More

    ಆನ್​ಲೈನ್ ಪ್ರೇಮಿ ತೋಡಿದ ಹಳ್ಳಕ್ಕೆ ಬಿದ್ದು 34 ಲಕ್ಷ ರೂ. ಕಳೆದುಕೊಂಡಳು…

    ನವದೆಹಲಿ: ಪ್ರತಿಷ್ಠಿತ ಏಮ್ಸ್ ಆಸ್ಪತ್ರೆಯ ನರ್ಸಿಂಗ್ ಸಿಬ್ಬಂದಿ ಆನ್​ಲೈನ್ ನಲ್ಲಿ ಹುಸಿ ಪ್ರೇಮಪಾಶಕ್ಕೆ ಬಲಿಯಾಗಿ 34 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದಾರೆ ಎಂದು ದೆಹಲಿ ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಮುಹಮ್ಮದ್ ಸಾದಿಕ್ ಆರೋಪಿ. ಆಕೆಯನ್ನು ಫೇಸ್​ಬುಕ್​​ನಲ್ಲಿ ಪರಿಚಯಿಸಿಕೊಂಡು, ಸ್ನೇಹ ಸಂಪಾದಿಸಿ, ಅವಳನ್ನು ಮದುವೆಯಾಗುದಾಗಿ ಸುಳ್ಳು ಭರವಸೆ ನೀಡಿದ. ಆಕೆ ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಮೋಸದಿಂದ ಕಿತ್ತುಕೊಂಡು ಪರಾರಿಯಾಗಿದ್ದ. ಆರೋಪಿಯನ್ನು ಈಗ ವಿಜಯವಾಡ ಪೊಲೀಸರು ಬಂಧಿಸಿದ್ದಾರೆ.
    ಮಾರ್ಚ್ 5 ರಂದು ಆಕೆ ದೂರು ದಾಖಲಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಆಕೆಯ ಹೇಳಿಕೆಯ ಪ್ರಕಾರ, ಆರೋಪಿ ಸಾಮಾಜಿಕ ಜಾಲತಾಣದ ಮೂಲಕ ಮೊದಲು ಆಕೆಯನ್ನು ಸಂಪರ್ಕಿಸಿದ್ದು 2019 ರ ಜುಲೈನಲ್ಲಿ. ಸಾಮಾನ್ಯ ಸ್ನೇಹಿತರ ಮೂಲಕ ಆತನ ಪ್ರೊಫೈಲ್ ಪರಿಶೀಲಿಸಿದ ನಂತರ, ಅವಳು ಅವನ ಕೋರಿಕೆಯನ್ನು ಒಪ್ಪಿಕೊಂಡಿದ್ದಳು.

    ಇದನ್ನು ಓದಿ: ನಕಲಿ ಇನ್ಸ್ಟಾಗ್ರಾಂ ಖಾತೆಯ ಮೂಲಕ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆನ್​ಲೈನ್ ಪೀಡಕನಿಗಾಯ್ತು ತಕ್ಕ ಶಾಸ್ತಿ


    ಸ್ನೇಹಿತನಾದ ನಂತರ ಆರೋಪಿ ಕ್ರಮೇಣ ಆಕೆಯ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾದ. ಆಕೆಯನ್ನು ಭೇಟಿಯಾಗಲು ದೆಹಲಿಗೆ ಬಂದನು. ಆತ ಯೋಜಿಸಿದಂತೆಯೇ, ಆಕೆಯನ್ನು ವಿಹಾರಕ್ಕೆ ಹೊರಗೆ ಕರೆದುಕೊಂಡು ಹೋಗಿ ಮದುವೆಗೆ ಪ್ರಸ್ತಾಪಿಸಿದ.
    ನಂತರ ಆತ ಮುಂದಿನ ತಮ್ಮ ಸ್ಥಿರ ಜೀವನಕ್ಕಾಗಿ ತಮ್ಮದೇ ಸ್ವಂತ ಹೋಟೆಲ್ ವ್ಯವಹಾರವನ್ನು ಹೊಂದುವ ಇಚ್ಛೆ ವ್ಯಕ್ತಪಡಿಸಿದ. ಆ ನಯವಂಚಕನ ಬಲೆಗೆ ಬಿದ್ದ ಸಂತ್ರಸ್ತೆ ತನ್ನ ಬ್ಯಾಂಕ್ ಖಾತೆಯಿಂದ 33,92,201 ರೂ (ಸುಮಾರು 34 ಲಕ್ಷ) ಹಣವನ್ನು ವರ್ಗಾಯಿಸಿದ್ದಾಳೆ ಎಂದು ತನಿಖೆ ನಡೆಸಿದ ದೆಹಲಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
    ಮೂಲಗಳ ಪ್ರಕಾರ, ಹಣ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಂಡ ತಕ್ಷಣವೇ. ಆರೋಪಿ ಆಕೆಯ ಕರೆಗಳನ್ನು ನಿರಾಕರಿಸಲಾರಂಭಿಸಿದ್ದ.
    ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿದ ಆರೋಪಿ ಮೊಹಮ್ಮದ್ ಸಾದಿಕ್ ಇಮ್ರಾನ್ ಮೋಸ ಮಾಡಿದ್ದಾನೆಂದು ಎಂದು ಗೊತ್ತಾದಾಗ, ಆಕೆ ಈ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಳು ಈ ಆಧಾರದ ಮೇಲೆ ಅವನನ್ನು ಬಂಧಿಸಲಾಗಿದೆ.  

    ಇದನ್ನೂ ಓದಿ:  ಐಟಿಬಿಪಿಯಲ್ಲಿ ಪೊಲೀಸ್ ಆಗಲಿಚ್ಛಿಸಿದ್ದೀರಾ? ಅರ್ಹತಾ ಮಾನದಂಡಗಳೇನಿವೆ ನೋಡಿ…


    “ವೈಜ್ಞಾನಿಕ ತನಿಖೆ ಮತ್ತು ಮೊಬೈಲ್ ಕಣ್ಗಾವಲು ಆಧಾರದ ಮೇಲೆ, ಆರೋಪಿ ಮೊಹಮ್ಮದ್ ಸಾದಿಕ್ ಇಮ್ರಾನ್ ಆಂಧ್ರಪ್ರದೇಶದ ವಿಜಯವಾಡಕ್ಕೆ ಪರಾರಿಯಾಗಿದ್ದಾನೆ ಎಂದು ದೃಢಪಟ್ಟಿತು. ಆತನನ್ನು ಬಂಧಿಸಿ ದೆಹಲಿಗೆ ಕರೆತಂದು ಸಾಕೇತ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ದೆಹಲಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಒಂದು ವಿಭಿನ್ನ ಪ್ರತಿಭಟನೆ… ತಮ್ಮ ವಿವಾಹಕ್ಕೆ ಕುಂದು ತಂದ ಲಾಕ್​ಡೌನ್ ನಿಯಮಾವಳಿಗಳ ವಿರುದ್ಧ ಇಟಲಿಯ ಯುವತಿಯರು ಮಾಡಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts