

ಕೊಡಗು: ಮಹಿಳೆಯೊಬ್ಬಳಿಗೆ ಚಾಕು ಇರಿದು ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣವೊಂದು ನಡೆದಿದೆ. ಕೊಡಗು ಜಿಲ್ಲೆಯಲ್ಲಿ ಇಂದು ಈ ಕೊಲೆ ನಡೆದಿದೆ. ಸೋಮವಾರಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಶಾಹಿರಾ (43) ಕೊಲೆಗೀಡಾದ ಮಹಿಳೆ. ಬೊಳ್ಳು ಎಂಬುದಾಗಿಯೂ ಕರೆಯಲ್ಪಡುತ್ತಿರುವ ಪೂವಯ್ಯ (42) ಎಂಬಾತನೇ ಕೊಲೆ ಆರೋಪಿ. ಶಾಹಿರಾ ಹಾಗೂ ಪೂವಯ್ಯ ಪರಿಚಿತರಾಗಿದ್ದು, ಹಲವು ವರ್ಷಗಳಿಂದ ಪರಸ್ಪರ ಬಲ್ಲರು ಎಂಬುದು ತಿಳಿದುಬಂದಿದೆ.
ಈ ಕೊಲೆಗೆ ಕಾರಣ ಏನು ಎಂಬ ಕುರಿತು ನಿಖರವಾದ ಮಾಹಿತಿ ಇನ್ನೂ ಖಚಿತಪಟ್ಟಿಲ್ಲ. ಆದರೆ ಶಾಹಿರಾ ಮನೆಯಲ್ಲಿ ಬೇರೊಬ್ಬ ವ್ಯಕ್ತಿ ಇದ್ದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದೆ ಎಂದು ಹೇಳಲಾಗುತ್ತಿದೆ. ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.