More

    ಆನ್​ಲೈನ್​ ಕ್ಲಾಸ್​ಗೆ ಮೊಬೈಲ್​ ಕೇಳಿದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ: ಪಾಲಕರ ಪ್ರತಿಕ್ರಿಯೆ ಬೆನ್ನಲ್ಲೇ ಆತ್ಮಹತ್ಯೆ

    ಚಾಮರಾಜನಗರ: ಮೊಬೈಲ್​ ಕೊಡಿಸಲಿಲ್ಲ ಎಂದು ಬಾಲಕಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಾಮರಾಜನಗರ ತಾಲ್ಲೂಕಿನ ಸಾಗಡೆ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

    ಹರ್ಷಿತಾ (15) ಸಾವನಪ್ಪಿದ ಹುಡುಗಿ. ಹರ್ಷಿತಾ ಸಾಗಡೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಕರೊನಾ ವೈರಸ್​ ಹಿನ್ನೆಲೆಯಲ್ಲಿ ಶಾಲೆಗಳು ಮುಚ್ಚಿರುವುದರಿಂದ ಸರ್ಕಾರ ಆನ್​ಲೈನ್​ ಶಿಕ್ಷಣಕ್ಕೆ ಮೊರೆ ಹೋಗಿದೆ.

    ಇದನ್ನೂ ಓದಿ: ಪಾಲಕರ ಭಯಕ್ಕೆ ಆತ್ಮಹತ್ಯೆ, ಕಾರು ಅಪಘಾತವಾಗಿರುವ ವಿಷಯ ತಿಳಿಯುತ್ತದೆ ಎಂದು ನೇಣಿಗೆ ಶರಣು

    ಈಗಾಗಲೇ ರಾಜ್ಯಾದ್ಯಂತ ಆನ್​ಲೈನ್ ಕ್ಲಾಸ್ ಪ್ರಾರಂಭವಾಗಿದೆ. ಹೀಗಾಗಿ ಮೊಬೈಲ್ ತೆಗೆದುಕೊಡುವಂತೆ ಪಾಲಕರನ್ನು ಹರ್ಷಿತಾ ಒತ್ತಾಯ ಮಾಡಿದ್ದಳು. ಹಣಬಂದ ಕೂಡಲೇ ಮೊಬೈಲ್ ಕೊಡಿಸುವುದಾಗಿ ಪಾಲಕರು ಹೇಳಿದ್ದರು.

    ಆದರೂ, ಮನನೊಂದ ಬಾಲಕಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಚಾಮರಾಜನಗರ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)

    VIDEO: ಸ್ವಾಮಿ ನಿತ್ಯಾನಂದನ ಕೈಲಾಸದಲ್ಲಿ ಸ್ಥಾಪನೆಯಾಗಿದೆ ಹಿಂದು ರಿಸರ್ವ್​ ಬ್ಯಾಂಕ್​; ಗಣೇಶ್​ ಚೌತಿಯಂದು ನೋಟು ಬಿಡುಗಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts