ಹೊಸ ಸೀರೆ ಕೊಡಿಸಲಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡ ಪತ್ನಿ! Woman

untitled-design-2025-10-10t180029089-68e8fc711be64
Published on

Woman: ಕರ್ವಾ ಚೌತ್​ ಸಮಾರಂಭಕ್ಕೆ ಪತಿ ಸೀರೆ ಕೊಡಿಸಲಿಲ್ಲ ಎಂಬ ಕಾರಣಕ್ಕೆ ಮಹಿಳೆಯೊಬ್ಬಳು (25) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿ ನಡೆದಿದೆ.

ಪೊಲೀಸರ ಪ್ರಕಾರ, ಬಬ್ಲಿ ಎಂದು ಗುರುತಿಸಲ್ಪಟ್ಟ ಮಹಿಳೆ ಧರ್ಮಪಾಲ್​ ಎಂಬುವವರೊಂದಿಗೆ 10 ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರು. ಈಕೆ ಹಬ್ಬದ ಸಲುವಾಗಿ ತನ್ನ ಗಂಡನ ಬಳಿ ಹೊಸ ಸೀರೆಯನ್ನು ಕೇಳಿದ್ದಾಳೆ. ಇದಕ್ಕೆ ಪತಿ ನಿರಾಕರಿಸಿದ್ದು, ಈ ವೇಳೆ ದಂಪತಿ ನಡುವೆ ಜಗಳವಾಗಿದೆ. ಈ ಕಾರಣದಿಂದ ಯುವತಿಯು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.

ಬಬ್ಲಿಯ ನಿರ್ಧಾರದಿಂದ ಕುಟುಂಬ ಸದಸ್ಯರು ಹಾಗೂ ನೆರೆಹೊರೆಯವರು ಆಘಾತಕ್ಕೊಳಗಾಗಿದ್ದು, ಅಧಿಕಾರಿಗಳಿಗೆ ತಕ್ಷಣ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ಪೊಲೀಸರು ಘಟನಾ ಸ್ಥಳಕ್ಕೆ ಬಂದು ವಿಚಾರಣೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಪ್ರಾಥಮಿಕ ವಿಚಾರಣೆಯಲ್ಲಿ ದಂಪತಿಗಳ ನಡುವೆ ನಡೆದ ವಿವಾದಲ್ಲಿ ಹತಾಶೆಗೊಂಡು ಬಬ್ಲಿ ಕಠಿಣ ಕ್ರಮಕೈಗೊಂಡಿದ್ದಾಳೆ ಎಂದು ತಿಳಿದುಬಂದಿದೆ. ಇನ್ನು ಈ ನಿಧನವು ಉತ್ತರಪ್ರದೇಶದಲ್ಲಿ ಚರ್ಚೆಗೆ ಗ್ರಾಸವಾಗಿದೆ ಎಂದು ತಿಳಿದುಬಂದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net