ತಲೆಯ ಮೇಲೆ ಗ್ಯಾಸ್ ಸಿಲಿಂಡರ್​ ಹೊತ್ತು ಸಖತ್​​ ಸ್ಟೆಪ್ಸ್​​ ಹಾಕಿದ ಮಹಿಳೆ; ವಿಡಿಯೋ ವೈರಲ್​..!

cylindermix
Published on

ಮಹಿಳೆಯೊಬ್ಬರು ಗ್ಯಾಸ್ ಸಿಲಿಂಡರ್ ಅನ್ನು ತಲೆಯ ಮೇಲೆ ಇಟ್ಟುಕೊಂಡು ನೃತ್ಯ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿಬನ ವೈರಲ್​ ಆಗಿದೆ. ಈಕೆ ಭಾರವಾದ ಸಿಲಿಂಡರ್​ ಎತ್ತಿರೋದು ಮಾತ್ರವಲ್ಲ. ಅದರ ಜೊತೆಗೆ ಒಂಟಿ ಕಾಲಿನಲ್ಲಿ ನಿಂತುಕೊಂಡು ಹೆಜ್ಜೆ ಹಾಕಿದ್ದಾರೆ. ಸದ್ಯ ಈ ವಿಡಿಯೋ ನೆಟ್ಟಿಗರ ಹುಬ್ಬೇರಿಸಿದ್ದು, ಮಹಿಳೆಯನ್ನ ನೆಟ್ಟಿಗರು ಈಕೆ ಸೂಪರ್​ಮ್ಯಾನ್​ ಅಲ್ಲ ಸೂಪರ್​ ವುಮೆನ್​ ಎಂದು ಕರೆದಿದ್ದಾರೆ.

ತಲೆಯ ಮೇಲೆ ಗ್ಯಾಸ್ ಸಿಲಿಂಡರ್ ಹೊತ್ತು, ಯಾವುದೇ ಆಯಾಸವಿಲ್ಲದೇ ಹೆಜ್ಜೆ ಹಾಕೋದನ್ನ ನೋಡಿ ಜನರು ನಾನಾ ಕಾಮೆಂಟ್​​ ಮಾಡಿದ್ದಾರೆ. ಮೊದಲಿಗೆ ಸಿಲಿಂಡರ್​​ ಹೊತ್ತು ಹೆಜ್ಜೆ ಹಾಕಿದಾಕೆ, ನಂತರ, ಆ ಸಿಲಿಂಡರ್ ತನ್ನ ತಲೆಯ ಮೇಲೆ ಇರುವಾಗಲೇ ಅವಳು ಸ್ಟೀಲ್ ಕಂಟೇನರ್ ಮೇಲೆ ನಿಂತು ಸ್ಟೆಪ್ಸ್​​​ ಹಾಕಿದ್ದಾರೆ. ಇಂತಹ ಸಾಹಸಕಾರಿ ಡ್ಯಾನ್ಸ್​ ಮಾಡೋಕೆ ಯಾರೂ ಹೋಗಬಾರದು. ಇದು ಡೇಂಜರಸ್​​ ಎಂದು ಸಾಕಷ್ಟು ಮಂದಿ ಕಾಮೆಂಟ್​​ ಮಾಡಿದ್ದಾರೆ.

ನೀವು ಇನ್ನೇನು ಡ್ಯಾನ್ಸ್​​ ಮುಗಿದೇ ಹೋಯಿತು ಅನ್ನುವಷ್ಟರಲ್ಲಿ, ಆಕೆ ಒಂಟಿ ಕಾಲಲ್ಲಿ ನಿಂತುಕೊಂಡು ಹೆಜ್ಜೆ ಹಾಕಿರೋ ಸ್ಟೆಪ್ಸ್​​ ಮತ್ತಷ್ಟು ಭಯಾನಕವಾಗಿದೆ. ಯಾಕಂದ್ರೆ ಸಿಲಿಂಡರ್​ ಒಂದು ಬಾರಿ ಹೊತ್ತುಕೊಂಡು ಮನೆಯೊಳಗೆ ಇಡೋದೇ ಕಷ್ಟಕರ ಆದ್ರೆ ಈ ಮಹಿಳೆ ಹೀಗೆ ಡ್ಯಾನ್ಸ್​​ ಮಾಡುತ್ತಿರುವುದು ಹೇಗೆ ಎಂದು ನೆಟ್ಟಿಗರು ಕಾಮೆಂಟ್​​ ಮಾಡಿದ್ದಾರೆ.

ಈ ರೀತಿಯಾಗಿ ಬೇಡದ ಸಾಹಸಗಳನ್ನು ಮನೆಯಲ್ಲಿ ಏಕೆ ಮಾಡುವುದು ಮತ್ತು ಏಆದರೂ ಹೆಚ್ಚುಕಮ್ಮಿಯಾಗಿ ನಿಮ್ಮ ಕುಟುಂಬದವರಿಗೆ ಏಕೆ ತೊಂದರೆ ಕೊಡಬೇಕು ಎಂದು ಮತ್ತೋರ್ವ ವ್ಯಕ್ತಿ ಕಾಮೆಂಟ್​​ ಮಾಡಿದ್ದಾರೆ.

ಯಾರೂ ಇಂತಹ ಕೆಲಸಗಳನ್ನು ಮಾಡಬಾರದು" ಎಂದು ಮತ್ತೊಬ್ಬ ವ್ಯಕ್ತಿ ಕಾಮೆಂಟ್​​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net