More

    ಪತಿಯ ಜನನಾಂಗ ಕತ್ತರಿಸಿ ಕೊಲೆಗೈದ ಮಹಿಳೆ ತನ್ನ ಮಕ್ಕಳಿಗೆ ಹೇಳಿದ್ದು ಶಾಕ್​ ಆಗುವ ವಿಚಾರ!

    ಕೋಲ್ಕತ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಉದ್ರಿಕ್ತ ಮಹಿಳೆಯೊಬ್ಬಳು ಮೀನು ಕತ್ತರಿಸುವ ಚಾಕುವಿನಿಂದ ಪತಿಯ ತಲೆಗೆ ಹಲ್ಲೆ ಮಾಡಿದಲ್ಲದೆ, ಆತನ ಜನನಾಂಗವನ್ನೇ ಕತ್ತರಿಸಿ ಕೊಲೆ ಮಾಡಿರುವ ಘಟನೆ ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ

    ಘಟನೆಯು ಪಂಚ್ಲಾ ಪೊಲೀಸ್​ ಠಾಣಾ ವ್ಯಾಪ್ತಿಯ ಮಲಿಪುಕುರ್ ಗ್ರಾಮದಲ್ಲಿ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕೊಲೆಯಾದ ವ್ಯಕ್ತಿಯನ್ನು ಮೊಹ್ಸಿನ್​ ಮಲ್ಲಿಕ್​ ಎಂದು ಗುರುತಿಸಲಾಗಿದ್ದು, ಆತನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಮೃತನ ಪತ್ನಿ ಮನಿರಾ ಎಂಬಾಕೆಯನ್ನು ಬಂಧಿಸಲಾಗಿದೆ. ಹಲ್ಲೆ ಮಾಡಲು ಬಳಸಿದ ಚಾಕುವನ್ನು ಸಹ ಆರೋಪಿಯಿಂದ ವಶಕ್ಕೆ ಪಡೆಯಲಾಗಿದೆ.

    ಇದನ್ನೂ ಓದಿ: ಕೌನ್ಸಿಲ್​ ಸಭೆ ಮಧ್ಯೆಯೇ ಸೆಕ್ಸ್​ನಲ್ಲಿ ಬಿಜಿಯಾದ ದಂಪತಿ: ಗೊತ್ತಿದ್ರೂ ಮುಂದುವರಿದ ಚರ್ಚೆ, ವೈರಲ್​ ಆಯ್ತು ವಿಡಿಯೋ!

    ಕೊಲೆಗೆ ಕೌಟಂಬಿಕ ಕಾರಣವೆಂದು ಶಂಕಿಸಲಾಗಿದ್ದು, ಆರೋಪಿ ಮನಿರಾಳ ಮಾನಸಿಕ ಸ್ಥಿತಿ ಸರಿಯಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.

    ಒಬ್ಬ ಮಗ ಪೊಲೀಸರೊಂದಿಗೆ ಮಾತನಾಡಿದ್ದು, ಭಾನುವಾರ ಬೆಳಗ್ಗೆ ಎದ್ದೆವು. ಆವಾಗ ನಮ್ಮ ತಾಯಿ ಬೆಡ್​ರೂಮ್​ಗೆ ಹೋಗಿ ನೋಡಿ ನಾನೇನು ಮಾಡಿದ್ದೇನೆ ಎಂದು ಗೊತ್ತಾಗುತ್ತದೆ ಎಂದರು. ಹೋಗಿ ನೋಡುವಷ್ಟರಲ್ಲಿ ನಮ್ಮ ತಂದೆಯ ದೇಹ ಬ್ಲಾಂಕೆಟ್​ನಲ್ಲಿ ಸುತ್ತಿ ನೆಲದ ಮೇಲೆ ಇಡಲಾಗಿತ್ತು. ಸ್ಥಳದಲ್ಲಿ ತುಂಬಾ ರಕ್ತ ಹರಿದಿತ್ತು ಎಂದಿದ್ದಾರೆ.

    ಮನಿರಾಗೆ ಅನೇಕ ಬಾರಿ ವೈದ್ಯರ ಬಳಿ ಚಿಕಿತ್ಸೆ ಕೊಡಿಸಲಾಗಿತ್ತು. ಆಲ್ಲದೆ, ಸಾಕಷ್ಟು ಬಾರಿ ದಂಪತಿ ನಡುವೆ ಜಗಳ ನಡೆದಿದೆ. ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದೇವೆ ಎನ್ನುತ್ತಾರೆ ಪೊಲೀಸರು. (ಏಜೆನ್ಸೀಸ್​)

    ಇದನ್ನೂ ಓದಿ: ವರದಕ್ಷಿಣೆ ಕಿರುಕುಳದಿಂದ ನೊಂದ ಮಹಿಳೆಗೆ ಅನುಚಿತ ಸಂದೇಶ, ವಿಡಿಯೋ ಕಳಿಸಿದ ಎಸ್​ಐ ಅಮಾನತು

    ನೀವೂ ಬಳಸಬಹುದೇ ಇಂಥ ಸ್ಮಾರ್ಟ್​​ಫೋನ್ ಅನ್​ಲಾಕ್ ಪ್ಯಾಟರ್ನ್​​?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts