ಕೋವಿಡ್​ ಆಸ್ಪತ್ರೆ ಎದುರಲ್ಲೇ ಒದ್ದಾಡಿ ಪ್ರಾಣಬಿಟ್ಟ ಮಹಿಳೆ

Man Death 29 Feb 20
Published on

ಯಾದಗಿರಿ: ಕೋವಿಡ್​ ಆಸ್ಪತ್ರೆ ಎದುರಲ್ಲೇ ಮಹಿಳೆಯೊಬ್ಬರು ಒದ್ದಾಡಿ ಪ್ರಾಣಬಿಟ್ಟ ಅಮಾನವೀಯ ಘಟನೆ ಬುಧವಾರ ನಗರದಲ್ಲಿ ನಡೆದಿದೆ.

ಶಹಾಪುರ ತಾಲೂಕಿನ ಸಗರ ಗ್ರಾಮದ 48 ವರ್ಷದ ಮಹಿಳೆ ಕೆಲ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ಮಂಗಳವಾರ ಶಹಾಪುರ ತಾಲೂಕಾಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ವೆಂಟಿಲೇಟರ್​ ವ್ಯವಸ್ಥೆ ಇಲ್ಲದ ಕಾರಣ ಬುಧವಾರ ಆಂಬುಲೆನ್ಸ್​ ಮೂಲಕ ಯಾದಗಿರಿಯ ಮುದ್ನಾಳ ತಾಂಡಾ ಸಮೀಪದಲ್ಲಿನ ಕೋವಿಡ್​ ಆಸ್ಪತ್ರೆಗೆ ಕರೆತರಲಾಗಿತ್ತು. ಸಕಾಲಕ್ಕೆ ಆಸ್ಪತ್ರೆಯಲ್ಲಿ ವೈದ್ಯರು ಸಿಗದ ಹಿನ್ನೆಲೆಯಲ್ಲಿ ಮಹಿಳೆ ಆಂಬುಲೆನ್ಸ್​ನಲ್ಲೇ ನರಳಾಡಿ ಪ್ರಾಣಬಿಟ್ಟರು.

ಆಂಬುಲೆನ್ಸ್​ನಲ್ಲಿ ಉಸಿರಾಟದ ಸಮಸ್ಯೆಯಿಂದ ಪ್ರಾಣ ಬಿಟ್ಟಿದ್ದಾಳೆ ಎಂದು ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೃತಪಟ್ಟ ನಂತರ ಮಹಿಳೆಯ ಸ್ವಾಬ್​ ಟೆಸ್ಟ್​ ಮಾಡಿದ್ದು, ಕರೊನಾ ಪಾಸಿಟಿವ್​ ದೃಢಪಟ್ಟಿದೆ ಎಂದು ತಿಳಿದು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net