ಹಸಿ ಮೀನು ತಿಂದು ಗಂಟಲು ಕೆರೆತವೆಂದು ಆಸ್ಪತ್ರೆಗೆ ಹೋದ ಯುವತಿಗೆ ಕಾದಿತ್ತು ಭಾರಿ ಶಾಕ್​!

Japan Girl
Published on

ಟೊಕಿಯೋ: ಹಸಿ ಮೀನು ತಿಂದ ಮಹಿಳೆಯೊಬ್ಬಳ ಗಂಟಲು ಗ್ರಂಥಿಯಿಂದ ವೈದ್ಯರು ಜೀವಂತ ಹುಳು ತೆಗೆದಿರುವ ಘಟನೆ ಜಪಾನ್​ನಲ್ಲಿ ನಡೆದಿದೆ.

ಹೆಸರೇಳಲು ಇಚ್ಚಿಸಿದ 25 ವರ್ಷದ ಯುವತಿಯೊಬ್ಬಳು ರೆಸ್ಟೋರೆಂಟ್​ ಒಂದರಲ್ಲಿ ಹಸಿಮೀನು ಮಾಂಸ ತಿಂದಿದ್ದಳು. ಇದಾದ ಐದು ದಿನಗಳಲ್ಲೇ ಗಂಟಲು ಕೆರೆತ ಹಾಗೂ ಗಂಟಲು ಗ್ರಂಥಿಯಲ್ಲಿ ನೋವು ಕಾಣಿಸಿಕೊಂಡಿದೆ ಎಂದು ಕಳೆದ ಮಾರ್ಚ್​ನಲ್ಲಿ ವೈದ್ಯರ ಬಳಿ ತೆರಳಿದ್ದಳು.

ತಕ್ಷಣ ಪರಿಶೀಲಿಸಿದ ವೈದ್ಯರು ಯುವತಿಯ ಎಡಭಾಗದ ಗಂಟಲು ಗ್ರಂಥಿಯಲ್ಲಿ 1.5 ಇಂಚಿನ ಉದ್ದದ ಜೀವಂತೆ ಹುಳುವನ್ನು ಪತ್ತೆಹಚ್ಚಿದ್ದಾರೆ. ಮೀನನಲ್ಲಿ ಇದ್ದ ಹುಳು ತಿನ್ನುವಾಗ ಗಂಟಲಿನಲ್ಲಿ ಸಿಲುಕಿದೆ ಎಂದು ವೈದ್ಯರು ಶಂಕಿಸಿದ್ದಾರೆ.

ವೈದ್ಯರು ಚಿಮಟವನ್ನು ಬಳಸಿಕೊಂಡು ಯಶಸ್ವಿಯಾಗಿ ಹುಳುವನ್ನು ಹೊರತೆಗೆದಿದ್ದಾರೆ. ಹೊರತೆಗೆದಾಗಲೂ ಹುಳ ಆರಾಮವಾಗಿ ಓಡಾಡಿಕೊಂಡಿತ್ತು. ಅಂದಹಾಗೆ ಇಂತಹ ಹುಳುಗಳು ಮೀನಿನಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಹಸಿಯಾಗಿ ತಿಂದರೆ ಇಂತಹ ಅವಘಡ ಸಂಭವಿಸುತ್ತದೆ. ಹೀಗಾಗಿ ಮೀನನ್ನು ಚೆನ್ನಾಗಿ ಬೇಯಿಸಿ ಸೇವಿಸಬೇಕು ಎನ್ನುತ್ತಾರೆ ವೈದ್ಯರು.

ಸಾಮಾನ್ಯವಾಗಿ ಹುಳುಗಳು ಮಾನವನ ಕರುಳುಗಳಲ್ಲಿ ಜೀವಿಸುತ್ತವೆ. ಹೊಟ್ಟೆಯಲ್ಲಿ ಹುಳುಗಳಿಗೆ ಬೇಕಾಗುವ ಪೋಷಕಾಂಶಗಳು ದೊರೆಯುತ್ತವೆ. ನಿಧಾನಗತಿಯಾಗಿ ಬೆಳದು ಹೊಟ್ಟೆಯೊಳಗಡೆಯೇ ಹುಳುಗಳು ದಪ್ಪವಾಗುವ ಸಾಧ್ಯತೆ ಇವೆ. ಇವುಗಳಿಂದ ಸೋಂಕು ತಗುಲಿ ಭೇದಿ, ಚರ್ಮ ರೋಗ, ದೇಹದ ತೂಕ ಕಡಿಮೆ ಸೇರಿದಂತೆ ಅನೇಕ ಅನಾರೋಗ್ಯ ಸಮಸ್ಯೆಗೆ ಒಳಗಾಗುತ್ತೇವೆ ಎಂದು ವೈದ್ಯರು ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net