ಚಿಕ್ಕಮ್ಮಂದಿರ ಜತೆ ಅಸಭ್ಯ ವರ್ತನೆ; ಮಗನನ್ನು ತುಂಡುತುಂಡಾಗಿ ಕತ್ತರಿಸಿ ಕಾಲುವೆಗೆ ಎಸೆದ ತಾಯಿ

Crime Scene
Published on

ಅಮರಾವತಿ: ಅಸಭ್ಯ ವರ್ತನೆ ನೋಡಲಾರದೆ ಮಹಿಳೆಯೊಬ್ಬರು ಸಂಬಂಧಿಕರೊಂದಿಗೆ ಸೇರಿಕೊಂಡು ತನ್ನ ಮಗನನ್ನೇ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಆಂಧ್ರಪ್ರದೇಶಧ ಪ್ರಕಾಶಂ ಜಿಲ್ಲೆಯಲ್ಲಿ ನಡೆದಿದೆ. ಮೃತನನ್ನು ಶ್ಯಾಮ್​ಪ್ರಸಾದ್​ (35) ಎಂದು ಗುರುತಿಸಲಾಗಿದ್ದು, ಆರೋಪಿ ಲಕ್ಷ್ಮೀದೇವಿಯನ್ನು ಪೊಲೀಸರು ಹುಡುಕಾಡಲು ವಿಶೇಷ ತಂಡ ರಚಿಸಿದ್ಧಾರೆ.

ಘಟನೆ ಕುರಿತು ಮಾತನಾಡಿರುವ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಎ.ಆರ್. ದಾಮೋದರ್, ಮೃತ ಶ್ಯಾಮ್​ಪ್ರಸಾದ್​ ಅವಿವಾಹಿತನಾಗಿದ್ದು, ಮದ್ಯದ ಚಟಕ್ಕೆ ಬಿದ್ದಿದ್ದ ಶ್ಯಾಮ್ ತನ್ನ ಮನೆಯಲ್ಲಿನ ಮಹಿಳೆಯರೊಂದಿಗೆ ದೌರ್ಜನ್ಯ ನಡೆಸುತ್ತಿದ್ದ ಮತ್ತು ಅವನ ಕುಟುಂಬ ಸದಸ್ಯರು ಈ ಕೊಲೆಗೆ ಕಾರಣರಾಗಿರಬಹುದು. ಇದಲ್ಲದೆ ಆತ ಹೈದರಾಬಾದ್ ಮತ್ತು ನರಸರಾವ್ ಪೇಟೆಯಲ್ಲಿ ವಾಸವಿದ್ದ ತನ್ನ ಚಿಕ್ಕಮ್ಮಂದಿರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ. ಮಗನ ವಿಕೃತ ಮತ್ತು ಅಸಭ್ಯ ವರ್ತನೆಯನ್ನು ಸಹಿಸಲಾರದೆ ತಾಯಿ ಲಕ್ಷ್ಮೀ ದೇವಿ ಸಂಬಂಧಿಕರ ಜೊತೆ ಸೇರಿಕೊಂಡು ಮಗನನ್ನು ಕೊಲೆ ಮಾಡಿದ್ದು, ಕುಂಬಮ್ ಗ್ರಾಮದ ನಕಲಗಂಡಿ ಕಾಲುವೆಯಲ್ಲಿ ತುಂಡು ತುಂಡಾಗಿ ಕತ್ತರಿಸಿ ಎಸೆದಿದ್ದರು. 

ಶವವನ್ನು ಕಾಲುವೆಗೆ ಎಸೆದು ಬಳಿಕ ಏನೂ ಆಗಿಲ್ಲ ಎಂಬಂತೆ ಬಿಂಬಿಸಿದ್ದರು, ತಮ್ಮ ಮಗ ಶ್ಯಾಮ್ ಕಾಣೆಯಾಗಿದ್ದಾನೆ ಎಂದು ಆತನ ತಾಯಿ ಕಾಲೋನಿ ನಿವಾಸಿಗಳಿಗೆ ತಿಳಿಸಿದರು. ಪೊಲೀಸರು ಶ್ಯಾಮ್ ಕುಟುಂಬ ಸದಸ್ಯರನ್ನು ವಿಚಾರಣೆಗೆ ಒಳಪಡಿಸಿದಾಗ ತಾಯಿಯೇ ಕೊಲೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗುತ್ತಿದೆ. ಆರೋಪಿಗಳು ಪ್ರಸ್ತುತ ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ಮುಂದುವರೆಸಿದ್ದು, ಸೆಕ್ಷನ್ 103(1) ಮತ್ತು 238ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಎ.ಆರ್. ದಾಮೋದರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net