

ಚಂಡಿಗಢ: ನೀನು ಪತ್ರಕರ್ತನೇ ಅಲ್ಲ ಎಂದು ಹೇಳಿ ದುರ್ವರ್ತನೆ ತೋರಿದ ಪೊಲೀಸರಿಗೆ ಸರಿಯಾಗಿಯೇ ಬಿಸಿ ಮುಟ್ಟಿಸಿರುವ ಪತ್ರಕರ್ತನೋರ್ವ, ಪೊಲೀಸರ ವಿರುದ್ಧವೇ ದೂರು ದಾಖಲಿಸಿದ್ದಾರೆ.
ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಹಾಗೂ ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ನಡೆಸಿದ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಳ್ಳಲು ಬಂದ ಪತ್ರಕರ್ತನ ವಿರುದ್ಧ ದುರ್ವರ್ತನೆ ತೋರಿದ ಆರೋಪದ ಮೇಲೆ ಪಂಜಾಬ್ ಪೊಲೀಸರ ವಿರುದ್ಧ ದೂರು ದಾಖಲಿಸಲಾಗಿದೆ.
ಏಪ್ರಿಲ್ 26ರಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಭಗವಂತಮಾನ್ ಜಂಟಿ ಸುದ್ದಿಗೋಷ್ಠಿ ಆಯೋಜಿಸಿದ್ದರು.ಈ ವೇಳೆ ಪತ್ರಕರ್ತ ನರೇಶ್ ವತ್ಸ್ ಎಂಬುವವರನ್ನು ಗೇಟ್ನಲ್ಲೇ ತಡೆದ ಪೊಲೀಸರು ಗುರುತಿನ ಚೀಟಿ ತೋರಿಸಿದರೂ. ಕೆಲಕಾಲ ನಿಲ್ಲಿಸಿ ದುರ್ವರ್ತನೆ ತೋರಿದ್ದಾರೆ. ನೀನು ಪತ್ರಕರ್ತನಲ್ಲ ಎಂದು ನಿಂದಿಸಿದ್ದಾರೆ ಎಂದು ದೂರಿನಲ್ಲಿ ಪೊಲೀಸರ ವಿರುದ್ಧ ಆರೋಪಿಸಿದ್ದಾರೆ. ಸದ್ಯ ಪೊಲೀಸರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.