More

    ಅಬ್ಬಬ್ಬಾ ಈ ಫ್ಯಾನ್ಸಿ ನಂಬರ್​ ಖರೀದಿಗೆ ಲಕ್ಷ ಲಕ್ಷ ಹಣ..! 4 ಕಾರ್​ ಬರ್ತಿದ್ವು ಎಂದ್ರು ನೆಟಿಜನ್ಸ್​!​

    ಹೈದರಾಬಾದ್: ನಿಮ್ಮ ಹೊಸ ಕಾರಿಗೆ ನಿಮ್ಮ ಆಯ್ಕೆಯ ನೋಂದಣಿ ಸಂಖ್ಯೆಗೆ ನೀವು ಎಷ್ಟು ಪಾವತಿಸುತ್ತೀರಿ? ಅಬ್ಬಬ್ಬಾ ಎಂದ್ರೂನು 5,000, 10,000, ಅಥವಾ ರೂ 1 ಲಕ್ಷವೇ? ಸರಿ. ಆದರೆ, ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಪ್ರಾಧಿಕಾರವು ನಡೆಸಿದ ಆನ್‌ಲೈನ್ ಹರಾಜಿನಲ್ಲಿ ಹೈದರಾಬಾದ್‌ನ ಕಾರು ಮಾಲೀಕ ಫ್ಯಾನ್ಸಿ ನೋಂದಣಿ ಸಂಖ್ಯೆ ‘9999’ ಅನ್ನು ಖರೀದಿಸಲು ಬರೋಬ್ಬರಿ 25.5 ಲಕ್ಷ ರೂ ನೀಡಿ ಎಲ್ಲರ ಕಣ್ಣು ಹುಬ್ಬೇರಿಸುವಂತೆ ಮಾಡಿದ್ದಾನೆ.

    ಇದನ್ನೂ ಓದಿ: ಹೊಯ್ಸಳ ವಾಹನದಲ್ಲಿ ವಸೂಲಿ ಮಾಡುತ್ತಿದ್ದ ಇಬ್ಬರು ಪೊಲೀಸ್ ಸಿಬ್ಬಂದಿ ಸಸ್ಪೆಂಡ್!

    ಹೈದರಾಬಾದ್​ನಲ್ಲಿ ಫ್ಯಾನ್ಸಿ ನೋಂದಣಿ ಸಂಖ್ಯೆಗಳಿಗಾಗಿ ಸೋಮವಾರ(ಮೇ.20) ಆನ್‌ಲೈನ್ ಹರಾಜು ನಡೆಸಲಾಯಿತು. ‘9999’ ಸಂಖ್ಯೆಯು ಗರಿಷ್ಠ 25,50,002 ರೂ.ಗಳನ್ನು ಪಡೆದುಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ, ಕಾರು ಮಾಲೀಕ ತಮ್ಮ ನೋಂದಣಿ ಫಲಕ ‘ಟಿಜಿ-09 9999’ ಗಾಗಿ ಇಲಾಖೆಗೆ ಮೊತ್ತವನ್ನು ಪಾವತಿಸಿದರು.

    ‘9999’ ಸಂಖ್ಯೆ ಹರಾಜಿನಲ್ಲಿ ಹನ್ನೊಂದು ಮಂದಿ ಭಾಗವಹಿಸಿದ್ದು, 25.5 ಲಕ್ಷ ರೂ.ಗೆ ಮಾರಾಟವಾಯಿತು. ಇಲ್ಲಿಯವರೆಗೆ ಫ್ಯಾನ್ಸಿ ನಂಬರ್‌ಗೆ ನೀಡಿದ ಅತ್ಯಧಿಕ ಬಿಡ್ ಮೊತ್ತ ಇದಾಗಿದೆ. ಇದು ತೆಲಂಗಾಣದಲ್ಲಿ ದಾಖಲೆಯಾಗಿದೆ ಎಂದು ಹೈದರಾಬಾದ್ ಜಂಟಿ ಸಾರಿಗೆ ಆಯುಕ್ತ ಸಿ ರಮೇಶ್ ತಿಳಿಸಿದ್ದಾರೆ.

    ಈ ನಡುವೆ ಈ ಸುದ್ದಿಯು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಕಾಳ್ಗಿಚ್ಚಿನಂತೆ ಹರಡಿದ್ದು, ಯಾವುದೋ ಒಂದು ಸಂಖ್ಯೆ ಪಡೆದು ಇಷ್ಟು ದೊಡ್ಡ ಮೊತ್ತದ ಹಣವನ್ನು ಬಡವರಿಗೆ ಖರ್ಚು ಮಾಡಬಹುದಿತ್ತು ಎಂದು ಬಳಕೆದಾರರು ಸಲಹೆ ನೀಡುತ್ತಿದ್ದಾರೆ.

    ಕೆಲವು ಬಳಕೆದಾರರು, ನಿಮ್ಮ ಹಣವನ್ನು ಬಯಸಿದ ರೀತಿಯಲ್ಲಿ ಖರ್ಚು ಮಾಡುವ ಅಧಿಕಾರ ನಿಮಗಿದೆ. ಎಂಜಾಯ್​ ಎಂದು ಹಕ್ಕನ್ನು ಸಮರ್ಥಿಸಿಕೊಂಡರೆ, ಹಲವರು ಇಂತಹ ಆಡಂಬರದ ಖರ್ಚು ಅನೇಕ ಸಾಮಾಜಿಕ ದುಷ್ಪರಿಣಾಮಗಳಿಗೆ ಮೂಲವಾಗಿದೆ. ಹೀಗೆ ಹಣ ಪೋಲು ಮಾಡದೆ ಬಡವರಿಗೆ ಸಹಾಯ ಮಾಡಬಹುದಿತ್ತು ಎಂದಿದ್ದಾರೆ.

    ಒಬ್ಬ ಬಳಕೆದಾರ “ಓ ಮೈ ಗಾಡ್​ , ಒಂದು ಫ್ಯಾನ್ಸಿ ನಂಬರ್‌ಗೆ 25.5 ಲಕ್ಷ ಖರ್ಚು ಮಾಡುವುದೇ? ಇದಕ್ಕೆ 4 ಕಾರು ಖರೀದಿಸಿ ಬಡವರಿಗೆ ಕೊಟ್ಟಿದ್ದರೆ ಜೀವನ ಕಟ್ಟಿಕೊಳ್ಳುತ್ತಿದ್ದರು ಎಂದಿದ್ದಾರೆ. ಮತ್ತೊಬ್ಬ ಬಳಕೆದಾರ, 1ಬಿಎಚ್​ಕೆ ಫ್ಲಾಟ್ ಖರೀದಿಸಿ ನಿರ್ಗತಿಕ ಕುಟುಂಬಕ್ಕೆ ದಾನ ಮಾಡುತ್ತಿದ್ದೆ, ಆದರೆ, ದೇವರು ನನ್ನನ್ನು ಶ್ರೀಮಂತನನ್ನಾಗಿ ಮಾಡದ ಕಾರಣ ನನಗೆ ಅಂತಹ ಅವಕಾಶ ಒದಗಿ ಬಂದಿಲ್ಲ” ಎಂದು ಪ್ರತಿಕ್ರಿಯಿಸಿದ್ದಾರೆ.

    ಖೈರತಾಬಾದ್ ರಸ್ತೆ ಸಾರಿಗೆ ಪ್ರಾಧಿಕಾರ (ಆರ್‌ಟಿಎ) ಕಚೇರಿಯಲ್ಲಿ ಫ್ಯಾನ್ಸಿ ನಂಬರ್‌ಗಳ ಹರಾಜಿನಲ್ಲಿ ಒಟ್ಟು 43 ಲಕ್ಷ ರೂ. ಆದಾಯ ಬಂದಿದೆ.

    ತಮಿಳುನಾಡಿನಲ್ಲಿ ಹೊಸ ಕೊರೊನಾ ವೈರಸ್ ಭೀತಿ..ಸರ್ಕಾರ ಹೇಳೋದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts