ಪ್ರಿಯಕರನನ್ನ ಮನೆಗೆ ಕರೆದು, ಪತಿ ಜೊತೆ ಸೇರಿ ಸ್ಕ್ರೂ​ಡ್ರೈವರ್​​ನಿಂದ ಚಿತ್ರಹಿಂಸೆ ನೀಡಿ ಕೊಲೆಗೈದ ಮಹಿಳೆ| Murder

Sambhal Murder
Published on

Murder: 45 ವರ್ಷದ ತನ್ನ ಪ್ರಿಯಕರನನ್ನು ಮನೆಗೆ ಕರೆಯಿಸಿಕೊಂಡು, ಪತಿ ಜೊತೆ ಸೇರಿ ಸ್ಕ್ರೂಡ್ರೈವರ್ ಮತ್ತು ಇಕ್ಕಳದಿಂದ ಚಿತ್ರಹಿಂಸೆ ನೀಡಿ ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಸಂಭಾಲ್​ನಲ್ಲಿ ಭಾನುವಾರ (ಆಗಸ್ಟ್​ 10) ನಡೆದಿದೆ.

ಅನೀಶ್ ಕೊಲೆಯಾದ ವ್ಯಕ್ತಿ. ನೆರೆ ಮನೆಯವರಾದ ರಯೀಸ್ ಅಹ್ಮದ್ ಮತ್ತು ಪತ್ನಿ ಸಿತಾರ ಕೊಲೆ ಮಾಡಿದ ದಂಪತಿ. ಆರೋಪಿ ದಂಪತಿಯನ್ನು ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಈ ಕುರಿತು ಮಾತನಾಡಿರುವ ಮೃತ ಅನೀಶ್ ತಂದೆ ಮುಸ್ತಾಕಿಮ್, "ಅನೀಶ್​ಗೆ ಈಗಾಗಲೇ ಮದುವೆ  ನಿಶ್ಚಯವಾಗಿದೆ. ವರ್ಷಗಳ ಹಿಂದೆ ಆರೋಪಿಗಳಿಗೆ ಆತ 7 ಲಕ್ಷ ರೂ. ಸಾಲ ನೀಡಿದ್ದ. ಅದನ್ನು ಕೇಳಲು ಪಕ್ಕದ ಮನೆಗೆ ಹೋಗಿದ್ದ. ಈ ವೇಳೆ ಎಷ್ಟು ಕ್ರೂರವಾಗಿ ಅವರು ನನ್ನ ಮಗನನ್ನು ಕೊಲೆ ಮಾಡಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ಕೈ ಕಾಲುಗಳನ್ನು ಮುರಿದು, ವಿವಸ್ತ್ರಗೊಳಿಸಿ ಚಿತ್ರಹಿಂಸೆ ನೀಡಿದ್ದಾರೆ. ಅಲ್ಲಿಂದ ತಪ್ಪಿಸಿಕೊಂಡು ನಮ್ಮ ಮನೆಗೆ ಬಂದಾಗ ಸಾವನ್ನಪ್ಪಿದ" ಎಂದು ಹೇಳಿದ್ದಾರೆ.

ಪ್ರಕರಣದ ಕುರಿತು ಮಾತನಾಡಿರುವ ಸಂಭಾಲ್ ಎಸ್​ಪಿ ರಾಜೇಶ್​ಕುಮಾರ್ ಶ್ರೀವಾಸ್ತವ, "ಅನೀಶ್ ಕೊಲೆಯಾದ ಬಗ್ಗೆ ತಡರಾತ್ರಿ ಮಾಹಿತಿ ಸಿಕ್ಕಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಳ್ಳುತ್ತೇವೆ. ನೆರೆಮನೆಯವರಾದ ರಯೀಸ್ ಅಹ್ಮದ್ ಮತ್ತು ಪತ್ನಿ ಸಿತಾರ ಇಬ್ಬರು ಸೇರಿ ಕ್ರೂರವಾಗಿ ಕೊಲೆ ಮಾಡಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ವಿಚಾರಣೆಯ ಸಮಯದಲ್ಲಿ ಮೃತ ಅನೀಶ್ ಜೊತೆ ಸಿತಾರ ಅಕ್ರಮ ಸಂಬಂಧ ಹೊಂದಿರುವುದು ನಮಗೆ ತಿಳಿದುಬಂದಿದೆ. ಸಂಚು ರೂಪಿಸಿ ಮನೆಗೆ ಕರೆದು ಕೊಲೆ ಮಾಡಿದ್ದಾರೆ. ಸಿತಾರ ಕೊಲೆ ಸಂಚಿನಲ್ಲಿ ಸೇರಲು ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net