'ನಾ ಪುರುಷನಿಂದ ಗರ್ಭಿಣಿಯಾಗಲಿಲ್ಲ' ಈ ಗರ್ಭಿಣಿಯ ಕಥೆ ಕೇಳಿದರೆ ನೀವೂ ಗಾಬರಿಯಾಗುತ್ತೀರ..

wind
Published on

ಜಕಾರ್ತಾ: ಗರ್ಭಿಣಿಯಾಗಿ ಮೂರು ನಾಲ್ಕು ತಿಂಗಳಾದರೂ ಗರ್ಭಿಣಿಗೇ ವಿಚಾರ ಗೊತ್ತಾಗದಂತಹ ಘಟನೆಗಳ ಬಗ್ಗೆ ಕೇಳಿರುತ್ತೀರಿ. ಆದರೆ ಈ ಪ್ರಕರಣ ಕೇಳಿದರೆ ನೀವು ಬಾಯಿ ಮೇಲೆ ಬೆರಳಿಡುವುದು ಗ್ಯಾರಂಟಿ. ಮಹಿಳೆಯೊಬ್ಬಳು ಗರ್ಭಿಣಿಯಾಗಿದ್ದಾಳೆ ಆದರೆ ಅದಕ್ಕೆ ಕಾರಣ ಪುರುಷನಲ್ಲ... ಮತ್ತಿನ್ಯಾರು ಎನ್ನುವುದಕ್ಕೆ ಮುಂದೆ ಓದಿ....

ಇಂಡೋನೇಷಿಯಾದ 25 ವರ್ಷದ ಮಹಿಳೆ ಸಿತಿ ಜೈನಾ ಇತ್ತೀಚೆಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಅಂದ ಹಾಗೆ ಆಕೆ ಈ ಹಿಂದೆಯೇ ಮದುವೆಯಾಗಿದ್ದು, ಒಂದು ಮಗುವಿದೆ. ಆದರೆ ಕೆಲವು ಕೌಟುಂಬಿಕ ಕಾರಣಗಳಿಂದಾಗಿ ಆಕೆ ಗಂಡನಿಂದ ದೂರವಿದ್ದಾಳೆ. ಯಾರೊಂದಿಗೂ ಬೆರೆಯದಿದ್ದರೂ ಆಕೆ ಗರ್ಭಿಣಿಯಾಗಿದ್ದು, ಮಗುವಿಗೆ ಜನ್ಮವಿತ್ತಿದ್ದಾಳೆ.

ಆ ಒಂದು ದಿನ ನಾನು ಮಧ್ಯಾಹ್ನ ಪ್ರಾರ್ಥನೆ ಮುಗಿಸಿ ನೆಲದ ಮೇಲೆ ಮಲಗಿದ್ದೆ. ಆಗ ಇದ್ದಕ್ಕಿದ್ದಂತೆ ಗಾಳಿ ನನ್ನೊಳಗೆ ಪ್ರವೇಶಿಸಿದಂತಾಯಿತು. ಅದಾಗಿ 15 ನಿಮಿಷಗಳಲ್ಲಿ ನನಗೆ ವಿಪರೀತ ಹೊಟ್ಟೆ ನೋವು ಶುರುವಾಯಿತು. ಅದಾದ ಮೇಲೆ ನಾನು ಗರ್ಭಿಣಿಯಾಗಿದ್ದೆ. ಗಾಳಿಯೇ ನನ್ನನ್ನು ಗರ್ಭಿಣಿ ಮಾಡಿದೆ ಎಂದು ಸಿತಿ ತಿಳಿಸಿದ್ದಾಳೆ.

ಗಾಳಿಯಿಂದ ಗರ್ಭಿಣಿಯಾದ ಮಹಿಳೆಯ ವಿಚಾರ ದೇಶದ ಉದ್ದಗಲಕ್ಕೂ ಹರಡಿದೆ. ಇದು ಹೇಗೆ ಸಾಧ್ಯ? ಎಂದು ಜನರು ಚರ್ಚೆ ಮಾಡಲಾರಂಭಿಸಿದ್ದಾರೆ. ಈ ವಿಚಾರ ಪೊಲೀಸರಿಗೂ ತಲುಪಿದ್ದು, ಪ್ರಕರಣದ ಸಂಬಂಧ ತನಿಖೆ ನಡೆಸಲು ಪೊಲೀಸರು ಮುಂದಾಗಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net