

ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ಬಾಸ್ (BiggBoss) ಆರಂಭವಾಗಿ 14 ವಾರಗಳು ಕಳೆದಿದ್ದು, ಫಿನಾಲೆಗೆ ಇನ್ನೂ ಎರಡು ವಾರಗಳು ಬಾಕಿ ಉಳಿದಿದೆ. ಟಾಸ್ಕ್ನ ವಿಚಾರಕ್ಕೆ ಬರುವುದಾದರೆ ಸ್ಫರ್ಧಿಗಳು ನಾ ಮುಂದು, ತಾ ಮುಂದು ಎಂಬಂತೆ ಭಾಗಿಯಾಗುತ್ತಿದ್ದು, ಈ ವಾರದ ಟಾಸ್ಕ್ ಅದಕ್ಕೆ ಪ್ರಮುಖ ಸಾಕ್ಷಿಯಾಗಿದೆ. ಟಿಕೆಟ್ ಫಿನಾಲೆ ಎಂಬ ಹೆಸರಿನಲ್ಲಿ ನಡೆಯುತ್ತಿರುವ ಈ ಟಾಸ್ಕ್ನಲ್ಲಿ ಸ್ಫರ್ಧಿಗಳು ಉತ್ತಮ ಪ್ರದರ್ಶನ ನೀಡುತ್ತಿದ್ದು, ಚೈತ್ರಾ ಕುಂದಾಪುರಗೆ ಫಿನಾಲೆ ಟಿಕೆಟ್ ಮಿಸ್ ಆಗುವ ಸಾಧ್ಯತೆ ಇದೆ.
ಚೈತ್ರಾ ಕೈ ತಪ್ಪುತ್ತಾ ಫಿನಾಲೆ ಟಿಕೆಟ್? ಎಂಬ ಶೀರ್ಷಿಕೆಯಡಿ ರಿಲೀಸ್ ಆಗಿರುವ ಪ್ರೋಮೋ ನೋಡುವುದಾದರೆ ಮನೆಯ ಇತರೆ ಸ್ಫರ್ಧಿಗಳು ನಿಮ್ಮೊಳಗೆ ಚರ್ಚಿಸಿ ಟಿಕೆಟ್ ಟು ಫಿನಾಲೆ ಓಟದಿಂದ ಹೊರಗಿಡಬೇಕು ಎಂದು ಬಿಗ್ಬಾಸ್ ಹೇಳುತ್ತಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸ್ಫರ್ಧಿಗಳು ಚೈತ್ರಾ ಅವರ ಹೆಸರನ್ನು ಪ್ರಸ್ತಾಪಿಸಿ ಕಾರಣಗಳನ್ನು ನೀಡುತ್ತಾರೆ. ಮಂಜು, ಧನರಾಜ್ ಹಾಗೂ ಗೌತಮಿ ನೀಡಿರುವ ಕಾರಣಗಳನ್ನು ಪ್ರೋಮೋದಲ್ಲಿ ಉಲ್ಲೇಖಿಸಲಾಗಿದೆ.
ಮೊದಲಿಗೆ ಮಾತನಾಡುವ ಮಂಜು ವಾದ, ವಾದ, ವಾದ ಎಂದು ಹೇಳಿದ್ದಾರೆ. ತಪ್ಪು ಸರಿಮಾಡಿಕೊಳ್ಳುವ ಗುಣ ಚೈತ್ರಾ ಅವರಲ್ಲಿ ಇಲ್ಲ ಎಂದು ಧನರಾಜ್ ಹೇಳಿದ್ದಾರೆ. ಎಲ್ಲರೂ ಒಬ್ಬರ ಹೆಸರನ್ನೇ ತೆಗೆದುಕೊಳ್ಳುತ್ತಾರೆ ಅಂದ್ರೆ ಅವರ ಕಡೆಯಿಂದ ಪದೇ, ಪದೇ ತಪ್ಪು ಆಗುತ್ತಾ ಇದೆ ಎಂದು ಅರ್ಥ ಎಂದು ಗೌತಮಿ ಕಾರಣವನ್ನು ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಚೈತ್ರಾಒಬ್ಬರನ್ನ ಟಾರ್ಗೆಟ್ ಮಾಡಿ ಬಹಳ ಸುಲಭವಾಗಿ ಪ್ಲಾನ್ ಮಾಡುತ್ತಾರೆ. ಈ ನೂರು ದಿನವೂ ಈ ಮನೆಯಲ್ಲಿ ನಡೆದಿದ್ದು ಇದೆ. ಆಡೋದಕ್ಕೆ ಕೊಡುತ್ತಾ ಇರಲಿಲ್ಲ. ಇದೇ ರೀತಿ ಟಾರ್ಗೆಟ್ ಮಾಡಿ ಆಟದಿಂದ ಹೊರಗಡೆ ಇಟ್ಟಿದ್ದಾರೆ. ಆಡೋಕೆ ಈಗ ಇನ್ನು ಬರ್ತಿದ್ದೆ ಆಗಲೇ ಅಡ್ಡಗಾಲು ಹಾಕಿದ್ದಾರಲ್ಲಾ ಎಂದು ಚೈತ್ರಾ ಕುಂದಾಪುರ ಗುಡುಗಿದ್ದಾರೆ.
ಭರಪೂರ ಮನರಂಜನೆಯ ಜೊತೆಗೆ ವಿವಾದಗಳನ್ನು ಹುಟ್ಟು ಹಾಕುವ ಬಿಗ್ಬಾಸ್ (BiggBoss), ಕಿರುತೆರೆ ಲೋಕದ ಜನಪ್ರಿಯ ಶೋಗಳಲ್ಲಿ ಒಂದೆಂದರೆ ತಪ್ಪಾಗಲಾರದು. ಪ್ರೀತಿ, ಸ್ನೇಹ ಸಂಬಂಧಗಳಿಗೆ ಈ ಶೋ ಬೆಸುಗೆಯಾಗುತ್ತದೆ. ಇಲ್ಲಿ ನಗು, ಕಣ್ಣೀರು, ಕೋಪ, ಮುನಿಸು ಮತ್ತು ಮನಸ್ತಾಪಗಳ ಮಿಶ್ರಣವು ಇದೆ. ಟಾಸ್ಕ್ ನೀಡುವುದರ ಜೊತೆಗೆ ಜೀವನದ ಪಾಠವನ್ನು ಹೇಳಲಾಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ವಾರದ ಕೊನೆಯಲ್ಲಿ ನಟ ಕಿಚ್ಚ ಸುದೀಪ್ ಸರಿ-ತಪ್ಪುಗಳ ತಿದ್ದುವಿಕೆ ಶೋಗೆ ಹೊಸ ಆಯಾಮವನ್ನು ತಂದುಕೊಡುತ್ತದೆ. ಈ ಎಲ್ಲ ಕಾರಣಗಳಿಂದ ಈ ಶೋ ವಿಶೇಷ ಎನಿಸಿಕೊಂಡಿದ್ದು, ಕಿರುತೆರೆ ಲೋಕದಲ್ಲಿ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದುಕೊಂಡಿದೆ.