More

    2 ವರ್ಷದಿಂದ ಲೈಂಗಿಕ ಕ್ರಿಯೆ ನಡೆಸಿಲ್ಲ! ಗಂಡನ ವಿರುದ್ಧ ಠಾಣೆಯ ಮುಂದೆ ಧರಣಿ ಕುಳಿತ ಪೊಲೀಸಪ್ಪನ ಪತ್ನಿ

    ಹೈದರಾಬಾದ್​: ನಿನ್ನೆ (ಮೇ 21) ರಾತ್ರಿಯಿಂದ ತೆಲಂಗಾಣದ ಸಿದ್ದಿಪೇಟೆ ಜಿಲ್ಲೆಯ ಕೊಮುರವಳ್ಳಿ ಪೊಲೀಸ್ ಠಾಣೆಯ ಎದುರು ಸಬ್​ ಇನ್ಸ್​ಪೆಕ್ಟರ್​ ಪತ್ನಿ ಧರಣಿ ಕುಳಿತಿರುವುದು ತೆಲುಗು ರಾಜ್ಯಗಳಲ್ಲಿ ಭಾರಿ ಸುದ್ದಿಯಾಗಿದೆ.

    ಕೊಮುರವಳ್ಳಿ ಠಾಣೆಯ ಎಸ್‌ಐ ನಾಗರಾಜು ವಿರುದ್ಧ ಪತ್ನಿ ಮಾನಸ ಪ್ರತಿಭಟನೆ ನಡೆಸುತ್ತಿದ್ದಾರೆ. ಎರಡು ವರ್ಷಗಳಿಂದ ತನ್ನೊಂದಿಗೆ ಲೈಂಗಿಕ ಸಂಬಂಧ ಹೊಂದಿಲ್ಲ ಎಂದು ಗಂಡನ ವಿರುದ್ಧ ಆರೋಪಿಸಿದ್ದಾರೆ. ನನ್ನಿಬ್ಬರು ಮಕ್ಕಳಿಂದಲೂ ನನ್ನನ್ನು ದೂರವಿಟ್ಟಿದ್ದಾರೆ. ಬೇರೊಬ್ಬ ಮಹಿಳೆಯನ್ನು ಮದುವೆಯಾಗಿರುವ ಕಾರಣಕ್ಕೆ ನನ್ನನ್ನೂ ದೂರ ಇಟ್ಟಿದ್ದಾರೆ ಎಂದು ಗಂಡನ ವಿರುದ್ಧ ಮಾನಸ ಆರೋಪ ಮಾಡಿದ್ದು, ನ್ಯಾಯ ಕೊಡಿಸುವಂತೆ ಆಗ್ರಹಿಸಿದ್ದಾರೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಿದರೂ ನಿರ್ಲಕ್ಷಿಸಲಾಗುತ್ತಿದೆ ಎಂದು ಠಾಣೆಯ ಮುಂದೆಯೇ ಆಕ್ರೋಶ ವ್ಯಕ್ತಪಡಿಸಿದರು.

    ಮಾನಸ ಮತ್ತು ನಾಗರಾಜು ಇಬ್ಬರು ಕರೀಂನಗರ ಜಿಲ್ಲೆಗೆ ಸೇರಿದವರು. ಹತ್ತು ವರ್ಷಗಳ ಹಿಂದೆಯೇ ವಿವಾಹವಾದರು. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಎರಡು ವರ್ಷಗಳ ಹಿಂದೆ ಎಸ್‌ಐ ನಾಗರಾಜು ಬೇರೊಬ್ಬ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಇಟ್ಟುಕೊಂಡು ಮಾನಸಗೆ ಕಿರುಕುಳ ನೀಡುತ್ತಿದ್ದ. ಅಲ್ಲದೆ, ಪತ್ನಿ ಮತ್ತು ಮಕ್ಕಳನ್ನು ತನ್ನೊಂದಿಗೆ ಇರಿಸಿಕೊಳ್ಳದೇ ಕರೀಂನಗರದಲ್ಲಿ ಇರಿಸಿದ್ದ. ಯಾರಿಗೂ ಅನುಮಾನ ಬರಬಾರದು ಅಂತ ಆಗಾಗ ಕರೀಂನಗರಕ್ಕೆ ಬರುತ್ತಿದ್ದ. ಇದರ ನಡುವೆ ವಿವಾಹೇತರ ಸಂಬಂಧ ಹೊಂದಿದ್ದ ಮಹಿಳೆಯೊಂದಿಗೆ ನಾಗರಾಜು ಎರಡನೇ ವಿವಾಹವಾಗಿದ್ದು, ಎರಡು ತಿಂಗಳ ಹಿಂದೆ ಕರೀಂನಗರಕ್ಕೆ ಬಂದು ಮಕ್ಕಳನ್ನು ಬಲವಂತವಾಗಿ ಕರೆದೊಯ್ದಿದ್ದಾರೆ ಎಂದು ಮಾನಸ ಆರೋಪಿಸಿದ್ದಾರೆ. ಮಕ್ಕಳು ಎಲ್ಲಿದ್ದಾರೆ ಎಂದು ಹೇಳುತ್ತಿಲ್ಲ. ಮೇಲಾಗಿ ವಿಚ್ಛೇದನ ನೀಡುವಂತೆ ಕಿರುಕುಳ ನೀಡುತ್ತಿರುವುದರಿಂದ ಆತ್ಮಹತ್ಯೆಯೊಂದೇ ದಾರಿ ಎಂದು ಮಾನಸ ಅಧಿಕಾರಿಗಳಿಗೆ ಪತ್ರ ಬರೆದಿರುವುದಾಗಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

    ಸಿದ್ದಿಪೇಟೆ ಸಿಪಿ, ಚೆರ್ಯಾಲ ಸಿಐ ಹಾಗೂ ಕರೀಂನಗರ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದರೂ ಯಾರೂ ಗಮನ ಹರಿಸುತ್ತಿಲ್ಲ. ಎಸ್‌ಐ ನಾಗರಾಜು ಮತ್ತು ಎರಡನೇ ಪತ್ನಿಯಿಂದಾಗಿ ಇಬ್ಬರು ಮಕ್ಕಳು ಅಪಾಯದಲ್ಲಿದ್ದಾರೆ. ಮಕ್ಕಳಿಗೆ ನ್ಯಾಯ ಕೊಡಿಸುವಂತೆ ಕೋಮುರವಳ್ಳಿ ಪೊಲೀಸ್ ಠಾಣೆ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು. ಎಸ್ಐ ನಾಗರಾಜು ರಜೆಯಲ್ಲಿರುವುದಾಗಿ ಠಾಣೆ ಸಿಬ್ಬಂದಿ ಇದೇ ಸಂದರ್ಭದಲ್ಲಿ ತಿಳಿಸಿದರು. ಆದರೂ ನ್ಯಾಯ ಸಿಗುವವರೆಗೂ ಪ್ರತಿಭಟನೆ ನಡೆಸುವುದಾಗಿ ಮಾಸನ ಹೇಳಿದ್ದಾರೆ.

    ಈ ಕುರಿತು ಕೋಮುರವಳ್ಳಿ ಪೊಲೀಸ್ ಠಾಣೆಯ ಸಿಐ ಶ್ರೀನು ಮಾತನಾಡಿದ್ದು, ಮೇಲಧಿಕಾರಿಗಳ ಆದೇಶದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

    RCB ಬೆಂಬಲಿಸಿದ ಧೋನಿ! ಕಿಂಗ್​ ಕೊಹ್ಲಿಗೆ ಕೂಲ್​ ಕ್ಯಾಪ್ಟನ್​ ಹೇಳಿದ್ದನ್ನು ಕೇಳಿದ್ರೆ ಖುಷಿಯಾಗೋದು ಖಂಡಿತ

    ಬೆಂಗಳೂರು ರೇವ್​ ಪಾರ್ಟಿ ಕೇಸ್​: ದಿನಕ್ಕೊಂದು ಹೈಡ್ರಾಮ ಮಾಡುತ್ತಿರುವ ನಟಿ ಹೇಮಾಗೆ ಬಿಗ್​ ಶಾಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts