

ಲಾತುರ್: ಮಹಿಳೆಯೋರ್ವರು ಬೇಳೆ ಸಂಸ್ಕರಣಾ ಯಂತ್ರದಲ್ಲಿ ಬಿದ್ದು ದಾರುಣವಾಗಿ ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದ ಲಾತುರ್ ಜಿಲ್ಲೆಯ ಮಿಲ್ವೊಂದರಲ್ಲಿ ಘಟನೆ ನಡೆದಿದೆ.
ಮಾಯಾ ಬಾಜುಲ್ಗೆ (35) ಎಂಬ ಮಹಿಳೆ ಅದೇ ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದರು. ಶನಿವಾರ ಮಧ್ಯಾಹ್ನ ಮಶಿನ್ನ ಒಂದು ಭಾಗದಲ್ಲಿ ನಿಂತು, ಯಂತ್ರದೊಳಗೆ ತೊಗರಿ ಬೇಳೆಯನ್ನು ಸುರಿಯುತ್ತಿದ್ದರು. ಆದರೆ ಕೆಲವೇ ಹೊತ್ತಿನಲ್ಲಿ ಆಕೆ ನಿಂತಿದ್ದ ಮಶಿನ್ ಪ್ಲೇಟ್ ಅಲುಗಾಡಿ, ಆಯತಪ್ಪಿದ್ದರಿಂದ ಮಾಯಾ ಯಂತ್ರದೊಳಗೆ ಬಿದ್ದು ಸಿಲುಕಿಕೊಂಡು, ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಲಂಬ್ ರಸ್ತೆಯಲ್ಲಿರುವ ಬಾಲಾಜಿ ಹಣ್ಣು ಮತ್ತು ಬೇಳೆ ಸಂಸ್ಕರಣಾ ಘಟಕದಲ್ಲಿ ದುರ್ಘಟನೆ ನಡೆದಿದೆ. ಪ್ರಕರಣದ ದಾಖಲಿಸಿಕೊಂಡಿದ್ದೇವೆ ಎಂದು ಎಂಐಡಿಸಿ ಪೊಲೀಸ್ ಠಾಣಾಧಿಕಾರಿ ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್)