

ನವದೆಹಲಿ: ಹಿಮದಿಂದ ಆವೃತವಾದ ಕೊಳದಲ್ಲಿ ಮುಳುಗುತ್ತಿದ್ದ ನಾಯಿಯನ್ನು ಮಹಿಳೆಯೊಬ್ಬರು ಜೀವ ಲೆಕ್ಕಿಸದೆ ನಾಯಿ ರಕ್ಷಿಸಿದ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.
ಕೊಳದ ಮಧ್ಯದಲ್ಲಿ ಸಿಲುಕಿ ಒದ್ದಾಡುತ್ತಿದ್ದ ನಾಯಿಯನ್ನು ನೋಡಿದ ಮಹಿಳೆ ಯಾವುದೇ ಭಯ ಇಲ್ಲದೆ ಧುಮುಕಿ ನಾಯಿಯನ್ನು ರಕ್ಷಿಸಿದರು. ಮಹಿಳೆ ನಾಯಿಯನ್ನು ರಕ್ಷಿಸಿದ 34 ಸೆಕೆಂಡುಗಳ ವಿಡಿಯೋ ತುಣುಕನ್ನು ಅರಣ್ಯ ಅಧಿಕಾರಿ ಸುಸಂತಾ ನಂದ ಅವರು ಅಪ್ಲೋಡ್ ಮಾಡಿದ್ದಾರೆ.
ವಿಡಿಯೋ ತುಣುಕು ಅಪ್ಲೋಡ್ ಆಗುತ್ತಲೇ ಅಂದಾಜು ಸಾವಿರ ಲೈಕ್ಗಳು ಸಿಕ್ಕಿವೆ. ನಾಯಿಯನ್ನು ರಕ್ಷಿಸಿದ ಮಹಿಳೆಯನ್ನು ನೆಟ್ಟಿಗರು ಹೊಗಳಿದ್ದಾರೆ. ಅಲ್ಲದೆ ಈ ವಿಡಿಯೋ ಹಂಚಿಕೊಂಡ ಭಾರತೀಯ ಅರಣ್ಯ ಇಲಾಖೆ ಅಧಿಕಾರಿ ಸುಸಂತಾ ನಂದಾ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ಕೆಲವರು ಈ ವಿಡಿಯೋವನ್ನು ಮರು ಹಂಚಿಕೆ ಮಾಡಿದ್ದಾರೆ. (ಏಜೆನ್ಸೀಸ್)