More

    ಸಂಸ್ಕೃತಿ, ಸಂಸ್ಕಾರ ಬದುಕಿಗೆ ಅವಶ್ಯ

    ಸಾಗರ: ಸಂಸ್ಕೃತಿ, ಸಂಸ್ಕಾರ ಜೀವನಕ್ಕೆ ಬಹಳ ಮುಖ್ಯ. ಮಕ್ಕಳು ಶಿಕ್ಷಣದ ಜತೆಗೆ ನಮ್ಮ ಸಂಸ್ಕೃತಿಯ ಸಾರವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ವೇದಾಗಮ ಸಂಸ್ಕೃತ ಸಂವರ್ಧಿನಿ ಪಾಠಶಾಲೆ ಪ್ರಾಚಾರ್ಯ ಅನಂತ ಭಟ್ ಮೂರುಕಟ್ಟು ಹೇಳಿದರು.
    ಜೆ.ಸಿ.ರಸ್ತೆಯ ಶ್ರೀಧರಾಶ್ರಮ ಶಾಖೆಯಲ್ಲಿ ಸೋಮವಾರ ಗೀರ್ವಾಣ ಭಾರತೀ ಟ್ರಸ್ಟ್ ಮತ್ತು ವರದಹಳ್ಳಿ ಶ್ರೀಧರ ಸೇವಾ ಮಹಾಮಂಡಲದಿಂದ ಹಮ್ಮಿಕೊಂಡಿದ್ದ ವಸಂತ ವೇದ ಶಿಬಿರದ ಸಮಾರೋಪದಲ್ಲಿ ಮಾತನಾಡಿದರು.
    ಬಹುತೇಕ ಸಂದರ್ಭದಲ್ಲಿ ಪಾಲಕರು ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ ಹೇಳಿಕೊಡಲು ಸಾಧ್ಯವಾಗದಷ್ಟು ಕಾರ್ಯದೊತ್ತಡದಲ್ಲಿ ಇರುತ್ತಾರೆ. ಮಗುವಿಗೆ ಮನೆಯೇ ಮೊದಲ ಪಾಠಶಾಲೆ. ಹೆತ್ತವರು ಮನೆಯಲ್ಲಿ ಕಲಿಸುವ ಸಂಸ್ಕಾರ ಮಕ್ಕಳು ಜೀವಿತಾಧಿವರೆಗೂ ತಮ್ಮ ಜತೆ ಪೋಷಣೆ ಮಾಡಿಕೊಂಡು ಬರುತ್ತಾರೆ. ನಮ್ಮ ಧರ್ಮವನ್ನು ನಾವು ರಕ್ಷಣೆ ಮಾಡದಿದ್ದಲ್ಲಿ ಇನ್ಯಾರು ರಕ್ಷಣೆ ಮಾಡುತ್ತಾರೆ ಎಂದು ಪ್ರಶ್ನಿಸಿದರು.
    ಗಾಯತ್ರಿ ಮಂತ್ರ ಅತ್ಯಂತ ಶ್ರೇಷ್ಠ ಮತ್ತು ಶಕ್ತಿಶಾಲಿ. ಪ್ರತಿದಿನ ಮೂರು ಬಾರಿ ಗಾಯತ್ರಿ ಮಂತ್ರ ಪಠಣ ಮಾಡಬೇಕು ಎಂದು ಶಾಸ ಹೇಳುತ್ತದೆ. ಅಜ್ಞಾನದ ಕತ್ತಲಿನಿಂದ ಜ್ಞಾನದ ಬೆಳಕಿನ ಕಡೆಗೆ ಗಾಯತ್ರಿ ಮಂತ್ರ ಪಠಣ ನಮ್ಮನ್ನು ಕರೆದೊಯ್ಯುತ್ತದೆ. ಟ್ರಸ್ಟ್ ಆಯೋಜಿಸಿದ್ದ ವಸಂತ ವೇದ ಶಿಬಿರದಲ್ಲಿ ಹೆಚ್ಚು ಮಕ್ಕಳು ಪಾಲ್ಗೊಂಡು ನಮ್ಮ ಸನಾತನ ಧರ್ಮಾಚರಣೆ ಕುರಿತು ಅಭ್ಯಾಸ ಮಾಡಿರುವುದು ಸಂತೋಷದ ಸಂಗತಿ. ಇಲ್ಲಿ ಕಲಿತಿದ್ದನ್ನು ಬದುಕಿನಲ್ಲಿ ಅಳಡಿಸಿಕೊಳ್ಳಬೇಕು. ವೇದ ಮಂತ್ರಗಳ ಮಹತ್ವ ಅರಿತುಕೊಳ್ಳಬೇಕು ಎಂದರು.
    ಶ್ರೀಧರ ಸೇವಾ ಮಹಾಮಂಡಲ ಅಧ್ಯಕ್ಷ ಎಂ.ಜಿ.ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ವಿದ್ವಾನ್ ಸುಬ್ರಹ್ಮಣ್ಯ ಗಾಡಿಗೆರೆ, ತಿಮ್ಮಪ್ಪ ಶ್ರೀಧರಪುರ, ವಿಜೇತ ತಳಗೇರಿ, ವಿಜೇತ ಮಳಲಗದ್ದೆ, ಸುದರ್ಶನ್, ಅತ್ರಿ ಮೂರುಕಟ್ಟಾ, ನಾಗೇಂದ್ರ, ಆರ್ಯ, ಶ್ರೀಧರ್, ಗೌತಮ್, ಭಾರ್ಗವ ಬಾಪಟ್, ಚಿದಂಬರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts