VIDEO| ಹಾವನ್ನು ಬರಿಗೈಯಲ್ಲಿ ರಕ್ಷಿಸಿದ ಮಹಿಳೆ; ಇವರ ಧೈರ್ಯಕ್ಕೆ ಭೇಷ್​ ಎಂದ ನೆಟ್ಟಿಗರು

Snake Rescue
Published on

ಮುಂಬೈ: ಹಾವನ್ನು ಕಂಡರ ಜನ ಭಯಬಿದ್ದು ದೂರ ಓಡಿ ಹೋಗುತ್ತಾರೆ. ಇನ್ನೂ ಕೆಲವರು ಕೋಲಿನಿಂದ ಅದನ್ನು ಓಡಿಸಲು ಪ್ರಯತ್ನಿಸುತ್ತಾರೆ. ಆದರೆ, ಕೆಲವೊಬ್ಬರು ಮಾತ್ರ ಅದನ್ನು ಹಿಡಿಯುವ ಧೈರ್ಯ ಮಾಡುತ್ತಾರೆ. ಮಹಿಳೆಯರಲ್ಲಿ ಪೈಕಿ ಕೆಲವರು ಆ ಸಾಹಸಕ್ಕೆ ಕೈ ಹಾಕಿ ಜಯ ಕಂಡಿದ್ದಾರೆ.

ಇದೀಗ ಘಟನೆಯೊಂದರಲ್ಲಿ ಮಹಿಳೆಯೊಬ್ಬರು ಬರಿ ಕೈಯಲ್ಲಿ ಹಾವನ್ನು ಹಿಡಿದಿರುವ ಘಟನೆ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಅವರ ಧೈರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ವೈರಲ್​ ಆಗಿರುವ ವಿಡಿಯೋದಲ್ಲಿ ಶ್ವೇತಾ ಎಂಬ ಮಹಿಳೆ ಅಂಗಡಿಯೊಳಗೆ ನುಗ್ಗಿರುವ ಹಾವೊಂದನ್ನು ಅತ್ಯಂತ ನಾಜೂಕ್ಕಾಗಿ ಹಿಡಿಯುತ್ತಾರೆ. ಇದನ್ನು ಕಂಡು ಒಂದು ಕ್ಷಣ ಬೆರಗುಗೊಂಡ ಜನ ಮಹಿಳೆಯ ಸಾಹಸಕ್ಕೆ ಭೇಷ್​ ಎಂದಿದ್ದಾರೆ.

ಇತ್ತ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದ್ದಂತೆ ಮಹಿಳೆಯ ಧೈರ್ಯಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ಧಾರೆ. ಹಾವನ್ನು ಕಂಡ ಕ್ಷಣವೇ ನಮ್ಮ ಪ್ರಾಣ ಹೋದಂತಾಗಿರುತ್ತದೆ. ನೀವು ಅದನ್ನು ಹೇಗೆ ಹಿಡಿದುಕೊಂಡಿದ್ದೀರಾ ಎಂದು ಕೆಲವರು ಕಮೆಂಟ್​ ಮಾಡಿದ್ದಾರೆ. ಇನ್ನೂ ಕೆಲವರು ಹಾವು ನಿಮ್ಮನ್ನು ಕಂಡ ತಕ್ಷಣ ಭಯದಿಂದ ಏನು ಮಾಡಲು ಆಗದೇ ಸುಮ್ಮನಾಗಿದೆ ಎಂದು ಕಮೆಂಟ್​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net