ನವದೆಹಲಿ: ಕೆಲ ದೇಶಗಳಿಗೆ ಹೋಲಿಕೆ ಮಾಡಿದರೆ ಭಾರತದಲ್ಲಿ ಮಾಡಿದ ಕೆಲಸಕ್ಕೆ ಸಿಗುವ ಸಂಬಳ ಬಹಳ ಕಡಿಮೆ ಎಂಬ ಮಾತುಗಳು ಬಹಳ ಹಿಂದಿನಿಂದಲೂ ಕೇಳಿಬರುತ್ತಿದೆ. ಆದರೆ, ಈ ಒಂದು ಸುದ್ದಿ ಅದನ್ನು ಸುಳ್ಳಾಗಿಸಿದೆ. ಏಕೆಂದರೆ, ಯುವತಿಯೊಬ್ಬಳು ಕೇವಲ ಮೂರೇ ಗಂಟೆಯಲ್ಲಿ 4 ಲಕ್ಷ ರೂ.ಗೂ ಅಧಿಕ ಸಂಪಾದನೆ ( Earning ) ಮಾಡುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾಳೆ.
ಸೋಶಿಯಲ್ ಮೀಡಿಯಾ ಸ್ಟ್ರಾಟೆಜಿಸ್ಟ್ ಆಗಿರುವ ಶ್ವೇತಾ ಕುಕ್ರೇಜಾ ( Shweta Kukreja ), ತನ್ನ ಗ್ರಾಹಕರೊಬ್ಬರಿಂದ ಹಣದ ಸ್ವೀಕರಿಸಿದ ಮೆಸೇಜ್ ಸ್ಕ್ರೀನ್‌ಶಾಟ್ ಅನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ. ಗ್ರಾಹಕರೊಬ್ಬರಿಗೆ ಸಾಮಾಜಿಕ ಜಾಲತಾಣ ಕಾರ್ಯತಂತ್ರದ ಕುರಿತು ಸಲಹೆ ನೀಡಿದ್ದಕ್ಕಾಗಿ 4.4 ಲಕ್ಷ ರೂಪಾಯಿಗಳನ್ನು ಸ್ವೀಕರಿಸಿದೆ ಎಂದು ಶ್ವೇತಾ ಬಹಿರಂಗಪಡಿಸಿದ್ದಾರೆ.
ಕೇವಲ ಮೂರು ಗಂಟೆಗಳ ಕೆಲಸಕ್ಕಾಗಿ ಗ್ರಾಹಕರೊಬ್ಬರಿಂದ ಈ ತಿಂಗಳು ನಾನು ಪಡೆದ ಸಂಭಾವನೆ ಬರೋಬ್ಬರಿ 4.4 ಲಕ್ಷ ರೂಪಾಯಿಗಳು. ಈ ರೀತಿಯ ದಿನಗಳು ನನ್ನ ಕೆಲಸದ ಮೇಲಿನ ಸಾರ್ಥಕತೆಯನ್ನು ತಿಳಿಸುತ್ತದೆ ಶ್ವೇತಾ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದು, ನೆಟ್ಟಿಗರ ಗಮನ ಸೆಳೆದಿದೆ.
ಶ್ವೇತಾ ಹಂಚಿಕೊಂಡಿರುವ ಹಣ ಸ್ವೀಕರಿಸಿದ ಮೆಸೇಜ್ ಸ್ಕ್ರೀನ್‌ಶಾಟ್, ಕೆಲವೇ ಗಂಟೆಗಳಲ್ಲಿ 7,70,000 ಲೈಕ್‌ಗಳನ್ನು ಗಳಿಸಿದೆ. ಅಲ್ಪಾವಧಿಯಲ್ಲಿ ಯುವತಿಯ ಗಣನೀಯ ಗಳಿಕೆಯನ್ನು ಕಂಡು ಅನೇಕ ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ. ಅನೇಕರು ಆಕೆಗೆ ಅಭಿನಂದನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.
ಕೆಲ ನೆಟ್ಟಿಗರು ಯುವತಿಯ ವೃತ್ತಿ ಮತ್ತು ಆಕೆಯ ಅರ್ಹತೆಗಳ ಬಗ್ಗೆ ವಿಚಾರಿಸುತ್ತಿದ್ದಾರೆ. ಮೂರೇ ಗಂಟೆಯಲ್ಲಿ ಇಷ್ಟೊಂದು ಹಣ ಸಂಪಾದಿಸುವಂತಹ ಹುದ್ದೆ ಯಾವುದು? ನಮಗೂ ಸ್ವಲ್ಪ ಹೇಳಿಕೊಡುತ್ತೀರಾ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. (ಏಜೆನ್ಸೀಸ್)
ರಾಯನ್ ಸಿನಿಮಾದ ಧನುಷ್ ಸಹೋದರಿ ನಿಜ ಜೀವನದಲ್ಲಿ ಹೇಗಿದ್ದಾರೆ ನೋಡಿ! ಹಾಟ್ ಫೋಟೋಗಳು ವೈರಲ್ | Raayan