ಹೆತ್ತ ಮಗುವನ್ನು ಮೂರು ಲಕ್ಷ ರೂಪಾಯಿಗೆ ಮಾರಾಟ ಮಾಡಿದ ತಾಯಿ ಅರೆಸ್ಟ್​!

child
Published on

ತಿರುವನಂತಪುರಂ: ನವಜಾತ ಶಿಶುವನ್ನು ದಂಪತಿಗಳಿಗೆ ಮಾರಾಟ ಮಾಡಿದ ಆರೋಪದ ಮೇಲೆ ಕೇರಳ ಪೊಲೀಸರು ಮಹಿಳೆ ಒಬ್ಬರನ್ನು ಬಂಧಿಸಿದ್ದಾರೆ.

ಘಟನೆ ಸಂಬಂಧ 36 ವರ್ಷದ ಮಹಿಳೆಯನ್ನು ವಶಕ್ಕೆ ಪಡೆಸಿರುವ ತಂಪನೂರು ಪೊಲೀಸರು ಮಕ್ಕಳ ಕಲ್ಯಾಣ ಸಮಿತಿ(CWC) ನೀಡಿದ ದೂರಿನ ಮೇರೆಗೆ ಕ್ರಮ ಕೈಗೊಳ್ಳಲಾಗಿದೆ.

ಶಿಶು ಮಾರಾಟ ಮಾಡಿದ ತಾಯಿ

ಶಿಶು ಮಾರಾಟ ಪ್ರಕರಣದಲ್ಲಿ ಬಂಧಿತರಾಗಿರುವ ಕಂಜಿರಂಕುಲಂ ಮೂಲದ ಮಹಿಳೆ ಹಸೂಗೂಸಿಗೆ ಸ್ವಂತ ತಾಯಿಯಾಗಿದ್ದು ತನ್ನ ಕರುಳಬಳ್ಳಿಯನ್ನು 3 ಲಕ್ಷ ರೂಪಾಯಿಗೆ ಮಾರಿಕೊಂಡಿದ್ದಾಳೆ.

baby birth

ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿ ಒಬ್ಬರು ಶಿಶು ಏಪ್ರಿಲ್​ ಮೊದಲ ವಾರದಲ್ಲಿ ಮಗು ಜನಿಸಿದ್ದು ಹುಟ್ಟಿದ ನಾಲ್ಕು ದಿನಗಳ ನಂತರ ಮಹಿಳೆ ಶಿಶುವನ್ನು ದಂಪತಿಗಳೊಬ್ಬರಿಗೆ ಮಾರಾಟ ಮಾಡಿದ್ದಾಳೆ.

ಮಗುವನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿಯ ಸುಪರ್ದಿಗೆ ವಹಿಸಲಾಗಿದ್ದು ಆರೈಕೆ, ಸುರಕ್ಷತೆಯನ್ನು ಇಲಾಖೆಯ ಅಧಿಕಾರಿಗಳು ನೋಡಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net