ಮಗನ ಬರ್ತಡೇ ಪಾರ್ಟಿಯಲ್ಲಿ ಹೃದಯಾಘಾತದಿಂದ ತಾಯಿ ಸಾವು; ಆಘಾತಕಾರಿ ವಿಡಿಯೋ ವೈರಲ್​

Heart Attack
Published on

ಅಹಮದಾಬಾದ್: ಇತ್ತೀಚಿನ ವರ್ಷಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿಗೆ ಜನರು ಬಲಿಯಾಗುತ್ತಿದ್ದು, ಮಹಿಳೆಯರು ಹಾಗೂ ಯುವಕರು ಹೆಚ್ಚು ಎಂದು ಹೇಳಿದರೆ ತಪ್ಪಾಗಲಾರದು. ಆಘಾತಕಾರಿ ಘಟನೆಯೊಂದರಲ್ಲಿ ಮಹಿಳೆಯೊಬ್ಬರು ತಮ್ಮ ಮಗನ ಬರ್ತ್​​ಡೇ ಪಾರ್ಟಿಯಲ್ಲಿ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಗುಜರಾತ್​ನ ವಲ್ಸಾದ್​ ಜಿಲ್ಲೆಯಲ್ಲಿ ನಡೆದಿದೆ.

ಮೃತರನ್ನು ಯಾಮಿನಿಬೆನ್​ ಎಂದು ಗುರುತಿಸಲಾಗಿದ್ದು, ತಮ್ಮ ಮಗ ಗೌರಿಕ್​ನ ಬರ್ತ್​ಡೇ ಸೆಲೆಬ್ರೇಷನ್​ನಲ್ಲಿ ಸಂಬಂಧಿಕರು ಹಾಗೂ ಸ್ನೇಹಿತರೊಂದಿಗೆ ಭಾಗಿಯಾಗಿದ್ದರು. ಈ ವೇಳೆ ಯಾಮಿನಿಬೆನ್​ ಹೃದಯಾಘಾತವಾಗಿ ದಿಢೀರ್​ ಎಂದು ಕುಸಿದುಬಿದ್ದು ಮೃತಪಟ್ಟಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್​ ಆಗಿದೆ.

ವೈರಲ್​ ಆಘಿರುವ ವಿಡಿಯೋ ನೋಡುವುದಾದರೆ ಸ್ನೇಹಿತರು ಹಾಗೂ ಸಂಬಂಧಿಕರೊಂದಿಗೆ ಮಾತನಾಡುತ್ತಿರುವ ಯಾಮಿನಿಬೆನ್​ ತಮ್ಮ ಮಗನನ್ನು ಇನೊಬ್ಬರ ಕೈಗೆ ಕೊಡುತ್ತಾರೆ. ಬಳಿಕ ಅಲ್ಲಿದ್ದವರ ಜೊತೆ ಮಾತನಾಡುತ್ತಿರುವ ಯಾಮಿನಿ ವೇದಿಕೆ ಇಳಿಯಲು ಮುಂದಾದಾಗ ದಿಢೀರ್​ ಎಂದು ಕುಸಿದು ಬೀಳುತ್ತಾರೆ. ಕೂಡಲೇ ಯಾಮಿನಿ ಅವರನ್ನು ಪತಿ ಹಾಗೂ ಅಲ್ಲಿದ್ದವರು ಆಸ್ಪತ್ರೆಗೆ ಕರೆದೊಯ್ದಿದ್ದು, ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಹೃದಯಾಘಾತಕ್ಕೆ ಅನೇಕರು ಬಲಿಯಾಗುತ್ತಿದ್ದು, ಮಹಿಳೆಯರು, ಯುವಕರು ಹಾಗೂ ಮಕ್ಕಳು ಹೆಚ್ಚು ಎಂದರೆ ತಪ್ಪಾಗಲಾರದು. ಗುಜರಾತ್​ನ ಈ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಕಂಬನಿ ಮಿಡಿದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net