

Cheetah: ಇತ್ತೀಚೆಗೆ ನಾವು ಸಾಮಾಜಿಕ ಜಾಲತಾಣದಲ್ಲಿ ಹುಲಿಯನ್ನು ಮುದ್ದಾಡುವುದು, ಹಾವಿನ ಬಳಿ ಕಚ್ಚಿಸಿಕೊಳ್ಳುವುದು ಹೀಗೆ ಅನೇಕ ಬಗೆಯ ವೈರಲ್ ವಿಡಿಯೋಗಳನ್ನು ನೋಡಿದ್ದೇವೆ. ಆದರೆ ಇದೀಗ ಮಹಿಳೆಯೊಬ್ಬಳು ಚಿರತೆಯ ಜೊತೆ ಮುದ್ದಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಲಿಸಾ ಟೋರಾ ಜಾಕ್ವೆಲಿನ್ ಕೈಟೋಸಾಹೊ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ, ಬೆಕ್ಕಿನ ಮರಿಯಂತೆ ಚಿರತೆಯನ್ನು ಮಹಿಳೆ ಮುದ್ದಾಡಿದ್ದಾಳೆ. ಚಿರತೆಯ ಕುತ್ತಿಗೆಯನ್ನು ನಿಧಾನಕ್ಕೆ ಮಹಿಳೆ ಸವರಿದ ನಂತರ ಚಿರತೆಯು ಕೂಡ ತನ್ನ ಮುಖದಿಂದ ಮಹಿಳೆಯ ಮುಖವನ್ನು ಸವರುತ್ತದೆ. ಈ ವಿಡಿಯೋ ಹೃದಯಸ್ಪರ್ಶಿಯಾಗಿದ್ದು, ನೆಟ್ಟಿಗರನ್ನು ಬೆರಗುಗೊಳಿಸಿದೆ.
ಇಲ್ಲಿದೆ ನೋಡಿ ವಿಡಿಯೋ
ನೆಟ್ಟಿಗರ ಪ್ರತಿಕ್ರಿಯೆ ಈ ವಿಡಿಯೋ ಈಗಾಗಲೇ 200,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ, ಅನೇಕ ಜನರು ತಮ್ಮ ಕಾಮೆಂಟ್‌ಗಳಲ್ಲಿ ವಿವಿಧ ರೀತಿಯ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಒಬ್ಬ ವೀಕ್ಷಕ , "ಧೈರ್ಯಕ್ಕಿಂತ ಹೆಚ್ಚಾಗಿ, ಎಲ್ಲಾ ರೀತಿಯ ಪ್ರಾಣಿಗಳನ್ನು ಪ್ರೀತಿಸಲು ಮತ್ತು ಅವುಗಳಿಗೆ ಸಮಯವನ್ನು ಕಂಡುಕೊಳ್ಳಲು ಸಾಕಷ್ಟು ಧೈರ್ಯ ಮತ್ತು ಭಕ್ತಿ ಬೇಕು. ಅದ್ಭುತ. ನೀವು ಸ್ಫೂರ್ತಿ." ಎಂದು ಬರೆದಿದ್ದಾರೆ. ಇನ್ನೊಬ್ಬ ನೆಟ್ಟಿಗ "ಇದು ಹುಚ್ಚುತನ ಆದರೆ ಮುದ್ದಾಗಿದೆ!" ಎಂದು ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ. (ಏಜೆನ್ಸೀಸ್)