ದೇವಸ್ಥಾನಗಳ ಬಳಿ ಇರುವ ಎಲ್ಲ ಮಸೀದಿಗಳನ್ನು ತೆರವುಗೊಳಿಸಿ: ಸಚಿವರ ಹೇಳಿಕೆ..

Mosques
Published on

ಉತ್ತರಪ್ರದೇಶ: ಧಾರ್ಮಿಕ ಸಂಘರ್ಷಗಳ ವಿಚಾರಗಳು ದೇಶದಲ್ಲಿ ಅಲ್ಲಲ್ಲಿ ವ್ಯಕ್ತವಾಗುತ್ತಿರುವ ಬೆನ್ನಿಗೇ ಇಲ್ಲೊಬ್ಬರು ಸಚಿವರು ಅಂಥದ್ದೇ ಇನ್ನೊಂದು ಕೆಲಸಕ್ಕೆ ಮುಂದಾಗಿದ್ದಾರೆ. ಅವರ ಈ ಹೇಳಿಕೆ ಮತ್ತೊಂದು ವಿವಾದಕ್ಕೆ ಆಸ್ಪದ ನೀಡಿದರೂ ಅಚ್ಚರಿ ಏನಿಲ್ಲ ಎಂಬಂತಾಗಿದೆ.

ದೇವಸ್ಥಾನಗಳ ಬಳಿ ಇರುವ ಎಲ್ಲ ಮಸೀದಿಗಳನ್ನು ತೆರವುಗೊಳಿಸುವ ಕುರಿತು ಆದೇಶವೊಂದು ಹೊರಬಿದ್ದಿದೆ. ಅಂದಹಾಗೆ ಇದು ಕರ್ನಾಟಕಲ್ಲಿ ಅಲ್ಲ, ಉತ್ತರಪ್ರದೇಶದಲ್ಲಿ. ಉತ್ತರ ಪ್ರದೇಶದ ಮೀನುಗಾರಿಕಾ ಸಚಿವ ಸಂಜಯ್ ನಿಶಾದ್​ ಬುಧವಾರ ಸುದ್ದಿಗಾರರ ಜತೆ ಮಾತನಾಡುತ್ತ ಈ ವಿಷಯವನ್ನು ತಿಳಿಸಿದರು.

ದೇಶದಲ್ಲಿ ಧಾರ್ಮಿಕ ಸಂಘರ್ಷದ ವಾತಾವರಣ ಹರಡುತ್ತಿದ್ದು, ದೇವಸ್ಥಾನಗಳ ಬಳಿ ಇರುವ ಮಸೀದಿಗಳನ್ನು ತೆರವುಗೊಳಿಸಬೇಕಾದ ಅಗತ್ಯವಿದೆ. ಸಮೀಕ್ಷೆಗಳ ಪ್ರಕಾರ ಮಸೀದಿಗಳು ಭಯೋತ್ಪಾದಕರ ಸಂಪರ್ಕದಲ್ಲಿ ಇರುವುದು ಕಂಡುಬಂದಿದೆ. ಎಷ್ಟೋ ಸಲ ಅಲ್ಲಿಂದಲೇ ಭಯೋತ್ಪಾದಕರನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಅದಾಗ್ಯೂ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಮತ್ತು ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಗಲಭೆಗಳ ಪ್ರಮಾಣ ತಗ್ಗಿದೆ ಎಂಬುದಾಗಿಯೂ ಅವರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net