ಐಟಿಬಿಪಿಯಲ್ಲಿ ಪೊಲೀಸ್ ಆಗಲಿಚ್ಛಿಸಿದ್ದೀರಾ? ಅರ್ಹತಾ ಮಾನದಂಡಗಳೇನಿವೆ ನೋಡಿ...

ITBP
Published on

ನವದೆಹಲಿ: ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್​​​​ನಲ್ಲಿ ಕಾನ್‌ಸ್ಟೆಬಲ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಒಟ್ಟು 51 ಹುದ್ದೆಗಳಿವೆ. ಕ್ರೀಡಾ ಕೋಟಾದಡಿ ನೇಮಕಾತಿ ನಡೆಯಲಿದೆ.
ಅರ್ಹ ಅಭ್ಯರ್ಥಿಗಳು ITBP ಯ ಅಧಿಕೃತ ವೆಬ್​ಸೈಟ್ ಮೂಲಕ itbpolice.nic.in ನಲ್ಲಿ ಆನ್‌ಲೈನ್‌ನಲ್ಲಿ ಜುಲೈ 13 ರಿಂದ ಆಗಸ್ಟ್ 26 ರವರೆಗೆ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ಎಸ್ಸೆಸ್ಸೆಲ್ಸಿ / ತತ್ಸಮಾನ ಶಿಕ್ಷಣ ಪೂರೈಸಿರಬೇಕು.18 ರಿಂದ 23 ವರ್ಷ ವಯೋಮಿತಿ ಪೂರೈಸಿರಬೇಕು.
ಸಾಮಾನ್ಯ ಮತ್ತು ಒಬಿಸಿ ವರ್ಗದ ಅಭ್ಯರ್ಥಿಗಳ ಅರ್ಜಿ ಶುಲ್ಕ 100 ರೂ. ಇರುತ್ತದೆ. ಎಸ್‌ಸಿ,ಎಸ್‌ಟಿ, ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇರುತ್ತದೆ. ಡೆಬಿಟ್ ಕಾರ್ಡ್‌/ ಕ್ರೆಡಿಟ್ ಕಾರ್ಡ್‌/ ನೆಟ್ ಬ್ಯಾಂಕಿಂಗ್ ಮೂಲಕ ಶುಲ್ಕ ಪಾವತಿಸಬಹುದು. ಹೆಚ್ಚಿನ ವಿವರಗಳಿಗೆ ಐಟಿಬಿಪಿ ಅಧಿಕೃತ ಸೈಟ್‌ https://www.itbpolice.nic.in ಗೆ ಭೇಟಿ ನೀಡಬಹುದು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net