

ನವದೆಹಲಿ: ವಿಮಾನಗಳು ಹಾರಾಟದಲ್ಲಿರುವಾಗ ಅತಿಹೆಚ್ಚು ವೇಗದ ಇಂಟರ್ಸೌಲಭ್ಯವನ್ನು ಒದಗಿಸಿ ಕೀರ್ತಿಗೆ ಚೀನಾ ಭಾಜನವಾಗಿದೆ. ಹೈಸ್ಪೀಡ್ ಸ್ಯಾಟಲೈಟ್ ಇಂಟರ್ನೆಟ್ ಸೌಲಭ್ಯ ಹೊಂದಿದ್ದ ಮೊದಲ ವಿಮಾನ ಮಂಗಳವಾರ ಯಶಸ್ವಿಯಾಗಿ ಹಾರಾಟ ಕೈಗೊಂಡಿತು.
26.5-40ಜಿಎಚ್ಜೆಡ್ ಸಾಮರ್ಥ್ಯದ ಕೆ-ಬ್ಯಾಂಡ್ ಸೌಲಭ್ಯ ಹೊಂದಿರುವ ಝಾಂಗ್ಕ್ಸಿಂಗ್ 16 ಎಂಬ ಉಪಗ್ರಹದ ನೆರವಿನಿಂದ ಹೈಸ್ಪೀಡ್ ಇಂಟರ್ನೆಟ್ ಸೌಲಭ್ಯವನ್ನು ಕಿಂಗ್ಡಾವ್ ಏರ್ಲೈನ್ಸ್ ಕ್ಯುಡಬ್ಲ್ಯು9771 ವಿಮಾನದಲ್ಲಿ ವ್ಯವಸ್ಥೆ ಮಾಡಲಾಗಿದೆ. ಈ ವಿಮಾನವು ಮಂಗಳವಾರ ಸಂಜೆ 4.46ಕ್ಕೆ ಕಿಂಗ್ಡಾವ್ ಲ್ಯುಟಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟು ಚೆಂಗ್ಡು ಸುಆ್ಯಂಗಿಲು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ರಾತ್ರಿ 7.21ಕ್ಕೆ ತಲುಪಿತು.
ವಿಮಾನ ಹಾರಾಟದಲ್ಲಿ ಇರುವಾಗಲೇ ಈ ವಿಮಾನದಲ್ಲಿದ್ದ ಪ್ರಯಾಣಿಕರು 100 ಮೆಗಾಬೈಟ್ಗಿಂತಲೂ ಹೆಚ್ಚಿನ ವೇಗದ ಇಂಟರ್ನೆಟ್ ಸೌಲಭ್ಯವನ್ನು ಬಳಸಿದರು. ಇದರಿಂದಾಗಿ ನೆಲದ ಮೇಲೆ ಎಷ್ಟು ವೇಗವಾಗಿ ಬ್ರೌಸ್ ಮಾಡಲು ಸಾಧ್ಯವೋ ಹಾರುತ್ತಿರುವ ವಿಮಾನದೊಳಗೂ ಅಷ್ಟೇ ವೇಗದ ಇಂಟರ್ನೆಟ್ ಸಂಪರ್ಕದ ಅನುಭವ ಅವರಿಗಾಯಿತು.
ಕೆಲವರಂತೂ ತಮ್ಮ ಸಂಬಂಧಿಕರಿಗೆ ದಾರಿ ಪೂರ್ತಿ ಲೈವ್ ಪ್ರಸಾರ ನೀಡಿ ಸಂಭ್ರಮಿಸಿದರು. ಚೀನಾದ ವೈಮಾನಿಕ ಇತಿಹಾಸದಲ್ಲೇ ಇದು ದಾಖಲೆಯಾಗಿ ಸೇರ್ಪಡೆಗೊಂಡಿತು. ಉಪಗ್ರಹದ ಮೂಲಸೌಕರ್ಯವನ್ನು ಚೀನಾ ಸ್ಯಾಟಲೈಟ್ ಕಮ್ಯುನಿಕೇಷನ್ಸ್ ಕಂಪನಿ ಲಿಮಿಟೆಡ್ ಒದಗಿಸಿತ್ತು. ಇದು ಚೀನಾ ಏರೋಸ್ಪೇಸ್ ಸೈನ್ಸ್ ಮತ್ತು ಟೆಕ್ನಾಲಜಿ ಗ್ರೂಪ್ನ ವೃತ್ತಿಪರ ಉಪಸಂಸ್ಥೆಯಾಗಿದೆ.
ಇದಕ್ಕೂ ಮುನ್ನ ವಿಮಾನಗಳಲ್ಲಿ 12-19 ಜಿಎಚ್ಜೆಡ್ ಸಾಮರ್ಥ್ಯದ ಕೆಯು ಬ್ಯಾಂಡ್ ಬಳಸಿ ಹಾರಾತ್ತಿರುವ ವಿಮಾನದಲ್ಲಿ ಇಂಟರ್ನೆಟ್ ಸೌಲಭ್ಯ ನೀಡಲಾಗಿತ್ತು. ಆದರೆ, ಅದು ತುಂಬಾ ನಿಧಾನಗತಿಯದ್ದಾಗಿತ್ತು.