ಚಲಿಸುತ್ತಿದ್ದ ರೈಲಿನಿಂದ ಮಹಿಳೆಯನ್ನು ನೂಕಿದ ಕಿರಾತಕ!

Train
ಸಾಂದರ್ಭಿಕ ಚಿತ್ರ
Published on

ಜಬಲ್​ಪುರ: ಚಲಿಸುತ್ತಿರುವ ರೈಲಿನಿಂದ 25 ವರ್ಷದ ಮಹಿಳೆಯನ್ನು ತಳ್ಳಿರುವ ಅಮಾನವೀಯ ಘಟನೆ ಮಧ್ಯಪ್ರದೇಶದ ಛತ್ರಾಪುರ ಜಿಲ್ಲೆಯ ಖಜುರಾಹೊದಲ್ಲಿ ನಡೆದಿದೆ.

ತೀವ್ರ ಗಾಯಗೊಂಡಿರುವ ಮಹಿಳೆ ಛತ್ರಾಪುರ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಬುಧವಾರ ರಾತ್ರಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಕಿರುಕುಳ ನೀಡಿದ್ದಾನೆ. ಇದಕ್ಕೆ ಸಹಕರಿಸದಿದ್ದಕ್ಕೆ ಆಕೆಯನ್ನು ರೈಲಿನಿಂದ ನೂಕಿದ್ದಾನೆ ಎಂದು ರೈಲ್ವೆ ಪೊಲೀಸ್ ಅಧಿಕಾರಿ ವಿನಾಯಕ ವರ್ಮಾ ತಿಳಿಸಿದ್ದಾರೆ.

ಈ ರೈಲು ಖುಜರಾಹೊದಿಂದ ಉತ್ತರ ಪ್ರದೇಶದ ಮೊಹಬಾಗೆ ತೆರಳುತ್ತಿತ್ತು. ಸದ್ಯ ಆರೋಪಿಯನ್ನು ಬಂಧಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net