ವಿದ್ಯಾರ್ಥಿನಿಯ ವೇಷದಲ್ಲಿ 3 ತಿಂಗಳು ಕಾಲೇಜಿಗೆ ಹೋದ ಲೇಡಿ ಕಾನ್​​ಸ್ಟೇಬಲ್! ಯಾವ ಕೇಸ್ ಬಗೆಹರಿಸೋಕೆ?

Woman Cop Posed As College Student For three Months To Crack Ragging Case
Published on

ಭೋಪಾಲ್: ಕಾಲೇಜಿನಲ್ಲಿ ರ‍್ಯಾಗಿಂಗ್ ಹಾವಾಳಿ ಹೆಚ್ಚಾಗಿರುತ್ತದೆ. ಕಾಲೇಜಿನ ಆಡಳಿತ ಮಂಡಳಿ ಎಷ್ಟೇ ಪ್ರಯತ್ನ ಪಟ್ಟು, ಕಠಿಣ ನಿಯಮ ಹೇರಿದರೂ ರ‍್ಯಾಗಿಂಗ್ ಅನ್ನು ಮಾತ್ರ ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಕೊನೆಗೆ ವಿಧಿಯಿಲ್ಲದೆ ಪೊಲೀಸ್ ಠಾಣೆ ಮೆಟ್ಟಿಲೇರಬೇಕಾಗುತ್ತದೆ. ಈ ವೇಳೆ ರ‍್ಯಾಗಿಂಗ್ ತಡೆಯಲು ಪೊಲೀಸರು ಒಂದು ಉಪಾಯ ಹೂಡುತ್ತಾರೆ. ತಮ್ಮ ಇಲಾಖೆಯಲ್ಲಿರುವ ಯಂಗ್​ ಪೊಲೀಸ್ ಆಫೀಸರ್ ಒಬ್ಬನನ್ನು ಮಫ್ತಿಯಲ್ಲಿ ಕಾಲೇಜಿಗೆ ಕಳುಹಿಸುತ್ತಾರೆ. ಅಲ್ಲಿ ವಿದ್ಯಾರ್ಥಿಗಳ ನಡುವೆ, ವಿದ್ಯಾರ್ಥಿಯಂತೆಯೇ ಇರಲು ಸೂಚಿಸುತ್ತಾರೆ. ನಂತರ ಆಫೀಸರ್ ಅಲ್ಲೇ ಇದ್ದು ಸಮಸ್ಯೆಯನ್ನು ಬಗೆಹರಿಸುತ್ತಾರೆ. ಅರ್ರೇ... ಇದ್ಯಾವುದೋ ಸಿನಿಮಾ ಕಥೆಯಂತೆ ಇದ್ಯಲ್ಲಾ, ಅಂತ ಯೋಚಿಸಬಹುದು. ಹೌದು... ಇದು ಸಿನಿಮಾ ಕಥೆಯೇ. ಆದರೆ ಇಂತಹದ್ದೊಂದು ಪ್ರಸಂಗ ನಿಜವಾಗಿಯೂ ಘಟಿಸಿದರೆ ಹೇಗಿರಬಹುದಲ್ವಾ?

ಇಂದೋರ್‌ನ ಮಹಾತ್ಮಾ ಗಾಂಧಿ ಸ್ಮಾರಕ ವೈದ್ಯಕೀಯ ಕಾಲೇಜಿನಲ್ಲಿ ರ‍್ಯಾಗಿಂಗ್ ಹಾವಾಳಿ ಹೆಚ್ಚಾಗುತ್ತಿದೆ ಎಂದು ದೂರು ಕೇಳಿ ಬಂದಿತ್ತು. ಹೀಗಾಗಿ ರ‍್ಯಾಗಿಂಗ್ ವಿರುದ್ಧ ಕಾರ್ಯಾಚರಣೆಯಲ್ಲಿ ಶಾಲಿನಿ ಚೌಹಾಣ್ ಎಂಬ 24 ವರ್ಷದ ಮಧ್ಯಪ್ರದೇಶ ಪೊಲೀಸ್ ಇಲಾಖೆಯ ಕಾನ್​ಸ್ಟೇಬಲ್ ಒಬ್ಬರು ವಿದ್ಯಾರ್ಥಿನಿಯಂತೆ ಮಫ್ತಿಯಲ್ಲಿ ಕಾಲೇಜಿಗೆ ತೆರಳಿದ್ದಾರೆ.

ಶಾಲಿನಿ ಚೌಹಾಣ್ ನಿತ್ಯವೂ ಕಾಲೇಜಿಗೆ ಬರುತ್ತಿದ್ದಳು. ಆದರೆ ತರಗತಿಗೆ ಮಾತ್ರ ಹೋಗುತ್ತಿರಲಿಲ್ಲ. ಸ್ನೇಹಿತರೊಂದಿಗೆ ಹರಟೆ ಹೊಡೆಯುತ್ತಾ, ಕ್ಲಾಸ್ ಬಂಕ್ ಮಾಡಿ ಕ್ಯಾಂಟೀನ್​ನಲ್ಲಿ ಹರಟೆ ಹೊಡೆಯುತ್ತಿದ್ದಳು. ಈ ಮೂಲಕ ಶಾಲಿನಿ ಚೌಹಾಣ್ ರ‍್ಯಾಗಿಂಗ್ ನಡೆಯುತ್ತಿದ್ದುದರ ಬಗ್ಗೆ ಒಂದೊಂದೆ ಸಾಕ್ಷಿ ಕಲೆ ಹಾಕುತ್ತಿದ್ದಳು.

ರ‍್ಯಾಗಿಂಗ್​ನಲ್ಲಿ ತೊಡಗಿದ್ದವರನ್ನು ಸಾಕ್ಷಿ ಸಮೇತ ಹಿಡಿಯಲು ಮೂರು ತಿಂಗಳು ಕಾನ್​ಸ್ಟೇಬಲ್ ಶಾಲಿನಿ ವಿದ್ಯಾರ್ಥಿನಿಯ ಸೋಗಿನಲ್ಲಿ ಕಾಲೇಜಿಗೆ ತೆರಳಿದ್ದಾಳೆ. ನಂತರ ಅಲ್ಲಿದ್ದುಕೊಂಡೇ ತನ್ನ ಪೊಲೀಸ್ ಕೆಲಸ ಮಾಡಿ, ರ‍್ಯಾಗಿಂಗ್​ ಮಾಡಿ ತೊಂದರೆಕೊಡುತ್ತಿದ್ದ 11 ಜನ ವಿದ್ಯಾರ್ಥಿಗಳನ್ನು ಪತ್ತೆ ಮಾಡಿದ್ದಾರೆ. ಇದೀಗ ಈ ವಿದ್ಯಾರ್ಥಿಗಳನ್ನು ಮೂರು ಕಾಲೇಜು ಹಾಗೂ ಹಾಸ್ಟೆಲ್​ನಿಂದ ಅಮಾನತು ಮಾಡಿ, ಕಾಲೇಜು ಆಡಳಿತ ಮಂಡಳಿ ಆದೇಶ ಹೊರಡಿಸಿದೆ.

ರಹಸ್ಯ ಕಾರ್ಯಾಚರಣೆಯ ಕುರಿತು ಶಾಲಿನಿ ಚೌಹಾಣ್ ಮಾತನಾಡುತ್ತಾ, ಇನ್ಸ್‌ಪೆಕ್ಟರ್ ತೆಹಜೀಬ್ ಖಾಜಿ ನನಗೆ ಮಾರ್ಗದರ್ಶನ ನೀಡಿದರು. ನಾನು ಮೊದಲು ಕ್ಯಾಂಪನ್​ಗೆ ಭೇಟಿ ನೀಡಿ ಪರಿಶೀಲಿಸಿದೆ. ನಂತರ ವಿದ್ಯಾರ್ಥಿನಿಯ ಸೋಗಿನಲ್ಲಿ ಹೋಗಿ ರ‍್ಯಾಗಿಂಗ್​ನಲ್ಲಿ ತೊಡಗಿದ್ದವರನ್ನು ಪತ್ತೆ ಹೆಚ್ಚಿದೆ ಎಂದು ಹೇಳಿಕೊಂಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net