ಪತಿ ಮೇಲೆ ಹಲ್ಲೆ ನಡೆಸಿದ ಪೊಲೀಸ್​​ಗೆ ಮಹಿಳೆ ಕಪಾಳಮೋಕ್ಷ

police
Published on

ವಿಲ್ಲುಪುರಂ:ತಮಿಳುನಾಡಿನ ಅನಥೂರ್ ಗ್ರಾಮದಲ್ಲಿ ಮಹಿಳೆಯೊಬ್ಬಳು ತನ್ನ ಪತಿಯ ಮೇಲೆ ಹಲ್ಲೆ ನಡೆಸಿದ ಸಬ್ ಇನ್ಸ್‌ಪೆಕ್ಟರ್‌ಗೆ ಕಪಾಳಮೋಕ್ಷ ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೀಡಿಯೊದಲ್ಲಿ,ರಕ್ತಸ್ರಾವವಾಗುತ್ತಿರುವ ವ್ಯಕ್ತಿಯೊಬ್ಬ ತಿರುವೆನ್ನೈನಲ್ಲೂರ್ ಪೊಲೀಸ್ ಠಾಣೆಯ ಇಬ್ಬರು ಪೊಲೀಸರೊಂದಿಗೆ ವಾದಿಸುತ್ತಿರುವ ಹಾಗೂ ಮಹಿಳೆಯೊಬ್ಬಳು ಒಬ್ಬ ಪೊಲೀಸ್​​ಗೆ ಕಪಾಳಮೋಕ್ಷ ಮಾಡುವ ದೃಶ್ಯವೂ ಇದೆ.
ಈ ಘಟನೆ ಶನಿವಾರ ನಡೆದಿದೆ. ವೀಡಿಯೊ ದೃಶ್ಯಾವಳಿಯಲ್ಲಿ ಇರುವ ಇಬ್ಬರು ಪೊಲೀಸರು ಗುತ್ತಿಗೆದಾರ ಮತ್ತು ಕೃಷಿ ಕೆಲಸಗಾರರ ನಡುವಿನ ವಿವಾದವನ್ನು ಬಗೆಹರಿಸಲು ಅನತೂರ್ ಗ್ರಾಮಕ್ಕೆ ಹೋಗಿದ್ದರು.


ಕೃಷಿ ಕೆಲಸಗಾರ ವಿ ಮುತ್ತುರಾಮನ್, ಪತ್ನಿ ಶರತಿ ಮತ್ತು ಇಬ್ಬರು ಮಕ್ಕಳೊಂದಿಗೆ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಪ್ರಧಾನ್ ಮಂತ್ರಿ ಆವಾಸ್ ಯೋಜನೆ ಅಭಿಯಾನದಡಿ ತಯಾರಿಸಲಾದ ಜ್ಯೇಷ್ಠತಾ ಪಟ್ಟಿಯಲ್ಲಿ ಈ ಕುಟುಂಬದ ಹೆಸರೂ ಇತ್ತು.
ಯೋಜನೆಯ ನಿರ್ಮಾಣ ಕಾರ್ಯಗಳನ್ನು ಪರಿಶೀಲಿಸಲು ಖಾಸಗಿ ಗುತ್ತಿಗೆದಾರ ಸುಭಾಷ್ ಚಂದ್ರ ಬೋಸ್‌ ಬ್ಲಾಕ್ ಅಭಿವೃದ್ಧಿ ಕಚೇರಿಯಿಂದ ನೇಮಕಗೊಂಡಿದ್ದರು.
ಮನೆಯ ನಿರ್ಮಾಣದ ವೇಳೆ, ಮುತ್ತುರಾಮನ್ ಮತ್ತು ಬೋಸ್ ಮಧ್ಯೆ ವಾಗ್ವಾದ ನಡೆದಿತ್ತು ಎಂದು ಆರೋಪಿಸಲಾಗಿದೆ. ಬೋಸ್ ಹಣದ ವಿಷಯದಲ್ಲಿ ತನಗೆ ಮೋಸ ಮಾಡಿದ್ದಾನೆ ಎಂದು ಮುತ್ತುರಾಮ್ ಹೇಳಿಕೊಂಡಿದ್ದಾನೆ. ಅವರಿಬ್ಬರ ನಡುವಿನ ವಿವಾದವನ್ನು ಬಗೆಹರಿಸಲು ಇಬ್ಬರು ಪೊಲೀಸರು ಗ್ರಾಮಕ್ಕೆ ಹೋಗಿದ್ದಾರೆ.


ಪೊಲೀಸರು ಗ್ರಾಮಕ್ಕೆ ಹೋಗಿ ವಿಚಾರಣೆ ನಡೆಸುವಾಗ ಮುತ್ತುರಾಮನ್ ಮದ್ಯಪಾನ ಮಾಡಿದ್ದನೆನ್ನಲಾಗಿದೆ. ಇದರ ಬೆನ್ನಲ್ಲೇ ಪೊಲೀಸರೊಬ್ಬರು ಮುತ್ತುರಾಮನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಪತಿಯ ಮೇಲೆ ಹಲ್ಲೆ ನಡೆಸಿದಾಗ ಕೋಪಗೊಂಡ ಶರತಿ ಸಬ್‌ಇನ್ಸ್‌ಪೆಕ್ಟರ್‌ಗೆ ಕಪಾಳಮೋಕ್ಷ ಮಾಡಿದಳು. ಏತನ್ಮಧ್ಯೆ, ಮುತ್ತುರಾಮನ್ ಕಾನ್ಸ್​​​ಟೆಬಲ್​​​​ನ ಫೋನ್ ಮತ್ತು ಎಸ್ಐನ ದ್ವಿಚಕ್ರ ವಾಹನದ ಕೀಲಿಯನ್ನು ಕಿತ್ತುಕೊಂಡ.
ಗ್ರಾಮಸ್ಥರು ದಂಪತಿಗೆ ಬೆಂಬಲ ನೀಡಿ, ಪೊಲೀಸರು ಹಿಂತಿರುಗುವಂತೆ ಒತ್ತಾಯಿಸಿದರು. ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ ಹಿರಿಯ ಅಧಿಕಾರಿಗಳು ಗ್ರಾಮಕ್ಕೆ ತೆರಳಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲಾಗಿದ್ದು, ಪ್ರಕ್ರಿಯೆ ಪೂರ್ಣಗೊಂಡ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ವಿಲ್ಲುಪುರಂ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net