More

    ಜು.19ಕ್ಕೆ ಎಚ್.ಎಸ್.ರುದ್ರಪ್ಪ ನೆನಪು ಕಾರ್ಯಕ್ರಮ

    ಸೊರಬ: ರೈತರಿಗೆ ಹೋರಾಟ ಹಾಗೂ ಸಂಘಟನೆಯ ಅರಿವು ಮೂಡಿಸಿದ ಎಚ್.ಎಸ್.ರುದ್ರಪ್ಪ ಅವರ ನೆನಪು ಕಾರ್ಯಕ್ರಮವನ್ನು ಜು.19ರಂದು ಶಿವಮೊಗ್ಗದ ಮತ್ತೂರು ರಸ್ತೆಯ ತೀರ್ಥಪ್ಪ ಕ್ಯಾಂಪ್‌ನಲ್ಲಿ ಆಯೋಜಿಸಲಾಗಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಾಧ್ಯಕ್ಷ ಎನ್.ಮಂಜುನಾಥ ಗೌಡ ತಿಳಿಸಿದರು.
    ಪಟ್ಟಣದಲ್ಲಿ ಮಂಗಳವಾರ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ರೈತ ಹೋರಾಟ ಹಾಗೂ ಸಂಘಟನೆಯ ಅರಿವು ಮೂಡಿಸಬೇಕಾದರೆ ರುದ್ರಪ್ಪ ಅವರ ಜೀವನ ಪರಿಚಯ ಅತ್ಯಂತ ಮುಖ್ಯ. ಈ ನಿಟ್ಟಿನಲ್ಲಿ ಎಚ್‌ಎಸ್‌ಆರ್ ಅವರ ನೆನಪು ಕಾರ್ಯಕ್ರಮ ನಡೆಸಲಾಗುತ್ತಿದೆ. ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ರೈತರು ಆಗಮಿಸಲಿದ್ದಾರೆ ಎಂದರು.
    ತಾಲೂಕಿನಲ್ಲಿ ಅಡಕೆ ಕಳವು ಪ್ರಕರಣಗಳು ಹೆಚ್ಚಾಗುತ್ತಿದೆ. ಆಧುನಿಕತೆ ಮತ್ತು ತಂತ್ರಜ್ಞಾನ ಕ್ಷೇತ್ರ ಮುಂದುವರಿದಿದ್ದರೂ ಸಹ ಕಳ್ಳರ ಪತ್ತೆ ಮಾಡುವಲ್ಲಿ ಪೊಲೀಸ್ ಇಲಾಖೆ ನಿರ್ಲಕ್ಷೃ ಧೋರಣೆ ಅನುಸರಿಸುತ್ತಿದೆ. ತಾಲೂಕಿನ ಮುಡುಗೋಡು ಗ್ರಾಮದಲ್ಲಿ ಒಂದೇ ಗೋದಾಮಿನಲ್ಲಿ ತಿಂಗಳೊಳಗೆ ಎರಡು ಬಾರಿ ಕಳ್ಳತನವಾಗಿದೆ. ಇದರಿಂದ ರೈತ ಸಮೂಹ ಕಂಗಾಲಾಗಿದ್ದು ಪ್ರಕರಣವನ್ನು ಪೊಲೀಸರು ಪತ್ತೆ ಹಚ್ಚುವ ಮೂಲಕ ರೈತರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು. ಅಡಕೆ ಕಳ್ಳತನ ಕುರಿತು ಸಂಘಟನೆಯಿಂದ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
    ರೈತ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ ಅರೇಕೊಪ್ಪ, ಮಹಿಳಾ ಸಂಚಾಲಕಿ ಸುನೀತಾ, ತಾಲೂಕು ಅಧ್ಯಕ್ಷ ಈಶ್ವರಪ್ಪ, ಪ್ರಧಾನ ಕಾರ್ಯದರ್ಶಿ ಮೇಘರಾಜ್, ರೈತ ಮುಖಂಡರಾದ ಸೈಯದ್ ಶಫೀವುಲ್ಲಾ, ವೀರಭದ್ರಪ್ಪ ಗೌಡ, ಅಮೃತರಾಜ್, ಸತೀಶ್, ಬಸವರಾಜ ಬನ್ನೂರು, ನಾಗರಾಜ, ಯೋಗೇಶ್, ಸೋಮಶೇಖರ, ಬಸವರಾಜ, ನಾಗರಾಜ, ಬಸವರಾಜ, ಕೀರ ಸ್ವಾಮಿ, ರವಿ ಶಿಕಾರಿಪುರ, ಸುರೇಶ್ ನಾಯ್ಕ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts