ಸಾಕುನಾಯಿ ಕಾಪಾಡಲು ಹೋಗಿ ದುರಂತ ಅಂತ್ಯ ಕಂಡ ಮಹಿಳೆ! ಭಯಾನಕ ವಿಡಿಯೋ ವೈರಲ್​

Photo of US Woman
Published on

ಫ್ಲೋರಿಡಾ: ಸಾಕುನಾಯಿಯನ್ನು ಕೆರೆಯ ಬಳಿ ವಾಕಿಂಗ್​ಗೆ ಕರೆದುಕೊಂಡು ಹೋಗಿದ್ದ ಮಹಿಳೆಯೊಬ್ಬಳು ಮೊಸಳೆ ದಾಳಿಗೆ ಬಲಿಯಾಗಿರುವ ಘಟನೆ ಯುನೈಟೆಡ್​ ಸ್ಟೇಟ್ಸ್​ನ ಫ್ಲೋರಿಡಾದಲ್ಲಿ ನಡೆದಿದೆ. ಈ ಭಯಾನಕ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಗ್ಲೊರಿಯಾ ಸೆರ್ಗೆ (85) ಮೊಸಳೆ ದಾಳಿಗೆ ಬಲಿಯಾದ ಮಹಿಳೆ. ಸಾಕು ನಾಯಿಯ ಜೊತೆ ಗ್ಲೊರಿಯಾ, ಕೆರೆಯ ದಡದಲ್ಲಿ ವಾಕಿಂಗ್​ ಮಾಡುವಾಗ ಹೊಂಚು ಹಾಕಿಕೊಂಡು ಬಂದ ಮೊಸಳೆ ಮೊದಲು ನಾಯಿಯ ಮೇಲೆ ದಾಳಿ ಮಾಡಲು ಯತ್ನಿಸಿತು. ಆದರೆ, ಗ್ಲೊರಿಯಾ ನಾಯಿಯನ್ನು ಕಾಪಾಡಲು ಯತ್ನಿಸಿ, ಕೆಳಗೆ ಬಿದ್ದಿದ್ದಾರೆ. ತಕ್ಷಣವೇ ಮೊಸಳೆ ಗ್ಲೊರಿಯಾ ಮೇಲೆ ದಾಳಿ ಮಾಡಿ ಆಕೆಯನ್ನು ಕೆರೆಯ ಒಳಗೆ ಎಳೆದೊಯ್ದು ಕೊಂದು ಹಾಕಿದೆ.

ಮೊಸಳೆ ದಾಳಿಯನ್ನು ಕಂಡ ನೆರೆಮನೆಯವರು ಗ್ಲೋರಿಯಾಳನ್ನು ರಕ್ಷಿಸಲು ತುರ್ತು ಸಂಖ್ಯೆಗೆ ಕರೆ ಮಾಡಿದ್ದಾರೆ. ಆದಾಗ್ಯೂ, ಸಹಾಯಕ್ಕಾಗಿ ಯಾರಾದರೂ ಬರುವ ಮುನ್ನವೇ ಮೊಸಳೆ ಗ್ಲೋರಿಯರನ್ನು ಬಲಿಪಡೆದುಕೊಂಡಿತು.

ಗ್ಲೋರಿಯಾ ಶವ ಅರ್ಧ ತಿಂದಿರುವ ಸ್ಥಿತಿಯಲ್ಲಿ ಕೆರೆಯಲ್ಲಿ ಪತ್ತೆಯಾಗಿದೆ. ಸಾಕುಪ್ರಾಣಿಗಳೊಂದಿಗೆ ಕೆರೆ ದಡಕ್ಕೆ ತೆರಳದಂತೆ ಅಧಿಕಾರಿಗಳು ಸ್ಥಳೀಯರಿಗೆ ಎಚ್ಚರಿಕೆ ನೀಡಿದ್ದಾರೆ. ಒಂಬತ್ತು ತಿಂಗಳಲ್ಲಿ ಫ್ಲೋರಿಡಾದಲ್ಲಿ ಮೊಸಳೆಯಿಂದ ಕೊಲ್ಲಲ್ಪಟ್ಟ ಮೂರನೇ ವ್ಯಕ್ತಿ ಗ್ಲೋರಿಯಾ ಆಗಿದ್ದಾರೆ. (ಏಜೆನ್ಸೀಸ್​) ವಿಡಿಯೋ ಕೃಪೆ: Inside Edition

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net