ಪ್ರೀತಿಯ ಮಗನನ್ನೇ ಕತ್ತು ಹಿಸುಕಿ ಕೊಲೆಗೈದ ತಾಯಿ: ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ...!

Mother
Published on

ಬ್ರಾಸಿಲಿಯಾ: ಪರಿಪೂರ್ಣ ಪಾಲಕರಾಗಿ ಗುರುತಿಸಿಕೊಂಡಿದ್ದ ತಾಯಿಯೊಬ್ಬಳು ತನ್ನ 11 ವರ್ಷದ ಮಗನನ್ನೇ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಬ್ರೆಜಿಲ್​ನ ರಿಯೊ ಗ್ರಾಂಡೆ ಡೊ ಸುಲ್ ರಾಜ್ಯದ ಪ್ಲಾನೆಟೋ ನಗರದಲ್ಲಿ ನಡೆದಿದೆ.

ಮಗನ ಅತಿಯಾದ ಮೊಬೈಲ್​ ಗೀಳಿನಿಂದ ಬೇಸತ್ತು ಜುಲೈ 2ರ ತಡರಾತ್ರಿ ಕೊಲೆಗೈದಿದ್ದಾಳೆ. ಆಕೆಯನ್ನು ಬ್ರೆಜಿಲ್​ ಪೊಲೀಸರು ಬಂಧಿಸಿದ್ದು, ಬಂಧಿತಳನ್ನು ಅಲೆಕ್ಸಾಂಡ್ರಾ ಡೌಗೋಕೆನ್ಸ್ಕಿ ಎಂದು ಗುರುತಿಸಲಾಗಿದ್ದು, ತಾಯಿಯಿಂದಲೇ ಕೊಲೆಯಾದ ದುರ್ದೈವಿ ರಾಫೆಲ್​ ಎಂದು ತಿಳಿದುಬಂದಿದೆ.

ರಾಫೆಲ್​ ತನ್ನ ಮೊಬೈಲ್​ನಲ್ಲಿ ಪ್ರತಿನಿತ್ಯ ತಡರಾತ್ರಿಯವರೆಗೂ ಆಡುವುದನ್ನು ಸಹಿಸದೇ ಕೊಲೆ ಮಾಡಿದ್ದಾಗಿ ಅಲೆಕ್ಸಾಂಡ್ರಾ ತಪ್ಪೊಪ್ಪಿಕೊಂಡಿರುವುದು ಪೊಲೀಸರಿಗೆ ಶಾಕ್​ ಆಗಿದೆ.

ಮಗ ರಫೇಲ್​ ತನ್ನ ತಾಯಿಯನ್ನು ಎಷ್ಟು ಇಷ್ಟ ಪಡುತ್ತೇನೆಂಬುದರ ಬಗ್ಗೆ ಮೊಬೈಲ್​ನಲ್ಲಿ ಕವನವೊಂದನ್ನು ರೆಕಾರ್ಡ್​ ಮಾಡಿದ್ದ. ಇದಾದ ಒಂದು ವಾರದಲ್ಲೇ ಭೀಕರ ಕೃತ್ಯ ಜರುಗಿದೆ. ತನ್ನನ್ನು ಹಾಗೂ ಸಹೋದರನನ್ನು ಚೆನ್ನಾಗಿ ನೋಡಿಕೊಳ್ಳುವ ತಾಯಿಗೆ ರಾಫೇಲ್​ ಕವನದಲ್ಲಿ ಧನ್ಯವಾದಗಳನ್ನು ಹೇಳಿದ್ದಾನೆ. ನನ್ನ ತಾಯಿಯೇ ನನಗೆಲ್ಲವೂ ಎಂದಿದ್ದಾನೆ.

33 ವರ್ಷದ ವಿಚ್ಛೇದಿತ ಅಲೆಕ್ಸಾಂಡ್ರಾ ಆರಂಭದಲ್ಲಿ ಪ್ರಕರಣದ ದಿಕ್ಕನ್ನು ತಪ್ಪಿಸಲು ಯತ್ನಿಸಿದ್ದಾಳೆ. ತನ್ನ ವರ್ತನೆ ಬಗ್ಗೆ ಪ್ರಶ್ನಿಸಿದ್ದಕ್ಕೆ ರಾಫೇಲ್​ ಮನೆ ಬಿಟ್ಟು ಓಡಿ ಹೋಗಿದ್ದಾನೆ ಎಂದು ಆರೋಪಿ ತಾಯಿ ಕತೆ ಕಟ್ಟಿದ್ದಾಳೆ. ಆದರೆ, ತಾಯಿಯ ಅನುಮಾನಕರ ವರ್ತನೆ ಕಂಡ ಪೊಲೀಸರು ತೀರ್ವ ತನಿಖೆ ನಡೆಸಿದ್ದಾರೆ. ಶ್ವಾನ ದಳ ಹಾಗೂ ರಾಫೇಲ್​ ಕುಟುಂಬದ ಆಪ್ತರ ಸಹಾಯದೊಂದಿಗೆ ಹುಡುಕಾಟ ನಡೆಸಿದ್ದಾರೆ.

ಸಾಕಷ್ಟು ಹುಡುಕಾಡಿದಾಗಲೂ ರಾಫೇಲ್​ ಸಿಗದಿದ್ದಾಗ, ಕೊನೆಗೆ ಸುಳ್ಳಿನೊಂದಿಗೆ ಬದುಕಲು ಸಾಧ್ಯವಿಲ್ಲ ಹಾಗೂ ಇದು ತನ್ನ ಆತ್ಮಸಾಕ್ಷಿಗೆ ಹೊರೆಯಾಗುತ್ತದೆ ಎಂದು ಮನವರಿಕೆಯಾಗಿ ಬಟ್ಟೆಯಿಂದ ತಾನೇ ಕತ್ತು ಹಿಸುಕಿ ಕೊಲೆ ಮಾಡಿದ್ದಾಗಿ ಅಲೆಕ್ಸಾಂಡ್ರಾ ಒಪ್ಪಿಕೊಂಡಿದ್ದಾಳೆ.

ಕೊಲೆ ಮಾಡಿ ಮಗನ ಮೃತದೇಹವನ್ನು ಒಂದು ದೊಡ್ಡ ಕಾರ್ಡ್​ಬಾಕ್ಸ್​ನಲ್ಲಿ ಅಲೆಕ್ಸಾಂಡ್ರಾ ಇಟ್ಟಿದ್ದಳು. ಇದೀಗ ಪ್ರಕರಣ ದಾಖಲಿಸಿರುವ ಪೊಲೀಸರು ಅಲೆಕ್ಸಾಂಡ್ರಾಳನ್ನು ಬಂಧಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net