ಅದು ನಾಯಿ ಮರಿಯಲ್ಲ ಮೊಸಳೆ ತಾಯಿ! ಮೊಸಳೆಯನ್ನು ಸಂತೈಸುವ ಮಹಿಳೆ ನೋಡಿ

crocodile
Published on

ನವದೆಹಲಿ: ಮೊಸಳೆ ಅಂತ್ಯಂತ ಅಪಾಯಕಾರಿ ಪ್ರಾಣಿಯಾಗಿದೆ. ಮೊಸಳೆ ಜತೆ ಆಟವಾಡುವಷ್ಟು ಹತ್ತಿರವಾಗಲು ನೀವು ಪ್ರಯತ್ನಿಸಿದಾಗ ಏನಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋವೊಂದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

ಈ ವಿಡಿಯೋದಲ್ಲಿ ಮಹಿಳೆಯೊಬ್ಬರು ಜಲಾಶಯವೊಂದರಲ್ಲಿ ಮೊಸಳೆಯೊಂದಿಗೆ ಈಜುತ್ತಾ ಅದಕ್ಕೆ ಆಹಾರ ನೀಡುತ್ತಿರುವ ದೃಶ್ಯವಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಜಲಾಶಯದಲ್ಲಿ ಗ್ಯಾಬಿಯೊಂದಿಗೆ ಇರುವ ಹೆಣ್ಣು ಮೊಸಳೆ ಹೆಸರು ಬೆಲ್ಲಾ. ಗ್ಯಾಬಿ ಬೆಲ್ಲಾಗೆ ಆಹಾರ ನೀಡಲು ಪ್ರಯತ್ನಿಸುತ್ತಿದ್ದಾರೆ. ಬಾಯಿಗೆ ಆಹಾರ ಹಾಕಿದ ನಂತರ ಮೊಸಳೆಯನ್ನು ಅಟ್ಟಿಸಿಕೊಂಡು ಹೋಗಿ ಅಪ್ಪಿಕೊಳ್ಳುವುದು ಕೂಡ ವಿಡಿಯೋದಲ್ಲಿ ಕಂಡು ಬಂದಿದೆ. ಇನ್ಸ್ಟಾಗ್ರಾಮ್ ನಲ್ಲಿ ವೈರಲ್ ಆಗಿರುವ ಈ ವಿಡಿಯೋವನ್ನು ಇದುವರೆಗೆ 3 ಲಕ್ಷಕ್ಕೂ ಹೆಚ್ಚು ಮಂದಿ ನೋಡಿದ್ದಾರೆ. ವಿಡಿಯೋ ನೋಡಿದವರೆಲ್ಲರೂ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ.

ಮಹಿಳೆಯ ಸಾಹಸಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ. ಆದಾಗ್ಯೂ, ಕೆಲವು ನೆಟಿಜನ್‌ಗಳು ಇಂತಹ ಜೀವ ಬೆದರಿಕೆಯ ಕ್ರಮಗಳನ್ನು ಪ್ರೋತ್ಸಾಹಿಸಬಾರದು ಎಂದು ಸಲಹೆ ನೀಡಿದ್ದಾರೆ. ಆದರೆ ಕೆಲವು ಆಕೆ ಧೈರ್ಯಕ್ಕೆ ಮೆಚ್ಚುಗೆ ಸೂಚಿಸಿದರೆ, ಮೊಸಳೆ ಯಾಕೆ ಸುಮ್ಮನೆ ಇದೆ ಎಂದು ಪ್ರಶ್ನೆ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net