವಾಲುಗಳನ್ನು ಒಡ್ಡುತ್ತವೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ಅಮೆರಿಕವು ಬುಧವಾರ ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಶೇ.50 ಕ್ಕೆ ದ್ವಿಗುಣಗೊಳಿಸಿದೆ. ಇದು ಬ್ರೆಜಿಲ್ ಹೊರತುಪಡಿಸಿ ಬೇರೆ ಯಾವುದೇ ದೇಶಕ್ಕೆ ಅತ್ಯಧಿಕವಾಗಿದೆ. ಇದರಲ್ಲಿ ಭಾರತವು ರಷ್ಯಾದ ಕಚ್ಚಾ ತೈಲವನ್ನು ಖರೀದಿಸುವುದಕ್ಕೆ ಶೇ.25 ರಷ್ಟು ಹೆಚ್ಚುವರಿ ಸುಂಕವೂ ಸೇರಿದೆ ಎಂದು ಅಮೆರಿಕ ಹೇಳಿದೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net