

ನವದೆಹಲಿ: ನಾವು ನೋಡಿರುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಆಗಿಂದಾಗೆ ಮನಕಲುಕುವ ವಿಡಿಯೋಗಳು ಆಗಿಂದಾಗೆ ವೈರಲ್ ಆಗುತ್ತಿರುತ್ತವೆ. ಇದೀಗ ಅದೇ ರೀತಿಯ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಮಹಿಳೆ ಹಾಗೂ ರೈಲ್ವೆ (Train) ಸಿಬ್ಬಂದಿಯ ನಡೆಯನ್ನು ಮೆಚ್ಚಿ ಟ್ವೀಟ್ ಮಾಡುತ್ತಿದ್ದಾರೆ.
ವೈರಲ್ ಆಗಿರುವ ವಿಡಿಯೋ ನೋಡುವುದಾದರೆ ತನ್ನ ಮಗು ಹೊಟ್ಟೆ ಹಸಿವಿನಿಂದ ಅಳುತ್ತಿರುವುದನ್ನು ನೋಡಿದ ತಾಯಿಯೊಬ್ಬರು ರೈಲು (Train) ಸ್ಟೇಷನ್ ತಲುಪಿದಾಗ ಇಳಿದು ಪ್ಲಾಟ್ಫಾರ್ಮ್ನಲ್ಲಿ ಹಾಲು ಖರೀದಿಸಲು ಮುಂದಾಗಿದ್ದಾರೆ. ಈ ವೇಳೆ ರೈಲು (Train) ದಿಢೀರ್ ಹೊರಟ್ಟಿದ್ದು, ಅದನ್ನು ಹತ್ತಲು ತಾಯಿ ವಿಫಲರಾಗಿದ್ದಾರೆ.
ಬಳಿಕ ಆಕೆ ತನ್ನ ಮಗುವನ್ನು ನೆನೆಸಿಕೊಂಡು ಅಳಲು ಶುರು ಮಾಡಿದ್ದು, ಇದನ್ನು ಗಮನಿಸಿದ ಸಿಬ್ಬಂದಿ ಹಾಗೂ ಸಾರ್ವಜನಿಕರು ಆಕೆಗೆ ಸಮಾಧಾನ ಮಾಡಿದ್ದಾರೆ. ತಾಯಿ ರೈಲು (Train) ಹತ್ತಲು ಯತ್ನಿಸುತ್ತಿರುವುದನ್ನು ಗಮನಿಸಿದ ಸಿಬ್ಬಂದಿ ಕೂಡಲೇ ಟ್ರೈನ್ಅನ್ನು ನಿಲ್ಲಿಸಿದ್ದು, ತಾಯಿ ಮತ್ತು ಮಗುವನ್ನು ಒಂದು ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಘಟನೆ ಯಾವ ರಾಜ್ಯದಲ್ಲಿ ನಡೆದಿದೆ ಎಂಬುದು ಈವರೆಗೆ ತಿಳಿದು ಬಂದಿಲ್ಲ. ಆದರೆ, ವಿಡಿಯೋ ನೋಡಿರುವಂತಹ ನೆಟ್ಟಿಗರು ರೈಲ್ವೆ (Train) ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಮಾನವೀಯತೆ ಇನ್ನೂ ಜೀವಂತವಾಗಿದೆ ಎಂದು ಕಮೆಂಟ್ ಹಾಕಿದ್ದಾರೆ. ಡಾ. ಶೀತಲ್ ಯಾದವ್ ಎಂಬುವವರು ಈ ವಿಡಿಯೋವನ್ನು ಹಂಚಿಕೊಂಡಿದ್ದು, ಈವರೆಗೆ 166.2K ವೀವ್ಸ್ ಪಡೆದುಕೊಂಡಿದೆ.