30ಕ್ಕೂ ಹೆಚ್ಚು ಬಾರಿ… ಈಕೆಯ ಕಾಮದಾಹಕ್ಕೆ ಅಪ್ರಾಪ್ತರೇ ಟಾರ್ಗೆಟ್! ತನಿಖೆಯಲ್ಲಿ ಭಯಾನಕ ಸಂಗತಿ ಬಯಲು

Woman arrested
Published on

ವಾಷಿಂಗ್ಟನ್​: ಅಪ್ರಾಪ್ತರ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಅಶ್ಲೀಲ ವಿಡಿಯೋಗಳನ್ನು ಹಂಚಿಕೆ ಮಾಡಿದ ಆರೋಪದ ಮೇಲೆ ಮಹಿಳೆಯೊಬ್ಬಳನ್ನು ಅಮೆರಿಕದಲ್ಲಿ ಬಂಧಿಸಲಾಗಿದೆ.

ಬಂಧಿತಳನ್ನು ಅಲ್ಯಾಸ್ಸಾ ಅನ್​ ಝಿಂಗರ್​ (23) ಎಂದು ಗುರುತಿಸಲಾಗಿದೆ. ಈಕೆ ಅಮೆರಿಕದ ನಿವಾಸಿ. 14 ವರ್ಷದ ಹುಡುಗಿಯಂತೆ ನಟಿಸುವ ಮೂಲಕ ಹುಡುಗರೊಂದಿಗೆ ಸಂಬಂಧವನ್ನು ಬೆಳೆಸುತ್ತಿದ್ದಳು. ಪೊಲೀಸರ ಪ್ರಕಾರ, ಬಾಲಕನ ಜತೆ 30ಕ್ಕೂ ಅಧಿಕ ಬಾರಿ ಲೈಂಗಿಕ ಕ್ರಿಯೆ ನಡೆಸಿದ ಮತ್ತು ಅಶ್ಲೀಲ ವಿಡಿಯೋಗಳನ್ನು ಕಳುಹಿಸಿದ ಆರೋಪದ ಮೇಲೆ ಕಳೆದ ನವೆಂಬರ್​ ತಿಂಗಳಲ್ಲಿ ಅಲ್ಯಾಸ್ಸಾಳನ್ನು ಬಂಧಿಸಲಾಗಿತ್ತು.

ಅಲ್ಯಾಸ್ಸಾ ಬಂಧನದ ಬಳಿಕ ಆಕೆಯ ವಿರುದ್ಧ ದೂರು ನೀಡಲು ನಾಲ್ವರು ಬಾಲಕರು ಮುಂದೆ ಬಂದಿದ್ದಾರೆ. ನಮ್ಮೊಂದಿಗೂ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿದ್ದರು ಎಂದು ಪೊಲೀಸರಿಗೆ ಬಹಿರಂಗಪಡಿಸಿದ್ದಾರೆ. ಝಿಂಗರ್ ತನ್ನ ಬಾಲಕರನ್ನು ತನ್ನೊಂದಿಗೆ ಲೈಂಗಿಕ ಸಂಭೋಗ ನಡೆಸಲು ಒತ್ತಾಯಿಸುತ್ತಿದ್ದಳು ಮತ್ತು ಅದನ್ನು ವಿಡಿಯೋ ರೆಕಾರ್ಡ್​ ಮಾಡಿಕೊಳ್ಳುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಝಿಂಗರ್ ಹೆಚ್ಚಾಗಿ 12 ರಿಂದ 15 ವರ್ಷ ವಯಸ್ಸಿನ ಹುಡುಗರನ್ನು ಗುರಿಯಾಗಿಸಿಕೊಂಡು ತನ್ನ ಕಾಮದ ಬಲೆಗೆ ಬೀಳಿಸುತ್ತಿದ್ದಳು. ಆಕೆಯಿಂದ ಇನ್ನಷ್ಟು ಮಕ್ಕಳು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆಯೇ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net