ನವದೆಹಲಿ: 2024ರಲ್ಲಿ ನಡೆದ ಲೋಕಸಭೆ ಚುನಾವಣೆ ಸಮಯದಲ್ಲಿ ಪಿತ್ರಾರ್ಜಿತ ಆಸ್ತಿ ಕುರಿತ ಹೇಳಿಕೆ ನೀಡುವ ಮೂಲಕ ದೊಡ್ಡ ವಿವಾದವನ್ನೇ ಹುಟ್ಟುಹಾಕಿದ್ದ ಕಾಂಗ್ರೆಸ್ ಸಾಗರೋತ್ತರ ಸಮಿತಿ ಅಧ್ಯಕ್ಷ ಸ್ಯಾಮ್ ಪಿತ್ರೋಡಾ (Sam Pitroda) ಇದೀಗ ಚೀನಾ ಭಾರತದ ಶತ್ರುವಲ್ಲ ಎಂದು ಹೇಳುವ ಮೂಲಕ ಮತ್ತೊಮ್ಮೆ ವಿವಾದದ ಕಿಡಿ ಹೊತ್ತಿಸಿದ್ದಾರೆ.
ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಸ್ಯಾಮ್ ಪಿತ್ರೋಡಾ (Sam Pitroda), ಚೀನಾದಿಂದ ಭಾರತಕ್ಕೆ ಯಾವ ತರಹದ ಬೆದರಿಕೆ ಇದೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಭಾರತ ಮತ್ತು ಚೀನಾ ಪರಸ್ಪರ ವಿರೋಧಿಗಳಲ್ಲ. ಚೀನಾ ಭಾರತದ ಶತ್ರು ರಾಷ್ಟ್ರವಲ್ಲ. ಆದರೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಉಭಯ ದೇಶಗಳ ನಡುವಿನ ಗಡಿ ಘರ್ಷಣೆಯನ್ನೇ ಬಂಡವಾಳ ಮಾಡಿಕೊಂಡು ಚೀನಾ ಬಗ್ಗೆ ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸುತ್ತಿದೆ.
Those who ceded away 40000 square km of our land to China, still see no threat from the Dragon.. no wonder Rahul Gandhi is in awe of China and was rooting for BRI one day before the IMEEC was announced .. the crux of Cong party’s obsessive fascination for China, lies hidden in… https://t.co/3lsTRgkAZn
— Tuhin A. Sinha तुहिन सिन्हा (@tuhins) February 17, 2025
ಭಾರತ-ಚೀನಾ ನಡುವಿನ ಗಡಿ ವಿವಾದವನ್ನು ಹೆಚ್ಚಾಗಿ ಉತ್ಪ್ರೇಕ್ಷಿಸಲಾಗುತ್ತದೆ. ಇದು ಅಮೆರಿಕವು ತನ್ನ ಶತ್ರು ರಾಷ್ಟ್ರವನ್ನು ವ್ಯಾಖ್ಯಾನಿಸುವ ಪ್ರವೃತ್ತಿಯ ಅನುಕರಣೆಯಾಗಿದೆ. ಚೀನಾವನ್ನು ವಿನಾಕಾರಣ ಭಾರತದ ಶತ್ರು ಎಂದು ಪರಿಗಣಿಸುವುದನ್ನು ನಾವು ಒಪ್ಪಬಾರದು ಎಂದು ಸ್ಯಾಮ್ ಪಿತ್ರೋಡಾ (Sam Pitroda) ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಸ್ಯಾಮ್ ಪಿತ್ರೋಡಾ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ನಾಯಕ ತುಹಿನ್ ಸಿನ್ಹಾ, ನಮ್ಮ 40000 ಚದರ ಕಿಲೋಮೀಟರ್ ಭೂಮಿಯನ್ನು ಚೀನಾಕ್ಕೆ ಬಿಟ್ಟುಕೊಟ್ಟವರು, ಇನ್ನೂ ಯಾವುದೇ ಬೆದರಿಕೆಯನ್ನು ಕಾಣುವುದಿಲ್ಲವೆಂದು ಹೇಳುತ್ತಿರುವುದು ನಮಗೆ ಅರ್ಥವಾಗುತ್ತಿಲ್ಲ. ಶತ್ರುರಾಷ್ಟ್ರಗಳ ಬಗ್ಗೆ ಕಾಂಗ್ರೆಸ್ಗಿರುವ ಒಲವು ಮತ್ತೊಮ್ಮೆ ಸಾಬೀತಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸುಮ್ಮನೆ ಓವರ್ಹೈಪ್ ಕೊಡಲಾಗುತ್ತಿದೆ… ಭಾರತ-ಪಾಕ್ ಪಂದ್ಯದ ಕುರಿತು Harbhajan Singh ಹೇಳಿಕೆ ವೈರಲ್
ರಾಜಮೌಳಿ ಅವರ ಸಿನಿಮಾದಲ್ಲಿ ಯಾವುದೇ ಲಾಜಿಕ್ ಇರುವುದಿಲ್ಲ ಬರೀ… Karan Johar ಹೇಳಿಕೆ ವೈರಲ್