More

    RCB ಬೆಂಬಲಿಸಿದ ಧೋನಿ! ಕಿಂಗ್​ ಕೊಹ್ಲಿಗೆ ಕೂಲ್​ ಕ್ಯಾಪ್ಟನ್​ ಹೇಳಿದ್ದನ್ನು ಕೇಳಿದ್ರೆ ಖುಷಿಯಾಗೋದು ಖಂಡಿತ

    ನವದೆಹಲಿ: ಸದ್ಯ ಎಲ್ಲೆಡೆ ನಡೆಯುತ್ತಿರುವುದು ಒಂದೇ ಚರ್ಚೆ ಅದೇನೆಂದರೆ, ಈ ಬಾರಿ ಐಪಿಎಲ್​ ಕಪ್ ಗೆಲ್ಲೋದು ಯಾರು? ಎಂಬುದು. ಪ್ಲೇಆಫ್ ತಲುಪಿರುವ ನಾಲ್ಕು ತಂಡಗಳಲ್ಲಿ ನಿನ್ನೆ (ಮೇ 21) ನಡೆದ ಮೊದಲ ಕ್ವಾಲಿಫೈಯರ್​ ಪಂದ್ಯದಲ್ಲಿ ಸನ್​ ರೈಸರ್ಸ್​ ಹೈದರಾಬಾದ್ (ಎಸ್​ಆರ್​ಎಚ್​)​ ತಂಡವನ್ನು ಮಣಿಸಿ ಕೋಲ್ಕತ ಫೈನಲ್​ಗೆ ಲಗ್ಗೆ ಇಟ್ಟಿದೆ. ಇಂದು (ಮೇ 22) ರಾಜಸ್ಥಾನ ರಾಯಲ್ಸ್​ ಮತ್ತು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ನಡುವೆ ಎಲಿಮಿನೇಟರ್​ ಪಂದ್ಯ ನಡೆಯಲಿದೆ. ಇಲ್ಲಿ ಗೆದ್ದವರು ಕ್ವಾಲಿಫೈಯರ್​ ಎರಡರಲ್ಲಿ ಎಸ್​ಆರ್​ಎಚ್​ ಎದುರು ಆಡಲಿದೆ. ಇದರಲ್ಲಿ ಗೆದ್ದವರು ಫೈನಲ್​ನಲ್ಲಿ ಕೋಲ್ಕತ ಜತೆ ಮುಖಾಮುಖಿಯಾಗಲಿದೆ.

    ತಮ್ಮ ತಮ್ಮ ತಂಡ ಕಪ್​ ಗೆಲ್ಲಲಿ ಅಂತಾ ಕೆಕೆಆರ್​, ಎಸ್​ಆರ್​ಎಚ್​, ಆರ್​ಆರ್​ ಮತ್ತು ಆರ್​ಸಿಬಿ ಅಭಿಮಾನಿಗಳು ಬಯಸಿದ್ದಾರೆ. ಮಾಜಿ ಕ್ರಿಕೆಟಿಗರು ಕೂಡ ತಮ್ಮ ನೆಚ್ಚಿನ ತಂಡಗಳ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಂಬಟಿ ರಾಯುಡು ಕೂಡ ಆರ್​ಸಿಬಿ ಗೆಲ್ಲಲಿ ಎಂದು ಬಯಸಿದ್ದಾರೆ. ಹಾಗಾದರೆ, ಟೀಮ್​ ಇಂಡಿಯಾ ಮಾಜಿ ನಾಯಕ ಎಂ.ಎಸ್​. ಧೋನಿ ಅವರು ಯಾರಿಗೆ ಬೆಂಬಲ ಸೂಚಿಸಿದ್ದಾರೆ ಎಂದು ತಿಳಿದುಕೊಳ್ಳುವ ಕುತೂಹಲ ಇದ್ದೇ ಇದೆ.

    ಧೋನಿ ಮತ್ತು ಕೊಹ್ಲಿ ನಡುವೆ ಉತ್ತಮ ಬಾಂಧವ್ಯ ಇರುವುದು ಎಲ್ಲರಿಗೂ ಗೊತ್ತೇ ಇದೆ. ಕೊಹ್ಲಿ, ಧೋನಿಯನ್ನು ಹಿರಿಯರು ಎಂದು ಪರಿಗಣಿಸಿದ್ದಾರೆ. ಧೋನಿ ನಾಯಕರಾಗಿದ್ದಾಗ ಭಾರತ ತಂಡವನ್ನು ಪ್ರವೇಶಿಸಿದ ಕೊಹ್ಲಿ, ನಂತರ ಧೋನಿಯ ಉತ್ತರಾಧಿಕಾರಿಯಾಗಿ ಧೋನಿ ನೆರವಿನಿಂದ ಭಾರತ ತಂಡದ ನಾಯಕನ ಜವಾಬ್ದಾರಿಯನ್ನು ಪಡೆದರು. ಬಳಿಕ ತಂಡವನ್ನು ಅಷ್ಟೇ ಪರಿಣಾಮಕಾರಿಯಾಗಿ ಮುನ್ನಡೆಸಿದರು. ಐಸಿಸಿ ಟ್ರೋಫಿಗಳನ್ನು ಗೆಲ್ಲದಿದ್ದರೂ ಕೊಹ್ಲಿ ಕೂಡ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಶ್ರೇಷ್ಠ ನಾಯಕನಾಗಿ ಸ್ಥಾನ ಪಡೆದರು. ಆದರೆ, ಐಪಿಎಲ್​ನಲ್ಲೂ ಕೊಹ್ಲಿ ಖಾತೆಯಲ್ಲಿ ಯಾವುದೇ ಕಪ್ ಇಲ್ಲ. ಕೊಹ್ಲಿ 17 ವರ್ಷಗಳಿಂದ ಐಪಿಎಲ್ ಟ್ರೋಫಿಗಾಗಿ ಹೋರಾಡುತ್ತಿದ್ದಾರೆ. ಆದರೆ ಈ ಬಾರಿ ಐಪಿಎಲ್​ ಹೋರಾಟ ಉತ್ತುಂಗಕ್ಕೇರಿದೆ ಎಂದೇ ಹೇಳಬೇಕು.

    ಮೊದಲ 8 ಪಂದ್ಯಗಳಲ್ಲಿ ಆರ್‌ಸಿಬಿ 7 ಪಂದ್ಯಗಳಲ್ಲಿ ಸೋತಿತ್ತು. ಅದರಲ್ಲಿಯೂ ಸತತ ಆರು ಸೋಲುಗಳನ್ನು ಕಂಡಿತು. ಇಂತಹ ಪರಿಸ್ಥಿತಿಯಲ್ಲಿ ಆರ್​ಸಿಬಿ ಪ್ಲೇ ಆಫ್ ತಲುಪುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಆದರೆ, ಅಸಾಧ್ಯವಾದುದನ್ನು ಸಾಧ್ಯವಾಗಿಸಿ, ಆರ್‌ಸಿಬಿ ಸತತ ಆರು ಭರ್ಜರಿ ಗೆಲುವುಗಳೊಂದಿಗೆ ಪ್ಲೇ-ಆಫ್ ತಲುಪಿದೆ. ಅದರಲ್ಲಿಯೂ ಚೆನ್ನೈ ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ ಆರ್​​ಸಿಬಿ ಅಗತ್ಯವಾಗಿ ಬೇಕಿದ್ದ ರನ್​ ಅಂತರದಲ್ಲಿ ಜಯಭೇರಿ ಬಾರಿಸಿ, ಪ್ಲೇ ಆಫ್​ ಪ್ರವೇಶ ಮಾಡಿದಲ್ಲದೆ, ಸಿಎಸ್‌ಕೆಯನ್ನು ಮನೆಗೆ ಕಳುಹಿಸಿತು.

    ಸಿಎಸ್ ಕೆ ವಿರುದ್ಧದ ಪಂದ್ಯದ ಬಳಿಕ ಕೊಹ್ಲಿ, ಸಿಎಸ್​ಕೆ ಡ್ರೆಸ್ಸಿಂಗ್ ರೂಂಗೆ ತೆರಳಿ ಧೋನಿಯನ್ನು ಭೇಟಿಯಾದರು. ಈ ಸಂದರ್ಭದಲ್ಲಿ ‘ವಿರಾಟ್ ನೀನು ಫೈನಲ್ ತಲುಪಬೇಕು, ಕಪ್ ಗೆಲ್ಲಬೇಕು, ಶುಭವಾಗಲಿ’ ಎಂದು ಹೇಳುವ ಮೂಲಕ ಧೋನಿ ಕೊಹ್ಲಿ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ. ಆರ್​ಸಿಬಿಗೆ ಧೋನಿ ಬೆಂಬಲ ಸೂಚಿಸಿರುವುದರಿಂದ ಆರ್‌ಸಿಬಿ ಅಭಿಮಾನಿಗಳು ಖುಷಿಯಾಗಿದ್ದಾರೆ. (ಏಜೆನ್ಸೀಸ್​)

    1 ವಾರಕ್ಕೂ ಮುಂಚೆಯೇ ಮ್ಯಾಚ್​ ರಿಸಲ್ಟ್​ ಪ್ರಕಟ: ಆರ್​ಸಿಬಿ ಗೆಲುವು ಮೊದಲೇ ಫಿಕ್ಸ್​ ಆಗಿತ್ತಂತೆ​!

    ಸಿಎಸ್​ಕೆ ಸೋತಿದ್ದಕ್ಕೆ ಕಣ್ಣೀರಿಟ್ಟಿದ್ದ ಅಂಬಟಿ ರಾಯುಡು ಆರ್​ಸಿಬಿ ಬಗ್ಗೆ ಕೊಟ್ರು ಅಚ್ಚರಿಯ ಹೇಳಿಕೆ!

    IPL 2024: ಫೈನಲ್​ ಪ್ರವೇಶಿಸುವ ಎರಡು ತಂಡಗಳನ್ನು ಹೆಸರಿಸಿದ ಎಬಿ ಡಿವಿಲಿಯರ್ಸ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts