ಕೌನ್ಸಿಲ್​ ಸಭೆ ಮಧ್ಯೆಯೇ ಸೆಕ್ಸ್​ನಲ್ಲಿ ಬಿಜಿಯಾದ ದಂಪತಿ: ವೈರಲ್​ ಆಯ್ತು ವಿಡಿಯೋ!

Couple Video
Published on

ಬ್ರಾಸಿಲಿಯಾ: ಕರೊನಾ ವೈರಸ್​ ಹಿನ್ನೆಲೆಯಲ್ಲಿ ವರ್ಕ್​ ಫ್ರಮ್​ ಹೋಮ್​ ಇರುವುದರಿಂದ ರಾಜಕೀಯ ಸೇರಿದಂತೆ ಇನ್ನಿತರ ಕ್ಷೇತಗಳ ಸಭೆಗಳು ಬಹುತೇಕ ಆನ್​ಲೈನ್​ನಲ್ಲೇ ನಡೆಯುತ್ತಿವೆ. ಅದರಲ್ಲೂ ಜೂಮ್​ ಆ್ಯಪ್​ ಮೂಲಕವೇ ಹೆಚ್ಚು ಸಭೆಗಳು ನಡೆದಿವೆ. ಹೀಗಿರುವಾಗ ಸಭೆಯಲ್ಲಿ ಪಾಲ್ಗೊಳ್ಳುವ ಮುನ್ನ ತಮ್ಮ ವೈಯಕ್ತಿಕ ಕೆಲಸಗಳನ್ನು ಮಾಡುವ ವೇಳೆ ಅಪ್ಪಿತಪ್ಪಿ ಕ್ಯಾಮೆರಾ ಆನ್​ ಆಗಿದ್ದರೆ ಏನೆಲ್ಲಾ ಅನಾಹುತ ಆಹಬಹುದು ಎಂಬುದಕ್ಕೆ ಇದೊಂದು ಉದಾಹರಣೆಯಾಗಿದೆ.

ಬ್ರೆಜಿಲ್​ನ ರಿಯೋಡಿ ಜನೈರೋ ನಗರದ ಕೌನ್ಸಿಲ್​ ಸಭೆಯು ಜೂಮ್​ ಆ್ಯಪ್​ ಮೂಲಕ ನಡೆಯುವಾಗ ದಂಪತಿಯೊಬ್ಬರು ಲೈಂಗಿಕ ಕ್ರಿಯೆಯಲ್ಲಿ ತೊಡಗುವ ಮೂಲಕ ಎಲ್ಲರನ್ನೂ ಮುಜಗರಕ್ಕೀಡುಮಾಡಿದ್ದಾರೆ. ಕ್ಯಾಮೆರಾ ಆಫ್​ ಆಗಿದೆಯೋ? ಇಲ್ಲವೋ? ಎಂಬುದನ್ನು ಖಚಿತಪಡಿಸಿಕೊಳ್ಳದೇ ಮುಖಭಂಗ ಅನುಭವಿಸುವಂತಾಗಿದೆ.

ಅಂದಹಾಗೆ, ಕೌನ್ಸಿಲ್​ ಸಭೆಯನ್ನು ಸೋಶಿಯಾಲಿಸಂ ಆ್ಯಂಡ್​ ಲಿಬರ್ಟಿ ಪಕ್ಷದ ಸದಸ್ಯ ಲಿಯೊನೆಲ್​ ಬ್ರಿಜೊಲಾ ಎಂಬುವರು ಆಯೋಜಿಸಿದ್ದರು. ಸಭೆಯ ನಡುವೆಯೇ ದಂಪತಿ ಸೆಕ್ಸ್​ನಲ್ಲಿ ತೊಡಗಿರುವುದನ್ನು ನೋಡಿಯೂ ಅಥವಾ ನೋಡದೆ ಚರ್ಚೆ ಮುಂದುವರಿಸಿರುವುದು ವಿಡಿಯೋದಲ್ಲಿದೆ.

ರಿಯೋಡಿ ಜನೈರೋ ನಗರದ ಕೌನ್ಸಿಲ್​ ಸಭೆ ಅದಾಗಿತ್ತು. ಕರೊನಾ ವೈರಸ್​​ ಸಾಂಕ್ರಾಮಿಕ ಸಮಯದಲ್ಲಿ ಪುರಸಭೆಯ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಆಹಾರವನ್ನು ಹೇಗೆ ಖಾತರಿಪಡಿಸುವುದು ಎಂಬುದರ ಬಗ್ಗೆ ಚರ್ಚಿಸಲಾಗುತ್ತಿತ್ತು. ಇದರ ನಡುವೆ ದಂಪತಿಯ ಅಶ್ಲೀಲ ವಿಡಿಯೋವೂ ನೇರಪ್ರಸಾರವಾಗಿದೆ.

ಸೋಮವಾರ ಹತ್ತು ಗಂಟೆಗೆ ಸಭೆ ಆರಂಭವಾಗಿದೆ. ಇದರ ನಡುವೆ ಸಭೆಯಲ್ಲಿ ಭಾಗವಹಿಸಿದ್ದ ಸದಸ್ಯನೊಬ್ಬ ಚರ್ಚೆಯನ್ನು ಮೊಟಕುಗೊಳಿಸಿ ಕಂಪ್ಯೂಟರ್​ ಆಫ್​ ಮಾಡಿ ಸೆಕ್ಸ್​ನಲ್ಲಿ ತೊಡಗಿದ್ದಾರೆ. ಆದರೆ, ಕ್ಯಾಮೆರಾ ಆನ್​ನಲ್ಲಿದ್ದರಿಂದ ದಂಪತಿಯ ಸೆಕ್ಸ್​ ವಿಡಿಯೋ ಸಹ ನೇರ ಪ್ರಸಾರವಾಗಿದೆ. ಈ ಬಗ್ಗೆ ಗೊತ್ತಿದ್ದರೂ ಸದಸ್ಯರು ಅದರ ಬಗ್ಗೆ ಹೆಚ್ಚಿನ ಗಮನ ಕೊಡದೆ ತಮ್ಮ ಚರ್ಚೆಯನ್ನು ಸುಮಾರು ಗಂಟೆಗಳವರೆಗೂ ಮುಂದುವರಿಸಿದ್ದಾರೆ.

ಇನ್ನು ಸೆಕ್ಸ್​ನಲ್ಲಿ ತೊಡಗಿದ್ದ ಸದಸ್ಯನಿಗೆ ಶಿಕ್ಷೆಯಾಗಿದೆಯೋ? ಇಲ್ಲವೋ? ಎಂಬುದರ ಬಗ್ಗೆ ಮಾಹಿತಿ ಖಚಿತವಾಗಿಲ್ಲ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net