ಬೀಚ್​ನಲ್ಲಿ ಬೆತ್ತಲಾಗಿ ಓಡಾಡಿದ ನಟ ಮಿಲಿಂದ್ ಸೋಮನ್

7Goa1a
Published on

ಪಣಜಿ(ಮಡಗಾಂವ): ಜನ್ಮದಿನದಂದು ಗೋವಾ ಬೀಚ್​ನಲ್ಲಿ ನಗ್ನವಾಗಿ ಓಡಿದ್ದ ನಟ ಹಾಗೂ ಮಾಡೆಲ್ ಮಿಲಿಂದ್ ಸೋಮನ್ ವಿರುದ್ಧ ಮಡಗಾಂವ ಸಮೀಪದ ಕೋಲ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೋವಾ ಬೀಚ್​ನಲ್ಲಿ ಅರೆನಗ್ನ ಸ್ಥಿತಿಯಲ್ಲಿ ಶೂಟಿಂಗ್ ಮಾಡಿದ ನಟಿ ಪೂನಂ ಪಾಂಡೆ ಬಂಧನದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹೊಸದೊಂದು ಚರ್ಚೆಗೆ ಕಾರಣವಾಗಿದೆ. ಪುರುಷರಿಗೊಂದು ಮಹಿಳೆಯರಿಗೊಂದು ನ್ಯಾಯ ಏಕೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಪ್ರಶ್ನೆ ಮಾಡಿದ್ದಾರೆ.

ಅರೆನಗ್ನ ಸ್ಥಿತಿಯಲ್ಲಿ ಚಿತ್ರೀಕರಣ ನಡೆಸಿದ್ದ ಪೂನಂ ಪಾಂಡೆಯನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ, ಪೂರ್ಣ ನಗ್ನರಾಗಿ ಗೋವಾ ಬೀಚ್​ನಲ್ಲಿ ಓಡಿರುವ ಫೋಟೋವನ್ನು ಮಿಲಿಂದ್ ಜಾಲತಾಣಗಳಲ್ಲಿ ಹಂಚಿಕೊಂಡ ಬಗ್ಗೆ ಹೊಗಳಿಕೆ ಕೇಳಿ ಬಂದಿದೆ. ಅವರ ವಿರುದ್ಧ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಯಾಗುತ್ತಿದ್ದ ಬೆನ್ನಲ್ಲೆ ಪೊಲೀಸರು ಮಿಲಿಂದ್ ಸೋಮನ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಮಿಲಿಂದ್ ಸೋಮನ್ ಕ್ಯಾಮರಾ ಮುಂದೆ ನಗ್ನರಾಗಿರುವುದು ಇದೇ ಮೊದಲಲ್ಲ. 1990ರಲ್ಲಿ ಜಾಹೀರಾತಿಗಾಗಿ ಮಾಜಿ ಮಿಸ್ ಇಂಡಿಯಾ ಮಧು ಸಾಪ್ರೆ ಜೊತೆ ನಗ್ನರಾಗಿ ಫೋಸ್ ಕೊಟ್ಟಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net