More

    ಹೊಯ್ಸಳ ವಾಹನದಲ್ಲಿ ವಸೂಲಿ ಮಾಡುತ್ತಿದ್ದ ಇಬ್ಬರು ಪೊಲೀಸ್ ಸಿಬ್ಬಂದಿ ಸಸ್ಪೆಂಡ್!

    ಬೆಂಗಳೂರು: ನಕಲಿ ಪೊಲೀಸರು ಹೊಯ್ಸಳ ವಾಹನದಲ್ಲಿ ಬಂದು ಜನರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸಾರ್ವಜನಿಕರು ಅಟ್ಟಿಸಿಕೊಂಡು ಹೋಗಿದ್ದ ಘಟನೆ ಸಂಬಂಧ ಇಬ್ಬರು ಪೊಲೀಸ್ ಸಿಬ್ಬಂದಿ ಅಮಾನತ್​ ಆಗಿದ್ದಾರೆ. ಬೆಂಗಳೂರು ಪೊಲೀಸ್​ ಆಯುಕ್ತ ಬಿ.ದಯಾನಂದ್​ಈ​ ಆದೇಶ ಹೊರಡಿಸಿದ್ದಾರೆ.

    ಇದನ್ನೂ ಓದಿ: 2 ವರ್ಷದಿಂದ ಲೈಂಗಿಕ ಕ್ರಿಯೆ ನಡೆಸಿಲ್ಲ! ಗಂಡನ ವಿರುದ್ಧ ಠಾಣೆಯ ಮುಂದೆ ಧರಣಿ ಕುಳಿತ ಪೊಲೀಸಪ್ಪನ ಪತ್ನಿ

    ಹೊಯ್ಸಳ ವಾಹನದಲ್ಲಿ ತೆರಳಿ ರಸ್ತೆ ಮೇಲೆ ನಿಂತು ಸಾರ್ವಜನಿಕರಿಂದ ಸುಲಿಗೆ ಮಾಡುತ್ತಿದ್ದ ಪೊಲೀಸರನ್ನು ಕಳ್ಳ ಕಳ್ಳ ಎಂದು ಕೂಗುತ್ತ ಸಾರ್ವಜನಿಕರು ಅಟ್ಟಿಸಿಕೊಂಡು ಹೋಗಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿತ್ತು.

    ಈ ಸಂಬಂಧ ರಾಜಗೋಪಾಲನಗರ ಠಾಣೆಯ ಎಎಸ್ಐ ರಾಮಲಿಂಗಯ್ಯ, ಹೆಡ್​ ಕಾನ್ಸ್​ಟೇಬಲ್​ಪ್ರಸನ್ನ ಕುಮಾರ್ ಅವರನ್ನು ಬೆಂಗಳೂರು ಪೊಲೀಸ್​ಆಯುಕ್ತ ಬಿ.ದಯಾನಂದ್ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ.

    ರಾಮಲಿಂಗಯ್ಯ ಮತ್ತು ಪ್ರಸನ್ನ ಕುಮಾರ್ ಹೊಯ್ಸಳ ವಾಹನದಲ್ಲಿ ಬಂದು ಜನರ ಬಳಿ ಹಣ ವಸೂಲಿ ಮಾಡುತ್ತಿದ್ದರು. ಇದನ್ನು ಕೆಲವರು ವಿಡಿಯೋ ಮಾಡಿದ್ದು ಬಳಿಕ ಕಳ್ಳ, ಕಳ್ಳ ಎಂದು ಅಟ್ಟಿಸಿಕೊಂಡು ಹೋಗಿದ್ದರು. ಈ ಘಟನೆ ಪೊಲೀಸ್​ಇಲಾಖೆಗೆ ಬಹಳ ಮುಜುಗರ ತಂದಿತ್ತು. ಹೀಗಾಗಿ ಪೊಲೀಸ್ ಕಮಿಷನರ್ ತನಿಖೆಗೆ ಆದೇಶ ನೀಡಿದ್ದರು. ಸದ್ಯ ಈಗ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.

    ತಮಿಳುನಾಡಿನಲ್ಲಿ ಹೊಸ ಕೊರೊನಾ ವೈರಸ್ ಭೀತಿ..ಸರ್ಕಾರ ಹೇಳೋದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts