ಹಾರ್ದಿಕ್​ಗೆ ಡಿವೋರ್ಸ್​ ಕೊಟ್ಟ ನತಾಶಾ ಈಗ​ ಏನು ಮಾಡ್ತಿದ್ದಾರೆ ಗೊತ್ತಾ? ವಿಡಿಯೋ ವೈರಲ್, ಪಾಂಡ್ಯ ಫುಲ್​ ಟ್ರೋಲ್ | Natasa Stankovic

Natasa Stankovic
Published on

ಮುಂಬೈ: ಟೀಮ್​ ಇಂಡಿಯಾದ ಸ್ಟಾರ್​ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ( Hardik Pandya ) ಮತ್ತು ಜನಪ್ರಿಯ ಮಾಡೆಲ್ ನತಾಶಾ ಸ್ಟಾಂಕೋವಿಕ್ ( Natasa Stankovic )​ ತಮ್ಮ ನಾಲ್ಕು ವರ್ಷಗಳ ದಾಂಪತ್ಯ ಜೀವನಕ್ಕೆ ಪೂರ್ಣ ವಿರಾಮ ಘೋಷಿಸಿದ್ದಾರೆ. ಜುಲೈ 18ರಂದು ಸಾಮಾಜಿಕ ಜಾಲತಾಣದ ಮೂಲಕ ಇಬ್ಬರು ತಮ್ಮ ವಿಚ್ಛೇದನವನ್ನು ಖಚಿತಪಡಿಸುವ ಮೂಲಕ ಡಿವೋರ್ಸ್​ ವದಂತಿಗಳು ನಿಜ ಎಂದು ಒಪ್ಪಿಕೊಂಡರು. ಡಿವೋರ್ಸ್​ ಬೆನ್ನಲ್ಲೇ ನತಾಶಾ ದೇಶ ತೊರೆದಿದ್ದಾರೆ ಎಂಬ ಸುದ್ದಿಯಾಯಿತು. ಇತ್ತ ಹಾರ್ದಿಕ್​ ಪಾಂಡ್ಯ ಕೂಡ ಕ್ರಿಕೆಟ್​ನಲ್ಲಿ ಬಿಜಿಯಾದರು. ಇದರ ನಡುವೆ ಹಾರ್ದಿಕ್​ ಪಾಂಡ್ಯ ಅವರು ಬ್ರಿಟಿಷ್​ ಗಾಯಕಿ ಮತ್ತು ನಟಿ ಜಾಸ್ಮಿನ್​ ವಾಲಿಯಾ ಜತೆ ಡೇಟಿಂಗ್​ ಮಾಡುತ್ತಿದ್ದಾರೆ ಎಂಬ ವದಂತಿ ಹರದಾಡಿತು ಮತ್ತು ಆ ಸುದ್ದಿ ತಣ್ಣಗಾಯಿತು.

ತಾಜಾ ಸುದ್ದಿ ಏನೆಂದರೆ, ಪಾಂಡ್ಯ ಮಾಜಿ ಪತ್ನಿ ನತಾಶಾಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಸರ್ಬಿಯಾ ದೇಶದಿಂದ ಹಿಂದಿರುಗಿದ ನಂತರ ಫಿಟ್​ನೆಶ್​ ಕೋಚ್​, ನಟ ಹಾಗೂ ಮಾಡೆಲ್​ ಅಲೆಕ್ಸಾಂಡರ್​ ಅಲೆಕ್ಸ್ ಜೊತೆ ನತಾಶಾ ಸಮಯ ಕಳೆಯುತ್ತಿದ್ದಾರೆ. ಕೆಲವೊಮ್ಮೆ ಜಿಮ್‌ನಲ್ಲಿ ಮತ್ತು ಕೆಲವೊಮ್ಮೆ ಈಜುಕೊಳದಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ಅಲೆಕ್ಸಾಂಡರ್​ ಇತ್ತೀಚೆಗಷ್ಟೇ ತಮ್ಮ ಇನ್​ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಪೋಸ್ಟ್​ ಮಾಡಿದ್ದಾರೆ. ವಿಡಿಯೋದಲ್ಲಿ ನತಾಶಾ ಈಜುಕೊಳದಲ್ಲಿ ತೇಲುವ ಗೊಂಬೆಯ ಮೇಲೆ ವಿಶ್ರಾಂತಿ ಪಡೆಯುತ್ತಿದ್ದಾರೆ. ಅಲೆಕ್ಸಾ ಹಿಂದಿನಿಂದ ಬಂದು ನತಾಶಾಳನ್ನು ನೀರಿಗೆ ಕೆಡವುತ್ತಾರೆ. ಇದ್ದಕ್ಕಿದ್ದಂತೆ ನೀರಿಗೆ ಬಿದ್ದ ನತಾಶಾ ಶಾಕ್​ಗೆ ಒಳಗಾಗಿರುವ ದೃಶ್ಯ ವಿಡಿಯೋದಲ್ಲಿದೆ.

ವಿಡಿಯೋ ಕುರಿತು ಪ್ರತಿಕ್ರಿಯಿಸಿರುವ ನತಾಶಾ ನಗುತ್ತಿರುವ ಎಮೋಜಿಗಳನ್ನು ಹಂಚಿಕೊಂಡಿದ್ದಾರೆ. ಅಲೆಕ್ಸಾರನ್ನು ತನ್ನ ಸಹೋದರನೆಂದು ಭಾವಿಸುತ್ತೇನೆಂದು ನತಾಶಾ ಅನೇಕ ಸಂದರ್ಭದಲ್ಲಿ ಹೇಳಿದ್ದಾರೆ. ಅಲೆಕ್ಸಾ ಕೂಡ ಸೆರ್ಬಿಯಾದವರು. ಅವರು ಭಾರತದಲ್ಲಿ ಫಿಟ್ನೆಸ್ ತರಬೇತುದಾರ ಮತ್ತು ಮಾಡೆಲ್​ ಆಗಿ ಕೆಲಸ ಮಾಡುತ್ತಿದ್ದಾರೆ.

ವಿಡಿಯೋ ನೋಡಿದ ನೆಟ್ಟಿಗರು ತರಹೇವಾರಿ ಕಾಮೆಂಟ್​ಗಳ ಮೂಲಕ ಹಾರ್ದಿಕ್​ ಪಾಂಡ್ಯ ಕಾಲೆಳೆಯುತ್ತಿದ್ದಾರೆ. ಹಾರ್ದಿಕ್​ ಪಾಂಡ್ಯ ಮತ್ತೊಂದು ಅಕೌಂಟ್​ನಿಂದ ಈ ವಿಡಿಯೋ ನೋಡುತ್ತಿರುತ್ತಾರೆ ಎಂದು ನೆಟ್ಟಿಗರೊಬ್ಬರು ಕಾಮೆಂಟ್​ ಮಾಡಿದ್ದಾರೆ. ಒಂದು ಮೂಲೆಯಲ್ಲಿ ಕುಳಿತು ಹಾರ್ದಿಕ್​ ಅಳುತ್ತಿರುತ್ತಾರೆ, ನತಾಶಾ ನಡೆ ಸರಿಯಿಲ್ಲ ಎಂದೆಲ್ಲ ಕಾಮೆಂಟ್​ ಮಾಡಿದ್ದಾರೆ. ಇನ್ನು ಕೆಲವರು ನತಾಶಾ ಬೆಂಬಲಕ್ಕೆ ನಿಂತಿದ್ದು, ಆತ ಆಕೆಯ ಸಹೋದರ ಏನೇನೋ ಕಾಮೆಂಟ್​ ಮಾಡಬೇಡಿ ಎಂದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net