ಹಸೆಮಣೆ ಏರಬೇಕಾದವಳು ಚಟ್ಟಕ್ಕೇರಿದಳು! ಬೈಕಲ್ಲಿ ಬಂದು ಗುಂಡಿಟ್ಟ ದುಷ್ಕರ್ಮಿಗಳು

Untitled-3
Published on

ಗುರುಗ್ರಾಮ: ಇನ್ನೇನು ಕೆಲ ದಿನಗಳಲ್ಲಿ ಹಸೆ ಮಣೆ ಏರಿ, ಹೊಸ ಬದುಕನ್ನು ಆರಂಭಿಸಬೇಕಿದ್ದ ಯುವತಿಯೊಬ್ಬಳು ಬಾವಿ ಪತಿಯ ಎದುರೇ ಹೆಣವಾಗಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ.

26 ವರ್ಷದ ಟೆಕ್ಕಿ ಪೂಜ ಶರ್ಮಾ ಮತ್ತು ಸಾಗರ್​ ಮಂಚಂದಗೆ ಮದುವೆ ನಿಶ್ಚಯವಾಗಿತ್ತು. ನವೆಂಬರ್​ 3ರಂದು ರೆಸ್ಟೋರೆಂಟ್​ನಲ್ಲಿ ಊಟ ಮಾಡಿದ ಬಾವಿ ದಂಪತಿ, ಹಾಗೆ ಒಂದು ಡ್ರೈವ್​ ಹೋಗೋಣ ಎಂದು ಹೊರಟಿದ್ದಾರೆ. ಪೂಜ ತಾನೇ ಕಾರು ಡ್ರೈವಿಂಗ್​ ಮಾಡಿಕೊಂಡು ಹೊರಟಿದ್ದಾಳೆ. ಆದರೆ ಮಾರ್ಗ ಮಧ್ಯೆ ಇವರನ್ನು ಅಡ್ಡ ಹಾಕಿದ ದುಷ್ಕರ್ಮಿಗಳು ಪೂಜಳ ಬದುಕನ್ನೇ ಕೊನೆಗಾಣಿಸಿದ್ದಾರೆ.

"ಮೂರು ಜನರು ಬೈಕ್​ನಲ್ಲಿ ಬಂದು ನಮ್ಮ ಕಾರನ್ನು ಅಡ್ಡಗಟ್ಟಿದರು. ಅದರಲ್ಲಿ ಇಬ್ಬರು ಬೈಕ್​ನಿಂದ ಕೆಳಗಿಳಿದು ನನ್ನ ಮತ್ತು ಪೂಜಾ ಬಳಿ ಬಂದರು. ಕಾರ್​ನ ವಿಂಡೋ ಗ್ಲಾಸ್​ ಇಳಿಸುವಂತೆ ಸನ್ನೆ ಮಾಡಿದರು. ಅವರಲ್ಲಿ ಒಬ್ಬ ಕಾರಿನ ಮುಂದೆ ಬಂದು ಗುಂಡು ಹಾರಿಸಿದ. ಹೆದರಿ, ತಪ್ಪಿಸಿಕೊಳ್ಳುವ ಸಲುವಾಗಿ ಪೂಜ ಕಾರನ್ನು ಮೂವ್​ ಮಾಡಲು ನೋಡಿದಳು. ಆಗ ಆಕೆಯ ಬಳಿ ಇದ್ದ ವ್ಯಕ್ತಿ ಅವಳ ಮೇಲೆ ಗುಂಡು ಹಾರಿಸಿದ. ಅದು ನೇರವಾಗಿ ಅವಳ ತಲೆಗೆ ತಗುಲಿತು" ಎಂದು ಸಾಗರ್​ ತಿಳಿಸಿದ್ದಾರೆ.

ಗಂಭೀರವಾಗಿ ಗಾಯಾಳುವಾಗಿದ್ದ ಪೂಜಾಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಕೆ ಗುರುವಾರ ಅಸು ನೀಗಿದ್ದಾಳೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net